SHIVAMOGGA LIVE NEWS | 22 SEPTEMBER 2023
SHIKARIPURA : ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಸಬ್ ಇನ್ಸ್ಪೆಕ್ಟರ್ (Sub Inspector) ಕೊನೆಯುಸಿರೆಳೆದಿದ್ದಾರೆ. ಶಿಕಾರಿಪುರ ತಾಲೂಕು ನಳ್ಳಿನಕೊಪ್ಪ ಗ್ರಾಮದಲ್ಲಿ ಇವತ್ತು ಸಕಲ ಸರ್ಕಾರಿ ಗೌರವದೊಂದಿಗೆ ಅವರ ಅಂತ್ಯಕ್ರಿಯೆ ನೆರವೇರಲಿದೆ.
ಪಿಎಸ್ಐ ಜಗದೀಶ್ ನಾಯ್ಕ (37) ಅನಾರೋಗ್ಯದಿಂದ ಗುರುವಾರ ನಿಧನರಾಗಿದ್ದರು. ಕಲಬುರಗಿ ಜಿಲ್ಲೆಯ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಜನತಾ ದರ್ಶನಕ್ಕೆ ದಿನಾಂಕ, ಸ್ಥಳ ನಿಗದಿ, ಸಮಸ್ಯೆ ಹೇಳಿಕೊಳ್ಳಲು ಜನರಿಗಿದೆ ಮುಕ್ತ ಅವಕಾಶ
ಮೃತರಿಗೆ ಪತ್ನಿ, ತಂದೆ, ತಾಯಿ, ಒಬ್ಬ ಸಹೋದರ, ಇಬ್ಬರು ಸಹೋದರಿಯರು ಇದ್ದಾರೆ. ನಳ್ಳಿನಕೊಪ್ಪ ಗ್ರಾಮದಲ್ಲಿ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಲಿದೆ.
