SHIVAMOGGA LIVE NEWS | 22 SEPTEMBER 2023
SHIMOGA : ಹಳೆ ದ್ವೇಷದ ಹಿನ್ನೆಲೆ ಎರಡು ಗುಂಪುಗಳ ಮಧ್ಯೆ ಗಲಾಟೆಯಾಗಿ (Incident) ಐವರಿಗೆ ಚಾಕು ಇರಿಯಲಾಗಿದೆ. ಶಿವಮೊಗ್ಗದ ಆಲ್ಕೊಳ ಸರ್ಕಲ್ ಸಮೀಪ ಎಲ್ಐಸಿ ಕಚೇರಿ ಬಳಿ ಮಧ್ಯರಾತ್ರಿ ಘಟನೆ ಸಂಭವಿಸಿದೆ.
ಪವನ್ ಮತ್ತು ಕಿರಣ್ ಎಂಬ ಸ್ನೇಹಿತರ ಮಧ್ಯೆ ವೈಷಮ್ಯವಿತ್ತು. ಇದೆ ವಿಚಾರವಾಗಿ ಕಳೆದ ರಾತ್ರಿ ನೇತಾಜಿ ಸರ್ಕಲ್ನಲ್ಲಿ ಗಲಾಟೆಯಾಗಿದೆ. ಇದೆ ವೇಳೆ ಪವನ್ ಮತ್ತು ಆತನ ಜೊತೆಗಿದ್ದವರು, ಕಿರಣ್ ಮತ್ತು ಆತನ ಸ್ನೇಹಿತರ ಮೇಲೆ ಚಾಕುವಿನಿಂದ ದಾಳಿ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಬಸ್ಸಿಗಾಗಿ ಕಾದು ಕಾದು ನಿದ್ರೆಗೆ ಜಾರಿದ ಯುವಕ, ಎಚ್ಚರವಾದಾಗ ಕಾದಿತ್ತು ಆಘಾತ
ಗಾಯಾಳುಗಳನ್ನು ಕೂಡಲೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ತುಂಗಾ ನಗರ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
