ಶಿವಮೊಗ್ಗ ಲೈವ್.ಕಾಂ | 21 ಮಾರ್ಚ್ 2019
ಗ್ರಾಮ ಪಂಚಾಯತಿ ಮಟ್ಟವೇ ಟಾರ್ಗೆಟ್. ಡಿ.ಕೆ.ಶಿವಕುಮಾರ್ಗಾಗಿ ವೇಯ್ಟಿಂಗ್. ಮೈತ್ರಿ ಪಕ್ಷದ ಅಭ್ಯರ್ಥಿಯ ಪ್ರಚಾರ ಫುಲ್ ಜೋರು.

ಇವತ್ತು ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಜೆಡಿಎಸ್ ಅಭ್ಯರ್ಥಿ ಮಧು ಬಂಗಾರಪ್ಪ, ಸಚಿವ ಡಿ.ಕೆ.ಶಿವಕುಮಾರ್ ಅವರ ಜೊತೆ ಒಂದು ಸುತ್ತು ಸಭೆ ನಡೆಸಲಾಗಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸಭೆಯಲ್ಲಿದ್ದರು. ಚುನಾವಣೆ ಗೆಲುವಿಗೆ ನೆರವು ನೀಡುವುದಾಗಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ ಎಂದರು.
ಪಂಚಾಯಿತಿ ಮಟ್ಟದಲ್ಲಿ ಪ್ರಚಾರ
ಉಪ ಚುನಾವಣೆ ಸಂದರ್ಭ, ಸಮಯ ಕಡಿಮೆ ಇತ್ತು. ಹಾಗಾಗಿ ದೊಡ್ಡ ಮಟ್ಟದಲ್ಲಿ ಪ್ರಚಾರ ನಡೆಸಲು ಸಾಧ್ಯವಾಗಲಿಲ್ಲ. ಆದರೆ ಈ ಬಾರಿ ಗ್ರಾಮ ಪಂಚಾಯಿತಿ ಮಟ್ಟದವರೆಗೂ ಹೊಗಿ ಪ್ರಚಾರ ನಡೆಸಲು ಯೋಜಿಸಲಾಗಿದೆ ಎಂದರು. ಇನ್ನು, ಕಳೆದ ಬಾರಿ ನಮ್ಮ ಪಾಲಿನ ಮೂರುವರೆ ಲಕ್ಷದಷ್ಟು ಮತಗಳು ಬರಲಿಲ್ಲ. ಆದರೆ ಈ ಬಾರಿ ಆ ಮತಗಳು ಕೂಡ ಸಿಗಲಿವೆ ಎಂದು ಭರವಸೆ ವ್ಯಕ್ತಪಡಿಸಿದರು.

ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಎಸ್.ಸುಂದರೇಶ್ ಸೇರಿದಂತೆ ಹಲವರು ಸುದ್ದಿಗೋಷ್ಠಿಯಲ್ಲಿದ್ದರು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200
ಸುದ್ದಿಗಾಗಿ ಮೊಬೈಲ್ ನಂಬರ್ | 9964634494
ಈ ಮೇಲ್ | [email protected]