ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
![ಮಾಮ್’ಕೋಸ್ ಚುನಾವಣೆ, ಶಿವಮೊಗ್ಗ ಜಿಲ್ಲೆಯಾದ್ಯಂತ ಮತದಾನ ಬಿರುಸು, ಕೊನೆ ಕ್ಷಣದಲ್ಲಿ ಆರು ಸಾವಿರ ಮತದಾರರ ಹೆಚ್ಚಳ 1 87150925 809206726225906 5843094214962839552 o.jpg? nc cat=109& nc ohc=brlI19IvBS0AX 1 MtC& nc ht=scontent.fblr11 1](https://scontent.fblr11-1.fna.fbcdn.net/v/t1.0-0/p640x640/87150925_809206726225906_5843094214962839552_o.jpg?_nc_cat=109&_nc_ohc=brlI19IvBS0AX_1_MtC&_nc_ht=scontent.fblr11-1.fna&_nc_tp=6&oh=04a922d293922fe79c1642fb055bebe6&oe=5EBF488D)
ಶಿವಮೊಗ್ಗ ಲೈವ್.ಕಾಂ | SHIMOGA | 22 ಫೆಬ್ರವರಿ 2020
ಮಲೆನಾಡು ಅಡಕೆ ಮಾರಾಟ ಸಹಕಾರ ಸಂಘದ (ಮ್ಯಾಮ್ಕೋಸ್) ನಿರ್ದೇಶಕರ ಸ್ಥಾನಕ್ಕೆ ಇವತ್ತು ಚುನಾವಣೆ ನಡೆಯುತ್ತಿದೆ. 19 ನಿರ್ದೇಶಕರ ಸ್ಥಾನಕ್ಕೆ ಸಹಕಾರ ಭಾರತಿ ಮತ್ತು ರಾಷ್ಟ್ರೀಯ ಸಹಕಾರಿ ಪ್ರತಿಷ್ಠಾನದ ನಡುವೆ ಜಿದ್ದಾಜಿದ್ದಿ ಇದೆ.
ಜಾಹೀರಾತು ಶಿವಮೊಗ್ಗದಲ್ಲಿ ಮನೆ ಸಾಲ ಮತ್ತು ಇತರೆ ಲೋನ್ಗಳನ್ನು ಪಡೆಯುವುದು ಈಗ ಸುಲಭ. ಕರೆ ಮಾಡಿ 9972194422
ಮೂರು ಜಿಲ್ಲೆಯ ಒಂಭತ್ತು ಮತಗಟ್ಟೆಯಲ್ಲಿ ಮತದಾನ ನಡೆಯುತ್ತಿದೆ. ಶಿವಮೊಗ್ಗ ಜಿಲ್ಲೆಯ ಎಲ್ಲ ತಾಲೂಕುಗಳಲ್ಲು ಮತದಾನ ಕೇಂದ್ರವಿದೆ. ಇನ್ನು ದಾವಣಗೆರೆಯ ಚನ್ನಗಿರಿ, ಚಿಕ್ಕಮಗಳೂರಿನ ತರೀಕೆರೆ, ಕೊಪ್ಪ, ಶೃಂಗೇರಿಯಲ್ಲಿ ಬೆಳಗ್ಗೆಯಿಂದ ಮತದಾನ ನಡೆಯುತ್ತಿದೆ. ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದ್ದು, ರಾತ್ರಿ 8 ಗಂಟೆ ಬಳಿಕ ಮತ ಎಣಿಕೆ ಕಾರ್ಯ ನಡೆಯಲಿದೆ.
ಅಭ್ಯರ್ಥಿಗಳ ನಡುವೆ ತೀವ್ರ ಜಿದ್ದಾಜಿದ್ದಿ
ನಿರ್ದೇಶಕರ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಸಂಘಟನೆ, ಬಿಜೆಪಿಯೇತರ ಪಕ್ಷಗಳ ನೇತೃತ್ವದ ರಾಷ್ಟ್ರೀಯ ಸಹಕಾರಿ ಪ್ರತಿಷ್ಠಾನದ ವತಿಯಿಂದ ತಲಾ 19 ಅಭ್ಯರ್ಥಿಗಳು ಕಣಕ್ಕಿಳಿಸಲಾಗಿದೆ. ಇನ್ನು ಯಾವುದೇ ಪಕ್ಷ ಮತ್ತು ಸಂಘಟನೆಯ ಬೆಂಬಲವಿಲ್ಲದ ಪಕ್ಷೇತರ ಅಭ್ಯರ್ಥಿಗಳು ಸೇರಿ ಒಟ್ಟು 40 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. ಸಹಕಾರ ಭಾರತಿ ಮತ್ತು ರಾಷ್ಟ್ರೀಯ ಸಹಕಾರಿ ಪ್ರತಿಷ್ಠಾನದ ಅಭ್ಯರ್ಥಿಗಳ ನಡುವೆ ತೀವ್ರ ಜಿದ್ದಾಜಿದ್ದಿ ಇದೆ. ಈ ಚುನಾವಣೆ ಪಕ್ಷದ ಚಿಹ್ನೆ ಆಧಾರದಲ್ಲಿ ನಡೆಯುವುದಿಲ್ಲ. ಬದಲಾಗಿ ಬೇರೆ ಬೇರೆ ಚಿಹ್ನೆಗಳನ್ನು ನೀಡಲಾಗುತ್ತದೆ.
![ಮಾಮ್’ಕೋಸ್ ಚುನಾವಣೆ, ಶಿವಮೊಗ್ಗ ಜಿಲ್ಲೆಯಾದ್ಯಂತ ಮತದಾನ ಬಿರುಸು, ಕೊನೆ ಕ್ಷಣದಲ್ಲಿ ಆರು ಸಾವಿರ ಮತದಾರರ ಹೆಚ್ಚಳ 2 87458059 1058539451174141 3133382120802615296 n.png? nc cat=109& nc ohc=R5qWqLzPenkAX 6Qq0E& nc ht=scontent.fblr11 1](https://scontent.fblr11-1.fna.fbcdn.net/v/t1.0-9/87458059_1058539451174141_3133382120802615296_n.png?_nc_cat=109&_nc_ohc=R5qWqLzPenkAX-6Qq0E&_nc_ht=scontent.fblr11-1.fna&oh=c76a6ec778433e4cd2b3e6e6724997b3&oe=5EFCA0F8)
ಮತಗಟ್ಟೆ ಬಳಿ ಅಂತಿಮ ಕಸರತ್ತು
ಕಳೆದ ಚುನಾವಣೆಯಲ್ಲಿ ಸಹಕಾರ ಭಾರತಿ ಸಂಘಟನೆಯ 19 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು. ಈ ಬಾರಿಯು ಕ್ಲೀನ್ ಸ್ವೀಪ್ ಮಾಡಬೇಕು ಅನ್ನುವುದು ಸಹಕಾರಿ ಭಾರತಿಯ ಲೆಕ್ಕಾಚಾರ. ಆದರೆ ಈ ಲೆಕ್ಕಾಚಾರ ಉಲ್ಟಾ ಮಾಡಬೇಕು ಅಂತಾ ರಾಷ್ಟ್ರೀಯ ಸಹಕಾರಿ ಪ್ರತಿಷ್ಠಾನ ಸಿದ್ಧತೆ ಮಾಡಿಕೊಂಡಿದೆ. ಇದೇ ಕಾರಣಕ್ಕೆ ಎರಡು ಸಂಘಟನೆಯ ಪ್ರಮುಖರು ಅಭ್ಯರ್ಥಿಗಳ ಪರವಾಗಿ ಮತದಾನ ಕೇಂದ್ರದ ಹೊರಗೆ ಅಂತಿಮ ಹಂತದಲ್ಲಿ ಪ್ರಚಾರ ನಡೆಸುತ್ತಿದ್ದಾರೆ.
![ಮಾಮ್’ಕೋಸ್ ಚುನಾವಣೆ, ಶಿವಮೊಗ್ಗ ಜಿಲ್ಲೆಯಾದ್ಯಂತ ಮತದಾನ ಬಿರುಸು, ಕೊನೆ ಕ್ಷಣದಲ್ಲಿ ಆರು ಸಾವಿರ ಮತದಾರರ ಹೆಚ್ಚಳ 3 86716747 1058539467840806 6841756471575707648 n.png? nc cat=104& nc ohc=AkNrf4jn9lQAX Vtg4H& nc ht=scontent.fblr11 1](https://scontent.fblr11-1.fna.fbcdn.net/v/t1.0-9/86716747_1058539467840806_6841756471575707648_n.png?_nc_cat=104&_nc_ohc=AkNrf4jn9lQAX-Vtg4H&_nc_ht=scontent.fblr11-1.fna&oh=b1b57c1266eb99573c9128052f607288&oe=5EC16B32)
ಕಡೇ ಕ್ಷಣದಲ್ಲಿ ಡಬಲ್ ಆದ ಮತದಾರರು
ಮೂರು ಜಿಲ್ಲೆಯಿಂದ ಮ್ಯಾಮ್ಕೋಸ್’ಗೆ 26 ಸಾವಿರ ಸದಸ್ಯರಿದ್ದಾರೆ. ಆದರೆ ಮತದಾನಕ್ಕೆ ಅರ್ಹರಾಗಿರುವುದು ಕೇವಲ 12,975 ಮಂದಿ. ಕಡೆ ಕ್ಷಣದಲ್ಲಿ 6 ಸಾವಿರ ಮತದಾರರು ಹೆಚ್ಚಳವಾಗಿದ್ದಾರೆ. ಇಲ್ಲವಾಗಿದ್ದರೆ ಕೇವಲ 6 ಸಾವಿರ ಸದಸ್ಯರು ಮಾತ್ರ ಮತದಾನಕ್ಕೆ ಅರ್ಹತೆ ಪಡೆಯುತ್ತಿದ್ದರು.
![ಮಾಮ್’ಕೋಸ್ ಚುನಾವಣೆ, ಶಿವಮೊಗ್ಗ ಜಿಲ್ಲೆಯಾದ್ಯಂತ ಮತದಾನ ಬಿರುಸು, ಕೊನೆ ಕ್ಷಣದಲ್ಲಿ ಆರು ಸಾವಿರ ಮತದಾರರ ಹೆಚ್ಚಳ 4 87245830 1058539504507469 5650421333524217856 n.png? nc cat=105& nc ohc=FDuSctFkuEUAX rKtUz& nc ht=scontent.fblr11 1](https://scontent.fblr11-1.fna.fbcdn.net/v/t1.0-9/87245830_1058539504507469_5650421333524217856_n.png?_nc_cat=105&_nc_ohc=FDuSctFkuEUAX_rKtUz&_nc_ht=scontent.fblr11-1.fna&oh=2dd3032507622f74892b527002f6e83d&oe=5EB95175)
ಚುನಾವಣೆ ಘೋಷಣೆಯಾದಾಗ ಕೇವಲ 6 ಸಾವಿರ ಮತದಾರರು ಮತ ಚಲಾಯಿಸಲು ಅರ್ಹತೆ ಹೊಂದಿದ್ದರು. ನಾಲ್ಕು ಗುಂಪು ಸದಸ್ಯರು ಹೈಕೋರ್ಟ್ ಮೊರೆ ಹೋಗಿದ್ದರಿಂದ, ಚುನಾವಣೆ ಹಿಂದಿನ ದಿನ ಹೈಕೋರ್ಟ್ ಆದೇಶದ ಹಿನ್ನೆಲೆ, 6 ಸಾವಿರ ಹೆಚ್ಚುವರಿ ಮತದಾರರಿಗೆ ಮತ ಚಲಾಯಿಸುವ ಹಕ್ಕು ನೀಡಲಾಗಿತು. ಇದರಿಂದ ಚುನಾವಣಾ ಕಣ ಮತ್ತಷ್ಟು ಕುತೂಹಲ ಮೂಡಿಸಿದೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]
ಶಿವಮೊಗ್ಗ ಲೈವ್.ಕಾಂ