ಶಿವಮೊಗ್ಗ ನಗರದ ಈಗಿನ ಟಾಪ್‌ 10 ನ್ಯೂಸ್‌ | 14 ಜೂನ್‌ 2023 | ಎಲ್ಲೆಲ್ಲಿ ಏನೇನಾಗಿದೆ?

ಸೈಟ್‌ ಮಾರಾಟಕ್ಕಿದೆ

ಶಿವಮೊಗ್ಗದ ಬಿದಿರೆಯಲ್ಲಿ ಸೈಟ್‌ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559

ಶಿವಮೊಗ್ಗದಲ್ಲಿ ಬಿ.ಇಡಿ ಕೋರ್ಸ್‌ಗೆ ಪ್ರವೇಶಾತಿ ಆರಂಭ

⇒ ಪೂರ್ತಿ ಡಿಟೇಲ್ಸ್‌ಗೆ ಇಲ್ಲಿ ಕ್ಲಿಕ್‌ ಮಾಡಿ

SHIVAMOGGA LIVE | 14 JUNE 2023 | FATAFAT NEWS

ರಾಷ್ಟ್ರೀಯ ಶಾಸಕರ ಸಮ್ಮೇಳನಕ್ಕೆ ಡಿ.ಎಸ್.ಅರುಣ್

MLC DS Arun Shimoga

SHIMOGA : ಜೂ.15ರಂದು ಮುಂಬೈನ ಜಿಯೋ ಕನ್ವೆನ್ಷನ್‌ FATAFAT NEWS 1 jpgಸೆಂಟರ್‌ನಲ್ಲಿ ರಾಷ್ಟ್ರೀಯ ಶಾಸಕರ ಸಮ್ಮೇಳನ ಆಯೋಜಿಸಲಾಗಿದೆ. ವಿಧಾನ ಪರಿಷತ್‌ ಸದಸ್ಯ ಡಿ.ಎಸ್.ಅರುಣ್‌ ಅವರು ಈ ಸಮ್ಮೇಳನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ರಾಷ್ಟ್ರೀಯ ಪ್ರಾಮುಖ್ಯತೆ ಮತ್ತು ರಾಷ್ಟ್ರ ನಿರ್ಮಾಣದ ವಿಷಯಗಳ ಕುರಿತು ರಚನಾತ್ಮಕ ಸಂವಾದ ನಡೆಯಲಿದೆ. ಪ್ರಮುಖ ವಿಚಾರಗಳು ಚರ್ಚೆಯಾಗಲಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಡಿ.ಎಸ್.ಅರುಣ್‌ ತಿಳಿಸಿದ್ದಾರೆ.


‌ವಿದ್ಯುತ್‌ ದರ ಹೆಚ್ಚಳ ಕೈಬಿಡುವಂತೆ ಒತ್ತಾಯ

Mathura Gopinath Shimoga

SHIMOGA : ವಿದ್ಯುತ್‌ ದರ ಹೆಚ್ಚಳ ನಿರ್ಧಾರವನ್ನು ಸರ್ಕಾರ ಕೈ FATAFAT NEWS 2 jpgಬಿಡಬೇಕು ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.‌ಗೋಪಿನಾಥ್‌ ಆಗ್ರಹಿಸಿದ್ದಾರೆ. ಅವೈಜ್ಞಾನಿಕವಾಗಿ ದರ ಪರಿಷ್ಕರಿಸಲಾಗಿದೆ. ಇದರಿಂದ ಎಲ್ಲ ವರ್ಗದ ಜನರಿಗೆ ಸಮಸ್ಯೆಯಾಗಲಿದೆ. ಕೈಗಾರಿಕೆಗಳು ತೀವ್ರ ಸಂಕಷ್ಟಕ್ಕೆ ಸಿಲುಕಲಿವೆ. ತೈಲ ಬೆಲೆ ಏರಿಕೆಯಿಂದಾಗಿ ವಾಣಿಜ್ಯೋದ್ಯಮ ಸಂಕಷ್ಟಕ್ಕೆ ಸಿಲುಕಿದೆ. ವಿದ್ಯುತ್‌ ದರ ಹೆಚ್ಚಳದಿಂದ ಮತ್ತಷ್ಟು ಸಮಸ್ಯೆಯಾಗಲಿದೆ ಎಂದು ಗೋಪಿನಾಥ್‌ ತಿಳಿಸಿದ್ದಾರೆ.


ಉಚಿತ ಪ್ರಯಾಣ, ಸರ್ಕಾರಕ್ಕೆ ಅಭಿನಂದನೆ

Congress-Shimoga-President-HS-Sundaresh-Press-Meet

SHIMOGA : ಕಾಂಗ್ರೆಸ್‌ ಪಕ್ಷ ಘೋಷಿಸಿದ್ದ ಗ್ಯಾರಂಟಿ ಯೋಜನೆಗಳ ಪೈಕಿ FATAFAT NEWS 3 jpgಶಕ್ತಿ ಯೋಜನೆಯನ್ನು ಜಾರಿಗೊಳಿಸಿದ ಸರ್ಕಾರಕ್ಕೆ ಪಕ್ಷದ ಜಿಲ್ಲಾಧ್ಯಕ್ಷ ಹೆಚ್.ಎಸ್.ಸುಂದರೇಶ್‌ ಅಭಿನಂದನೆ ಸಲ್ಲಿಸಿದ್ದಾರೆ. ಶಕ್ತಿ ಯೋಜನೆಯಿಂದಾಗಿ ಮಹಿಳೆಯರು ಕೆಎಸ್‌ಆರ್‌ಟಿಸಿ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣ ಮಾಡುತ್ತಿದ್ದಾರೆ. ಕಾಂಗ್ರೆಸ್‌ ಸರ್ಕಾರ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿದೆ. ಬಿಜೆಪಿ ಸರ್ಕಾರ ಪ್ರಣಾಳಿಕೆಯಲ್ಲಿ ಘೋಷಿಸಿದ ಯಾವ ಭರವಸೆಯನ್ನೂ ಈಡೇರಿಸಿಲ್ಲ. ಜನರ ಖಾತೆಗೆ 15 ಲಕ್ಷ ರೂ. ಹಣ ಬಂದಿಲ್ಲ. 2 ಕೋಟಿ ಉದ್ಯೋಗ ಸೃಷ್ಟಿ ಭರವಸೆ ಹುಸಿಯಾಗಿದೆ ಎಂದು ಸುಂದರೇಶ್‌ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.


‘ಬೊಮ್ಮನಕಟ್ಟೆಗೆ ಕೆಎಸ್‌ಆರ್‌ಟಿಸಿ ಬಸ್‌ ಬೇಕುʼ

SHIMOGA : ಬೊಮ್ಮನಕಟ್ಟೆಯ ಆಶ್ರಯ ಬಡಾವಣೆಗೆ ಕೆಎಸ್‌ಆರ್‌ಟಿಸಿ FATAFAT NEWS 4 jpgಬಸ್‌ ಮಂಜೂರು ಮಾಡಿಸುವಂತೆ ಬಡಾವಣೆಯ ಹಿತರಕ್ಷಣಾ ಸಮಿತಿ ವಿತಿಯಿಂದ ಶಾಸಕ ಎಸ್‌.ಎನ್.ಚನ್ನಬಸಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು. ಇಲ್ಲಿ ಬಡತನ ರೇಖೆಗಿಂತಲು ಕಡಿಮೆ ಇರುವವರು ಹೆಚ್ಚಿದ್ದಾರೆ. ಕೆಲಸಕ್ಕೆ ತೆರಳುವವರು, ಶಾಲೆ, ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ಬಸ್‌ ಇಲ್ಲದೆ ಪರದಾಡುತ್ತಿದ್ದಾರೆ ಎಂದು ಆರೋಪಿಸಿದರು. ಕೆಎಸ್‌ಆರ್‌ಟಿಸಿ ಬಸ್‌ ಬಿಡುವಂತೆ ಜಿಲ್ಲಾಧಿಕಾರಿ, ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಸೂಚಿಸುವಂತೆ ಮನವಿ ಮಾಡಿದರು.


ಟೈಲರ್‌ ಮಕ್ಕಳಿಗೆ ವಿದ್ಯಾಸಿರಿ ಜಾರಿಗೊಳಿಸಿ

SHIMOGA : ಟೈಲರ್‌ಗಳ ಮಕ್ಕಳಿಗೆ ವಿದ್ಯಾಸಿರಿ ಯೋಜನೆ FATAFAT NEWS 5 jpgಜಾರಿಗೊಳಿಸಬೇಕು ಎಂದು ಆಗ್ರಹಿಸಿ ಟೈಲರ್‌ ಅಸೋಸಿಯೇಷನ್‌ ವತಿಯಿಂದ ಶಾಸಕ ಎಸ್‌.ಎನ್.ಚನ್ನಬಸಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು. ಟೈಲರ್‌ಗಳು ಅಸಂಘಟಿತ ವಲಯಕ್ಕೆ ಸೇರುತ್ತಾರೆ. ಹಿಂದಿನ ಸರ್ಕಾರ ಟೈಲರ್‌ಗಳ ಮಕ್ಕಳಿಗೆ ವಿದ್ಯಾಸಿರಿ ಯೋಜನೆ ಜಾರಿಗೊಳಿಸುವುದಾಗಿ ಘೋಷಿಸಿತ್ತು. ಪ್ರಸಕ್ತ ವರ್ಷದಿಂದಲೆ ಯೋಜನೆ ಜಾರಿಗೊಳಿಸಿ ಎಂದು ಮನವಿ ಸಲ್ಲಿಸಲಾಯಿತು. ಪ್ರಮುಖರಾದ ಜೆ.ಎಸ್. ಸುಬ್ರಹ್ಮಣ್ಯ, ರವೀಂದ್ರ, ಡಿ.ಎಸ್. ಪರಮೇಶ್ವರಪ್ಪ ಮೊದಲಾದವರಿದ್ದರು.


ಗಾಂಧಿ ಬಜಾರ್‌ನಲ್ಲಿ ಬೈಕ್‌ ಕಳ್ಳರ ಹಾವಳಿ

bike theft reference image

SHIMOGA : ಗಾಂಧಿ ಬಜಾರ್‌ನಲ್ಲಿ ಬೈಕ್‌ ಕಳ್ಳರ ಹಾವಳಿ FATAFAT NEWS 6 jpgಮುಂದುವರೆದಿದೆ. ಇಲ್ಲಿನ ಮಥುರ ಹೊಟೇಲ್‌ ಮುಂದೆ ಪಾರ್ಕಿಂಗ್‌ ಸ್ಥಳದಲ್ಲಿ ನಿಲ್ಲಿಸಿದ್ದ ಸ್ಪ್ಲೆಂಡರ್‌ ಪ್ಲಸ್‌ ಬೈಕ್‌ ಕಳ್ಳತನವಾಗಿದೆ. ಶೆಟ್ಟಿಹಳ್ಳಿಯ ಪ್ರಮೋದ್‌ ಎಂಬುವವರಿಗೆ ಸೇರಿದ ಬೈಕನ್ನು ಪರಿಚಿತ ಮಂಜುನಾಥ್‌ ಎಂಬುವವರು ತೆಗೆದುಕೊಂಡು ಬಂದಿದ್ದರು. ಹೊಟೇಲ್‌ ಮುಂದೆ ಬೈಕ್‌ ನಿಲ್ಲಿಸಿ ಗಾಂಧಿ ಬಜಾರ್‌ನಲ್ಲಿ ತರಕಾರಿ ಮತ್ತು ಔಷಧ ತರಲು ಹೋಗಿದ್ದರು. ಮರಳಿ ಬಂದಾಗ ಬೈಕ್‌ ಇರಲಿಲ್ಲ. ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಮಾಂಗಲ್ಯ ಸರ, ನಗದು ಕಳ್ಳತನ, ಚಾಲಕನ ಮೇಲೆ ಅನುಮಾನ

SHIMOGA : ಗಾಂಧಿ ನಗರದ ಮನೆಯೊಂದರಲ್ಲಿ ಇಟ್ಟಿದ್ದ ಬಂಗಾರದ FATAFAT NEWS 7 jpgಮಾಂಗಲ್ಯ ಸರ ಮತ್ತು ನಗದು ಕಳ್ಳತನವಾಗಿದೆ ಎಂದು ಆರೋಪಿಸಲಾಗಿದೆ. ರತ್ನಪ್ರಭಾ ಎಂಬುವವರಿಗೆ ಸೇರಿದ 3.40 ಲಕ್ಷ ರೂ. ಮೌಲ್ಯದ ಬಂಗಾರದ ಮಾಂಗಲ್ಯ ಸರ. ಮನೆಯಲ್ಲಿ ಆಯಾ ಕೆಲಸ ಮಾಡುತ್ತಿದ್ದ  ಯಶೋದಮ್ಮ ಎಂಬುವವರ ಪರ್ಸ್‌ನಲ್ಲಿದ್ದ  9300 ರೂ. ನಗದು ಕಳ್ಳತನವಾಗಿದೆ. ಮನೆಯಲ್ಲಿ ಕಾರು ಚಾಲಕನಾಗಿದ್ದ ಚೇತನ್‌ ಎಂಬಾತ ಘಟನೆ ನಡೆದ ದಿನದಿಂದ ಕೆಲಸಕ್ಕೆ ಗೈರಾಗಿದ್ದು ಫೋನ್‌ ಸ್ವಿಚ್‌ ಆಫ್‌ ಬರುತ್ತಿದೆ ಎಂದು ಆರೋಪಿಸಲಾಗಿದೆ. ಆತನ ಮೇಲೆ ಅನುಮಾನ ವ್ಯಕ್ತಪಡಿಸಿ ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

COMING UP jpg


ಗಾಂಜಾ ಸೇವಿಸಿದ್ದ‌ ಯುವಕ ಅರೆಸ್ಟ್

SHIMOGA : ನಾಗೇಂದ್ರ ಕಾಲೋನಿಯ ರೈಲ್ವೆ ಗೇಟ್‌ ಬಳಿ FATAFAT NEWS 8 jpgಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ ಯುವಕನಿಗೆ ಪೊಲೀಸರು ಮೆಡಿಕಲ್‌ ಟೆಸ್ಟ್‌ ಮಾಡಿಸಿದ್ದಾರೆ. ಈ ವೇಳೆ ಗಾಂಜಾ ಸೇವನೆ ಮಾಡಿರುವುದು ದೃಢವಾದ ಹಿನ್ನೆಲೆ ಬಂಧಿಸಲಾಗಿದೆ. ಪವನ್‌ ಕುಮಾರ್‌ (30) ಬಂಧಿತ. ಸಬ್‌ ಇನ್ಸ್‌ಪೆಕ್ಟರ್‌ ಬಿ.ಸಿ.ಸುನಿಲ್‌ ರಾತ್ರಿ ಗಸ್ತು ತಿರುಗುವಾಗ ಯುವಕನನ್ನು ವಶಕ್ಕೆ ಪಡೆಯಲಾಗಿತ್ತು. ಗಾಂಜಾ ಸೇವನೆ ದೃಢವಾದ ಹಿನ್ನೆಲೆ ಪವನ್‌ ಕುಮಾರ್‌ ವಿರುದ್ಧ ವಿನೋಬನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ‌

COMING UP1 jpg


ಮನೆ ಬಾಗಿಲಿನ ಲಾಕ್‌ ಮುರಿದು ಬೆಳ್ಳಿ ವಸ್ತುಗಳ ಕಳ್ಳತನ

SHIMOGA : ಮನೆಯಲ್ಲಿ ಯಾರೂ ಇಲ್ಲದ ವೇಳೆ ಬಾಗಿಲಿನ ಲಾಕ್‌ FATAFAT NEWS 9 jpgಮುರಿದು ಕಳ್ಳತನ ಮಾಡಲಾಗಿದೆ. ವಿನೋಬನಗರ ಪೊಲೀಸ್‌ ಠಾಣೆ ವ್ಯಾಪ್ತಿಯ ಕನಕನಗರದ 3ನೇ ಅಡ್ಡರಸ್ತೆಯಲ್ಲಿರುವ ಚಂದ್ರಪ್ಪ ಎಂಬುವವರ ಮನೆಯಲ್ಲಿ ಕಳ್ಳತನವಾಗಿದೆ. 65 ಸಾವಿರ ಮೌಲ್ಯದ ಬೆಳ್ಳಿ ವಸ್ತುಗಳನ್ನು ಕಳ್ಳರು ಕದ್ದೊಯ್ದಿದ್ದಾರೆ. ಚಂದ್ರಪ್ಪ ಅವರ ಸಹೋದರನ ಮಗನ ಮದುವೆ ಹಿನ್ನೆಲೆ ಕುಟುಂಬದವರು ಹೊನ್ನಾಳಿಗೆ ತೆರಳಿದ್ದಾಗ ಘಟನೆ ಸಂಭವಿಸಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

House-Theft-in-Shimoga.


ಪ್ರಾಧ್ಯಾಪಕನ ಮನೆಯಲ್ಲಿ ಕಳ್ಳತನ

SHIMOGA : ಬಾಗಿಲಿನ ಇಂಟರ್‌ಲಾಕ್‌ ಮುರಿದು ಪ್ರಾಧ್ಯಾಪಕರೊಬ್ಬರ FATAFAT NEWS 10 jpgಮನೆಯಲ್ಲಿ ನಗದು, ಚಿನ್ನಾಭರಣ ಕಳ್ಳತನ ಮಾಡಲಾಗಿದೆ. ವಿನೋಬನಗರ ಪಿ ಅಂಡ್‌ ಟಿ ಕಾಲೋನಿಯಲ್ಲಿರುವ ಚಿಕ್ಕಮಗಳೂರಿನ ಐಡಿಎಸ್‌ಜಿ ಕಾಲೇಜು ಸಹಾಯಕ ಪ್ರಾಧ್ಯಾಪಕ ಮಂಜುನಾಥ್‌ ಎಂಬುವವರ ಮನೆಯಲ್ಲಿ ಕಳ್ಳತನವಾಗಿದೆ. ಮಂಜುನಾಥ್‌ ಅವರು ಕುಟುಂಬ ಸಹಿತ ಬೆಂಗಳೂರಿಗೆ ತೆರಳಿದ್ದಾಗ ಘಟನೆ ಸಂಭವಿಸಿದೆ. 20 ಸಾವಿರ ರೂ. ನಗದು, 20 ಸಾವಿರ ಮೌಲ್ಯದ ಚಿನ್ನಾಭರಣ ಕಳ್ಳತನವಾಗಿದೆ. ವಿನೋಬನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Shivamogga Live Editor Nitin Kaidotlu

 

Leave a Comment