ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIMOGA, 25 AUGUST 2024 : ರಾಜ್ಯಾದ್ಯಂತ ಅನರ್ಹ ಪಡಿತರ ಚೀಟಿ (Ration Card) ರದ್ದುಗೊಳಿಸುವ ಅಭಿಯಾನವನ್ನು ರಾಜ್ಯ ಸರ್ಕಾರ ಮುಂದುವರೆಸಿದೆ. ಈ ಮಧ್ಯೆ ಆರು ತಿಂಗಳಿಂದ ಪಡಿತರ ಪಡೆಯದವರ ಕಾರ್ಡುಗಳನ್ನು ರದ್ದುಗೊಳಿಸಲಾಗುತ್ತಿದೆ. ಇನ್ನೊಂದೆಡೆ ಅನರ್ಹರು ಕಾರ್ಡ್ ಕ್ಯಾನ್ಸಲ್ ಮಾಡಿಸುವಂತೆ ಗಡುವು ನೀಡಿದೆ.
ಶಿವಮೊಗ್ಗ ಜಿಲ್ಲೆಯಲ್ಲಿಯು ಅನರ್ಹ ಪಡಿತರ ಚೀಟಿ ರದ್ದುಗೊಳಿಸುವ ಕಾರ್ಯ ನಡೆಯುತ್ತಿದೆ. ಆಹಾರ ಇಲಾಖೆ ಅಂಕಿ ಅಂಶದ ಪ್ರಕಾರ, ಈ ವರ್ಷ ಜುಲೈನಲ್ಲಿ ಅತ್ಯಧಿಕ ರೇಷನ್ ಕಾಡ್ ರದ್ದಾಗಿದೆ.
ಎಷ್ಟು ರೇಷನ್ ಕಾರ್ಡ್ ಇದೆ?
ಆಹಾರ ಇಲಾಖೆ ಅಂಕಿ ಅಂಶದ ಪ್ರಕಾರ ಜಿಲ್ಲೆಯಲ್ಲಿ ಒಟ್ಟು 4.92 ಲಕ್ಷ ಪಡಿತರ ಚೀಟಿಗಳಿವೆ. ಈ ಪೈಕಿ 1,80,934 ಪಡಿತರ ಚೀಟಿಗಳು ನಗರ ಪ್ರದೇಶದಲ್ಲಿವೆ. ಗ್ರಾಮೀಣ ಭಾಗದಲ್ಲಿ 3,11,501 ಪಡಿತರ ಚೀಟಿಗಳಿವೆ. 16.78 ಲಕ್ಷ ಜನರು ಈ ಕಾರ್ಡುಗಳ ವ್ಯಾಪ್ತಿಗೆ ಒಳಪಡಲಿದ್ದಾರೆ.
ಅನರ್ಹರಿಗೆ ಪಡಿತರ ನೀಡದಂತೆ ತಡೆಯಲು ಸರ್ಕಾರ ಅಭಿಯಾನ ನಡೆಸುತ್ತಿದೆ. ಆ.31ರ ಒಳಗೆ ಪಡಿತರ ಚೀಟಿದಾರರ ಕುಟುಂಬದ ಸದಸ್ಯರು ಕಡ್ಡಾಯವಾಗಿ ಇ-ಕೆವೈಸಿ ಮಾಡಿಸಬೇಕು. ನ್ಯಾಯಬೆಲೆ ಅಂಗಡಿಗಳಲ್ಲೇ ಕೆವೈಸಿ ಮಾಡಿಸಲು ಸೂಚಿಸಲಾಗಿದೆ. ಇಲ್ಲವಾದಲ್ಲಿ ಪಡಿತರ ಚೀಟಿ ರದ್ದುಗೊಳಿಸಲು ಸರ್ಕಾರ ನಿರ್ಧರಿಸಿದೆ. ಇನ್ನೊಂದೆಡೆ ಶಿವಮೊಗ್ಗ ಜಿಲ್ಲೆಯಲ್ಲಿ ಈ ವರ್ಷ 866 ಪಡಿತರ ಚೀಟಿ ಕ್ಯಾನ್ಸಲ್ ಆಗಿವೆ. ಜನವರಿಯಲ್ಲಿ 134 ಕಾರ್ಡ್ ರದ್ದುಗೊಳಿಸಲಾಗಿದೆ. ಫೆಬ್ರವರಿಯಲ್ಲಿ 116, ಮಾರ್ಚ್ನಲ್ಲಿ 200, ಏಪ್ರಿಲ್ 6, ಮೇ 16, ಜೂನ್ 117, ಜುಲೈನಲ್ಲಿ 277 ಕಾರ್ಡುಗಳು ಕಾನ್ಸಲ್ ಆಗಿವೆ.ಈ ವರ್ಷ ಕ್ಯಾನ್ಸಲ್ ಆಗಿದ್ದೆಷ್ಟು?
ಬಿಪಿಎಲ್ ಕಾರ್ಡ್ಗೆ ಅರ್ಹತೆ ಏನು?
ಅರ್ಹರಾಗಿದ್ದರೂ ಬಿ.ಪಿ.ಎಲ್ ಪಡಿತರ ಚೀಟಿ ಹೊಂದಿರುವ ಕುಟುಂಬಗಳು ಹೆಚ್ಚಿವೆ. ಇಂತಹವರ ಪತ್ತೆ ಹೆಚ್ಚಿ ಕಾರ್ಡ್ ರದ್ದುಗೊಳಿಸಲಾಗುತ್ತಿದೆ. ಅಲ್ಲದೆ ದಂಡವನ್ನೂ ವಿಧಿಸಲಾಗುತ್ತಿದೆ. ಇನ್ನು, ಯಾರೆಲ್ಲ ಬಿಪಿಎಲ್ ಕಾರ್ಡ್ ಹೊಂದಬಹುದು ಎಂಬುದಕ್ಕೆ ಸರ್ಕಾರದ ಮಾನದಂಡವಿದೆ.
» ಮಾನದಂಡ 1 : ಕುಟುಂಬದ ವಾರ್ಷಿಕ ಆದಾಯ 1.20 ಲಕ್ಷ ರೂ.ಗಿಂತಲು ಕಡಿಮೆ ವರಮಾನ ಹೊಂದಿರಬೇಕು.
» ಮಾನದಂಡ 2 : ಗ್ರಾಮೀಣ ಭಾಗದಲ್ಲಿ ಮೂರು ಹೆಕ್ಟೇರ್ಗಿಂತಲು ಕಡಿಮೆ ಒಣ ಅಥವಾ ನೀರಾವರಿ ಜಮೀನು ಹೊಂದಿರುವವರು. ನಗರ ಪ್ರದೇಶದಲ್ಲಿ 1000 ಚದರ ಅಡಿಗಿಂತಲೂ ಕಡಿಮೆ ವಿಸ್ತೀರ್ಣದ ಸ್ವಂತ ಪಕ್ಕಾ ಮನೆ ಹೊಂದಿರುವವರು.
» ಮಾನದಂಡ 3 : ಜೀವನೋಪಾಯಕ್ಕೆ ಟ್ರಾಕ್ಟರ್, ಮ್ಯಾಕ್ಸಿ ಕ್ಯಾಬ್, ಟ್ಯಾಕ್ಸಿ ಹೊಂದಿರುವವರು ಅರ್ಹರು. ಸ್ವಂತ ಬಳಕೆಗೆ ನಾಲ್ಕು ಚಕ್ರದ ವಾಹನವಿದ್ದರೆ ಅವರು ಅರ್ಹರಲ್ಲ.
» ಮಾನದಂಡ 4 : ಸರ್ಕಾರಿ ಉದ್ಯೋಗಿಗಳು, ಆದಾಯ ತರಿಗೆ, ವೃತ್ತಿ ತೆರಿಗೆ ಪಾವತಿಸುವವರು ಬಿಪಿಎಲ್ ಕಾರ್ಡ್ಗೆ ಅರ್ಹರಲ್ಲ.
ಅರ್ಹರಲ್ಲದವರು ತಮ್ಮ ಕಾರ್ಡುಗಳನ್ನು ಹಿಂತಿರುಗಿಸಬೇಕು. ಇಲ್ಲವಾದಲ್ಲಿ ಅಂತಹವರ ವಿರುದ್ಧ ದಂಡ ವಿಧಿಸಲಾಗುತ್ತಿದೆ.
ಇದನ್ನೂ ಓದಿ ⇒ ಪಡಿತರ ಚೀಟಿದಾರರೆ ಗಮನಿಸಿ, ಆ.31 ಕೊನೆ ದಿನ, ತಪ್ಪಿದರೆ ಪಡಿತರ ಸಿಗಲ್ಲ
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422