ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | SHIMOGA NEWS | 17 ಜುಲೈ 2020
ಶಿವಮೊಗ್ಗ ಜಿಲ್ಲೆಯಲ್ಲಿ ಇವತ್ತು 60 ಮಂದಿಗೆ ಕರೋನ ಪಾಸಿಟಿವ್ ಬಂದಿದೆ. ಈ ಪೈಕಿ ಅತಿ ಹೆಚ್ಚು ಪ್ರಕರಣಗಳು ಶಿವಮೊಗ್ಗ ತಾಲೂಕಿನಲ್ಲೇ ದಾಖಲಾಗಿದೆ.

ಯಾವ್ಯಾವ ತಾಲೂಕಿನಲ್ಲಿ ಎಷ್ಟು ಕೇಸ್?
60 ಪಾಸಿಟಿವ್ ಪೈಕಿ ಶಿವಮೊಗ್ಗ ತಾಲೂಕಿನ 20 ಪ್ರಕರಣಗಳಿವೆ. ಭದ್ರಾವತಿಯ 5, ಸಾಗರದ 7, ಶಿಕಾರಿಪುರದ 18, ಹೊಸನಗರದ 2, ತೀರ್ಥಹಳ್ಳಿಯ 6, ಸೊರಬದ 1, ಚಿತ್ರದುರ್ಗದಿಂದ ಬಂದ ಒಬ್ಬರಿಗೆ ಸೋಂಕು ತಗುಲಿದೆ ಎಂದು ಜಿಲ್ಲಾಡಳಿತ ಬಿಡುಗಡೆ ಮಾಡಿರುವ ವರದಿಯಲ್ಲಿ ತಿಳಿಸಲಾಗಿದೆ. ಇದರಿಂದ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 762ಕ್ಕೆ ಏರಿಕೆಯಾಗಿದೆ.

ಮುನ್ನೂರಕ್ಕೂ ಹೆಚ್ಚು ಸ್ಯಾಂಪಲ್
ಜಿಲ್ಲೆಯಲ್ಲಿ ಇವತ್ತು 333 ಮಂದಿಗೆ ಗಂಟಲು ದ್ರವ ಪರೀಕ್ಷೆ ನಡೆಸಲಾಗಿದೆ. ಈಗಾಗಲೇ ಸಂಗ್ರಹವಾಗಿದ್ದ ಸ್ಯಾಂಪಲ್‍ಗಳ ಪೈಕಿ 268 ಮಂದಿಗೆ ನೆಗೆಟಿವ್ ರಿಪೋರ್ಟ್ ಬಂದಿದೆ. ಇದರಿಂದ ಒಟ್ಟು ಪರೀಕ್ಷೆಗೆ ಒಳಗಾದ 22,934 ಮಂದಿಯ ಪೈಕಿ 21,384 ಮಂದಿಗೆ ನೆಗೆಟಿವ್ ಬಂದಿರುವುದು ಸಮಾಧಾನದ ಸಂಗತಿ.
ಮತ್ತೊಂದೆಡೆ ಇವತ್ತು 37 ಸೋಂಕಿತರು ಗುಣವಾಗಿ ಮನೆಗೆ ಮರಳಿದ್ದಾರೆ. ಇದರಿಂದ ಈವರೆಗೂ ಗುಣವಾದವರ ಸಂಖ್ಯೆ 317ಕ್ಕೆ ಏರಿಕೆಯಾಗಿದೆ.
ಕಂಟೈನ್ಮೆಂಟ್ ಜೋನ್ ಸಂಖ್ಯೆ ಹೆಚ್ಚಳ
ಜಿಲ್ಲೆಯಾದ್ಯಂತ ಕೋವಿಡ್ 19 ಪ್ರಕರಣ ಹೆಚ್ಚಳವಾದಂತೆ ಕಂಟೈನ್ಮೆಂಟ್ ಜೋನ್‍ಗಳ ಸಂಖ್ಯೆಯು ಹೆಚ್ಚಳವಾಗಿದೆ. ಒಟ್ಟು ಕಂಟೈನ್ಮೆಂಟ್ ಜೋನ್‍ಗಳ ಸಂಖ್ಯೆ 236ಕ್ಕೆ ಏರಿಕೆಯಾಗಿದೆ. ಇನ್ನು, ಡೀನೋಟಿಫೈ ಆಗಿರುವ ಕಂಟೈನ್ಮಂಟ್ ಜೋನ್‍ಗಳ ಸಂಖ್ಯೆ 34ಕ್ಕೆ ಹೆಚ್ಚಳವಾಗಿದೆ.
ಸದ್ಯ ಶಿವಮೊಗ್ಗ ಜಿಲ್ಲೆಯಲ್ಲಿ 177 ಮಂದಿಗೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 236 ಮಂದಿಗೆ ಕೋವಿಡ್ ಕೇರ್ ಸೆಂಟರ್‍ನಲ್ಲಿ ಆರೈಕೆ ನಡೆಯುತ್ತಿದೆ. 19 ಸೋಂಕಿತರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಿಂದ ಈವರೆಗೂ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ 432 ಇದೆ.

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | shivamoggalive@gmail.com
LATEST NEWS
- ಮೈಸೂರು – ಶಿವಮೊಗ್ಗ ರೈಲು, ಎರಡು ದಿನ ಭಾಗಶಃ ರದ್ದು, ಯಾವಾಗ?

- ಮೂವರ ಮೇಲೆ ದಾಳಿ ಮಾಡಿದ್ದ ಚಿರತೆ ಅನುಮಾನಾಸ್ಪದ ಸಾವು, ಎಲ್ಲಿ?

- ಶಿವಮೊಗ್ಗ ಸಿಟಿಯಲ್ಲಿ ಭಾರಿ ಮಳೆ, ಹೊಳಲೂರು ಭಾಗದಲ್ಲಿ ಆಲಿಕಲ್ಲು ಸಹಿತ ವರ್ಷಧಾರೆ

- ಶಿವಮೊಗ್ಗದಲ್ಲಿ ದಾವಣಗೆರೆಗಿಂತಲು ದೊಡ್ಡ BSC ಶೋರೂಂ, ಏನೇನಿರುತ್ತೆ? ಯಾವಾಗ ಶುರು?

- ಇವತ್ತು ಸರಕು ಅಡಿಕೆ ಎಷ್ಟಿದೆ? ರಾಶಿ, ಗೊರಬಲು ಧಾರಣೆ ಹೇಗಿದೆ? – 23 ಮಾರ್ಚ್ 2026

About The Editor
ನಿತಿನ್ ಆರ್.ಕೈದೊಟ್ಲು
















