ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 10 DECEMBER 2022
ಶಿವಮೊಗ್ಗ : ಎಲೆ ಚುಕ್ಕೆ ರೋಗದ ಹೊಡೆತದಿಂದ ಸುಧಾರಿಸಿಕೊಳ್ಳಲಾಗದೆ ಒದ್ದಾಡುತ್ತಿರುವ ಅಡಕೆ ಬೆಳೆಗಾರರಿಗೆ ಧಾರಣೆ ಇಳಿಕೆಯಿಂದ ಮತ್ತೊಂದು ಪೆಟ್ಟು ಬಿದ್ದಿದೆ. ಕಳೆದ ಎರಡು ತಿಂಗಳಲ್ಲಿ ಅಡಕೆ ಧಾರಣೆ (adike rate decrease) ಕುಸಿತ ಕಾಣುತ್ತಿದೆ. ಈ ಬೆಳವಣಿಗೆ ಅಡಕೆ ಬೆಳೆಗಾರರಲ್ಲಿ ಆತಂಕ ಮೂಡಿಸಿದೆ.
ಶಿವಮೊಗ್ಗ ಮಾರುಕಟ್ಟೆಯಲ್ಲಿ ಅಡಕೆ ರೇಟ್ ಕುಸಿತ ಕಂಡಿದೆ. ಗೊರಬಲು, ಬೆಟ್ಟೆ, ರಾಶಿ ಅಡಕೆ ಧಾರಣೆಯಲ್ಲಿ ಇಳಿಕೆಯಾಗಿದೆ.
(adike rate decrease)
ಅಡಕೆ ರೇಟ್ ಕುಸಿತ
ರಾಶಿ ಅಡಕೆ ಅಡಕೆ ಬೆಲೆ ಕಳೆದ 2 ತಿಂಗಳಲ್ಲಿ ಸುಮಾರು 4 ಸಾವಿರ ರೂ. ಕುಸಿತ ಕಂಡಿದೆ. ಅಕ್ಟೋಬರ್.17ರಂದು ಕನಿಷ್ಠ ದರ 43,099 ರೂ. ಇದ್ದ ದರ ಅ.31ಕ್ಕೆ 44,009 ರೂ. ನ.15ರಂದು 44,009, ನ.30ರಂದು 43,669 ರೂ.ಗೆ ಇಳಿಕೆಯಾಗಿದೆ. ಡಿಸೆಂಬರ್ ಮಧ್ಯದಲ್ಲಿ 39,069 ರೂ.ಗೆ ಇಳಿಕೆಯಾಗಿದೆ.
ಇದನ್ನೂ ಓದಿ – ಎಲೆ ಚುಕ್ಕೆ ರೋಗ, ಅಡಕೆ ಗರಿ ಹಿಡಿದು ತೀರ್ಥಹಳ್ಳಿಯಲ್ಲಿ ಪಾದಯಾತ್ರೆ, ಸರ್ಕಾರದ ವಿರುದ್ಧ ಆಕ್ರೋಶ
ಶಿವಮೊಗ್ಗ ಮಾರುಕಟ್ಟೆಯಲ್ಲಿ ಕಳೆದ 2 ತಿಂಗಳಲ್ಲಿ ಬೆಟ್ಟೆ ಅಡಕೆ ಬೆಲೆ 7,400 ರೂ. ಕಡಿಮೆಯಾಗಿದೆ. ಅ.17ರಂದು ಕನಿಷ್ಠ ದರ 50,119 ರೂ. ಇತ್ತು. ಅ.31ಕ್ಕೆ 49,090 ರೂ.ಗೆ ಕುಸಿತ ಕಂಡಿತ್ತು. ನ.15ರಂದು 48,089 ರೂ.ಗೆ ಏರಿಕೆಯಾಗಿತ್ತು. ನ.30ಕ್ಕೆ 49,410 ರೂ.ಗೆ ಇಳಿಕೆಯಾಗಿದೆ. ಡಿಸೆಂಬರ್ ಮಧ್ಯ ಭಾಗದಲ್ಲಿ 42,699 ಸಾವಿರ ರೂ.ಗೆ ಕುಸಿದಿದೆ.
ಗೊರಬಲು ಅಡಕೆ ಕನಿಷ್ಠ ಧಾರಣೆ ಕಳೆದ ಎರಡು ತಿಂಗಳಲ್ಲಿ.
ಅಕ್ಟೋಬರ್ 17 | 17,009 |
ಅಕ್ಟೋಬರ್ 31 | 16,550 |
ನವೆಂಬರ್ 15 | 18,009 |
ನವೆಂಬರ್ 30 | 17,529 |
ಡಿಸೆಂಬರ್ 9 | 17,000 |
ನ್ಯೂ ವೆರೈಟಿ ಅಡಕೆಯ ಕನಿಷ್ಠ ದರ ಕಳೆದ 2 ತಿಂಗಳಲ್ಲಿ 8 ಸಾವಿರ ರೂ. ಕುಸಿತ ಕಂಡಿದೆ.
ಅಕ್ಟೋಬರ್ 17 | 47,159 |
ಅಕ್ಟೋಬರ್ 31 | 46,509 |
ನವೆಂಬರ್ 15 | 45,299 |
ನವೆಂಬರ್ 30 | 43,539 |
ಡಿಸೆಂಬರ್ 9 | 39,109 |
(adike rate decrease)
ಇಳುವರಿ ಕಡಿಮೆ, ದರವು ಕಡಿಮೆ
ಎಲೆ ಚುಕ್ಕೆ ರೋಗ ಮಲೆನಾಡಿನ ಅಡಕೆ ಬೆಳೆಗಾರರ ನಿರೀಕ್ಷೆಯನ್ನು ತಲೆಕೆಳಗಾಗಿಸಿದೆ. ರೋಗದ ಪರಿಣಾಮ ಮರಕ್ಕೆ ಸರಿಯಾದ ಪೋಷಕಾಂಶ ಲಭ್ಯವಾಗಿಲ್ಲ. ಹಾಗಾಗಿ ಇಳುವರಿ ಕುಸಿದಿದೆ. ಕೆಲವು ತೋಟಗಳಲ್ಲಿ ಶೇ.50ಕ್ಕಿಂತಲೂ ಕಡಿಮೆ ಇಳುವರಿಯಾಗಿದೆ. 40 ಕ್ವಿಂಟಾಲ್ ಅಡಕೆ ಬೆಳೆಯುತ್ತಿದ್ದವರಿಗೆ 10 ರಿಂದ 15 ಕ್ವಿಂಟಾಲ್ ಇಳುವರಿ ಸಿಕ್ಕಿದೆ.
ಇದನ್ನೂ ಓದಿ – ಅಡಕೆ ಸಾಗಣೆಗೆ 6 ಗೈಡ್ ಲೈನ್ ಪ್ರಕಟಿಸಿದ ಶಿವಮೊಗ್ಗ ಪೊಲೀಸ್, ಏನದು? ಕಾರಣವೇನು?
ಇಳುವರಿ ಕಡಿಮೆ ಇರುವುದರಿಂದ ಬೇಡಿಕೆ ಹೆಚ್ಚಳವಾಗಿ, ಉತ್ತಮ ಬೆಲೆ ಸಿಗಬಹುದು ಎಂಬ ಲೆಕ್ಕಾಚಾರವಿತ್ತು. ಆದರೆ ಈ ಬಾರಿ ಇಳುವರಿ ಜೊತೆಗೆ ರೇಟ್ ಕುಸಿತ ಕಂಡಿರುವುದು ರೈತರಲ್ಲಿ ಆತಂಕ ಮತ್ತು ಅನುಮಾನ ಮೂಡಿಸಿದೆ.
(adike rate decrease)
ಮನೆ ಬಾಗಿಲಲ್ಲೇ ಅಡಕೆ ಖರೀದಿ
ಸುಗ್ಗಿ ಸಮಯದಲ್ಲಿ ಉತ್ಪನ್ನಗಳ ಧಾರಣೆ ಕುಸಿತ ಕಾಣುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ಉತ್ಪನ್ನಗಳು ಮಾರುಕಟ್ಟೆಗೆ ಬರುವುದರಿಂದ ವರ್ತಕರು ಖರೀದಿಸುತ್ತಾರೆ. ಸುಗ್ಗಿ ಮುಗಿಯುತ್ತಿದ್ದಂತೆ ಹೆಚ್ಚಿನ ದರಕ್ಕೆ ಮಾರಾಟ ಮಾಡುವುದು ಸಾಮಾನ್ಯ.
ಇದನ್ನೂ ಓದಿ – ಎಲೆ ಚುಕ್ಕೆ, ತೀರ್ಥಹಳ್ಳಿಯ ತೋಟಕ್ಕೆ ಸಿಎಂ ಭೇಟಿ, ಇಲ್ಲಿದೆ ಬೊಮ್ಮಾಯಿ ಹೇಳಿದ 3 ಪ್ರಮುಖಾಂಶ
ಮತ್ತೊಂದೆಡೆ, ಎಪಿಎಂಸಿಗಳಲ್ಲಿನ ವಹಿವಾಟಿಗಿಂತಲು ಹೊರಗಿನ ವ್ಯಾಪಾರ ಹೆಚ್ಚಾಗಿದೆ. ರೈತರ ಮನೆ ಬಳಿಗೆ ಬರುವ ವರ್ತಕರು ಮಾರುಕಟ್ಟೆಗಿಂತಲು ತುಸು ಹೆಚ್ಚಿನ ದರ ನೀಡಿ ಅಡಕೆ ಕೊಳ್ಳುತ್ತಿದ್ದಾರೆ. ಇದರಿಂದ ಬೆಳೆಗಾರರಿಗೆ ಲಾಭವಾದಂತೆ ತೋರುತ್ತದೆ. ಆದರೆ ಜಿ.ಎಸ್.ಟಿಯನ್ನು ವಂಚಿಸಿ ಇಂತಹ ವರ್ತಕರು ಲಾಭ ಮಾಡಿಕೊಳ್ಳುತ್ತಿದ್ದಾರೆ. ಅಲ್ಲದೆ ದಾಸ್ತಾನು ಇರಿಸಿ, ಬೆಲೆ ಹೆಚ್ಚಾದಾಗ ಅಡಕೆ ಮಾರಾಟ ಮಾಡುತ್ತಾರೆ.
ಎಲೆ ಚುಕ್ಕೆ ರೋಗ, ಇಳುವರಿ ಕುಸಿತದ ನಡುವೆ ಅಡಕೆ ಧಾರಣೆ ಕುಸಿತ ಕಂಡಿರುವುದು ಬೆಳೆಗಾರರ ನಿದ್ರೆಗೆಡಿಸಿದೆ. ದಾಸ್ತಾನು ಮಾಡಲಾಗದ ಸಣ್ಣಪುಟ್ಟ ಬೆಳೆಗಾರರು ಈ ವರ್ಷ ಲಾಭ ಕಾಣದೆ ಕೈ ಸುಟ್ಟುಕೊಳ್ಳುವಂತಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422