ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 11 AUGUST 2023
SHIMOGA : ಸಾಲು ಸಾಲು ರಜೆ ಹಿನ್ನೆಲೆ ರೈಲ್ವೆ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿದೆ. ಆದ್ದರಿಂದ ರೈಲ್ವೆ (Railway) ಇಲಾಖೆ ರಾಜ್ಯದ ವಿವಿಧ ರೈಲುಗಳಿಗೆ ಹೆಚ್ಚುವರಿ ಬೋಗಿ ಅಳವಡಿಸಿದೆ. ಶಿವಮೊಗ್ಗದ ಎರಡು ರೈಲುಗಳಿಗೆ ಹೆಚ್ಚುವರಿ ಬೋಗಿ ಅಳವಡಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಯಾವ್ಯಾವ ರೈಲಿಗೆ ಯಾವ್ಯಾವ ದಿನ ಹೆಚ್ಚುವರಿ ಬೋಗಿ?
ಮೈಸೂರು – ತಾಳಗುಪ್ಪ (ರೈಲು ಸಂಖ್ಯೆ 16227) – ಆ.11 ರಿಂದ 14ರವರೆಗೆ ಒಂದು ಹೆಚ್ಚವರಿ ಸ್ಲೀಪರ್ ಕೋಚ್ ಬೋಗಿ.
ತಾಳಗುಪ್ಪ – ಮೈಸೂರು (ರೈಲು ಸಂಖ್ಯೆ 16228) – ಆ.12 ರಿಂದ 15ರವರೆಗೆ ಒಂದು ಹೆಚ್ಚುವರಿ ಸ್ಲೀಪರ್ ಕೋಚ್ ಬೋಗಿ.
ಬೆಂಗಳೂರು – ಶಿವಮೊಗ್ಗ ಜನಶತಾಬ್ದಿ (ರೈಲು ಸಂಖ್ಯೆ 12089) – ಆ.12ರಂದು ಒಂದು ಸಕೆಂಡ್ ಕ್ಲಾಸ್ ಚೇರ್ ಕಾರ್ ಬೋಗಿ.
ಇದನ್ನೂ ಓದಿ – ಗೃಹ ಜ್ಯೋತಿ ಉಚಿತ ವಿದ್ಯುತ್ ನಿರೀಕ್ಷೆಯಲ್ಲಿದ್ದ ಗ್ರಾಹಕನಿಗೆ ಮೆಸ್ಕಾಂನಿಂದ ಶಾಕ್
ಶಿವಮೊಗ್ಗ – ಬೆಂಗಳೂರು ಜನಶತಾಬ್ದಿ (ರೈಲು ಸಂಖ್ಯೆ 12090) – ಆ.13ರಂದು ಒಂದು ಸಕೆಂಡ್ ಕ್ಲಾಸ್ ಚೇರ್ ಕಾರ್ ಬೋಗಿ.
ವೇಯ್ಟಿಂಗ್ ಲಿಸ್ಟ್ ಸಂಖ್ಯೆ ಏರಿಕೆ
ಆ.12 ರಿಂದ 15ರವರೆಗೆ ಮೂರು ದಿನ ರಜೆ ಇದೆ. ಈ ಹಿನ್ನೆಲೆ ಶಿವಮೊಗ್ಗಕ್ಕೆ ಬರುವ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿದೆ. ಹಾಗಾಗಿ ರೈಲ್ವೆ ಇಲಾಖೆ ಹೆಚ್ಚುವರಿ ಬೋಗಿ ಅಳವಡಿಸಿದೆ. ಹಾಗಿದ್ದೂ ಕಾಯ್ದಿರಿಸುವ ಸೀಟ್‌ಗಳಲ್ಲಿ ವೇಯ್ಟಿಂಗ್ ಲಿಸ್ಟ್ ಇದೆ.
.jpeg)
LATEST NEWS
- ಸಾವಿನಲ್ಲು ಸಾರ್ಥಕತೆ ಮೆರೆದ ಶಿರಾಳಕೊಪ್ಪದ ಯುವಕ, ಬಹು ಅಂಗಾಂಗ ದಾನ, ಆಗಿದ್ದೇನು?

- ಶಿವಮೊಗ್ಗದ ಕರ್ನಾಟಕ ಸಂಘದಲ್ಲಿ ನಟಿ ರಂಜನಿ ರಾಘವನ್ ಉಪನ್ಯಾಸ, ಯಾವಾಗ? ಏನು ವಿಷಯ?

- ‘ಶಾಸಕರಿಗೆ ಹೇಳಿ ನೀನೆ ತಡೆದಿದ್ದೀಯ’ ಎಂದು ಆರೋಪಿಸಿ ವ್ಯಕ್ತಿ ಮೇಲೆ ಚಪ್ಪಲಿಯಿಂದ ಹಲ್ಲೆ, ಏನಿದು ಪ್ರಕರಣ?

- ಶಿವಮೊಗ್ಗದಲ್ಲಿ ರಾಷ್ಟ್ರಮಟ್ಟದ ಬಯಲು ಕುಸ್ತಿ, ಹೇಗಿತ್ತು ಎರಡನೇ ದಿನದ ಕಾದಾಟ? ಯಾರೆಲ್ಲ ಗೆದ್ದರು?

- ತೀರ್ಥಹಳ್ಳಿಯಲ್ಲಿ ಫಾರ್ಚುನರ್ ಕಾರಿನಲ್ಲಿ ಬಂದು ಇಂಜಿನಿಯರ್ಗೆ ಬೆದರಿಸಿ ಹಣ ವಸೂಲಿ, ಏನಿದು ಕೇಸ್?

About The Editor
ನಿತಿನ್ ಆರ್.ಕೈದೊಟ್ಲು





