ಶಿವಮೊಗ್ಗದಲ್ಲಿ 5ನೇ ದಿನಕ್ಕೆ ಕಾಲಿಟ್ಟ ಸತ್ಯಾಗ್ರಹ, ಮಹಾವೀರ ವೃತ್ತದಲ್ಲಿ ಮಾನವ ಸರಪಳಿ, ಪ್ರತಿಭಟನೆಗೆ ಕಾರಣವೇನು?

ಶಿವಮೊಗ್ಗ: ಒಳಮೀಸಲಾತಿ (Reservation) ವರ್ಗೀಕರಣ ವಿರೋಧಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಜಿಲ್ಲಾ ಬಂಜಾರ ಸಂಘದಿಂದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಐದನೆ ದಿನಕ್ಕೆ ಕಾಲಿಟ್ಟಿದ್ದೆ. ಧರಣಿ ನಿರತರು ಇವತ್ತು ಶಿವಮೊಗ್ಗದ ಮಹಾವೀರ ಸರ್ಕಲ್‌ನಲ್ಲಿ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಸಿದರು. (ಈ ಸುದ್ದಿಯನ್ನು ಇನ್ನು 79 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಇವತ್ತಿನ ಪ್ರತಿಭಟನೆಯಲ್ಲಿ ತಿಮ್ಲಾಪುರ ತಾಂಡ, ತರಲಘಟ್ಟ ಕ್ಯಾಂಪ್‌, ದೊಡ್ಡ ಜೋಗಿಹಳ್ಳಿ, ಚುರ್ಚಿ ಗುಂಡಿ, ಹಿತ್ತಲ, ಅಂಜನಾಪುರ, ಕೊರಲಹಳ್ಳಿ ಬಿ.ಕ್ಯಾಂಪ್‌, ಹಾರೋಗೊಪ್ಪ, ಎಂ.ಸಿ.ಆರ್.‌ಸಿ ಕಾಲೋನಿ, ಎಳನೀರು ಕೊಪ್ಪ, ಶಿಕಾರಿಪುರ, ಕೋಟೆಗಂಗೂರು, ಗೆಜ್ಜೆನಹಳ್ಳಿ, ಕೊಮ್ಮನಾಳು, ಬನ್ನಿಕೆರೆ, ಹೊಳಲೂರು, ಬುಳ್ಳಾಪುರ, ಬೆಳಲಕಟ್ಟೆ ತಾಂಡಗಳ ನಿವಾಸಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಹೋರಾಟಕ್ಕೆ ಶಿವಮೊಗ್ಗ ಎಂಎಲ್‌ಎ

ಶಿವಮೊಗ್ಗ ಶಾಸಕ ಎಸ್‌.ಎನ್.ಚನ್ನಬಸಪ್ಪ ಹೋರಾಟ ಸ್ಥಳಕ್ಕೆ ಆಗಮಿಸಿ, ಹೋರಾಟಗಾರರಿಗೆ ಬೆಂಬಲ ಸೂಚಿಸಿದರು.

ಬೊಮ್ಮಾಯಿ ಸರ್ಕಾರದ ಅವಧಿಯಲ್ಲಿ ಘೋಷಿಸಿದ್ದ ಒಳ ಮೀಸಲಾತಿ ಸರಿ ಇತ್ತು. ಆದರೆ ಅನ್ಯಾಯವಾಗಿದೆ ಎಂದು ಕೆಲವರು ಆರೋಪಿಸಿದ್ದರು. ಇದರಿಂದ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲು ಸಾಧ್ಯವಾಗಲಿಲ್ಲ. ಈಗಿನ ಒಳ ಮಿಸಲಾತಿ ವರ್ಗೀಕರಣದಿಂದ ಅನ್ಯಾಯವಾಗಿ ಎಂದು ಬಂಜಾರ ಸಮುದಾಯದವರು ಪ್ರತಿಭಟಿಸುತ್ತಿದ್ದೀರ. ಇದನ್ನು ಸರ್ಕಾರದ ಗಮನಕ್ಕೆ ತರಲಿದ್ದೇವೆ. ಸದನದಲ್ಲಿಯು ಈ ಕುರಿತು ಚರ್ಚಿಸುತ್ತೇನೆ.

  • ಎಸ್.ಎನ್.ಚನ್ನಬಸಪ್ಪ, ಶಾಸಕ

RED-LINE-

ರಸ್ತೆ ತಡೆ ಬಳಿಕ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿ, ಧರಣಿ ಮುಂದುವರೆಸಲಾಯಿತು.

ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ

ಪ್ರತಿಭಟನೆಯಲ್ಲಿ ಸಾಲೂರು ಪೀಠದ ಬಂಜಾರ ಧರ್ಮಗುರು ಸೈನಾ ಭಗತ್‌ ಮಹರಾಜ್‌, ಜಿಲ್ಲಾ ಬಂಜಾರ ಸಂಘದ ಅಧ್ಯಕ್ಷ ಕೆ.ಬಿ.ಅಶೋಕ್‌ ನಾಯ್ಕ್‌ ಸೇರಿದಂತೆ ಹಲವರು ಇದ್ದರು.

Banjara-Protest-in-Shimoga-city
ರಸ್ತೆ ತಡೆ ವೇಳೆ ಬಂಜಾರ ಗೀತೆಗಳನ್ನು ಹಾಡಿದ ಪ್ರತಿಭಟನಾಕಾರರು.
Banjara-Protest-in-Shimoga-city
ಬಂಜಾರ ಸಮುದಾಯದಿಂದ ಪ್ರತಿಭಟನೆ ನಡೆಸಿದರು.
Banjara-Protest-in-Shimoga-city
ಬಂಜಾರ ಸಂಘದ ಪ್ರತಿಭಟನೆಗೆ ಶಾಸಕ ಎಸ್‌.ಎನ್‌.ಚನ್ನಬಸಪ್ಪ ಬೆಂಬಲ.

ಇದನ್ನೂ ಓದಿ » ಶಿವಮೊಗ್ಗ ಸಿಟಿಯಲ್ಲಿ ಸಂಜೆ ವೇಳೆಗೆ ಮತ್ತೆ ಮಳೆ ಶುರು, ಆಗುಂಬೆ ಭಾಗದಲ್ಲಿ ಅಬ್ಬರ ಜೋರು

Banjara community protest for reservation slab

Banjara-Protest-in-Shimoga-city

Leave a Comment