ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIMOGA NEWS, 27 NOVEMBER 2024
ಚುನಾವಣೆ ಸುದ್ದಿ : ಸ್ಥಳೀಯ ಸಂಸ್ಥೆಗಳಲ್ಲಿ ವಿವಿಧ ಕಾರಣಕ್ಕೆ ತೆರವಾಗಿದ್ದ ಸ್ಥಾನಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಮುಗಿದಿದೆ. ಯಾವ್ಯಾವ ಊರಿನಲ್ಲಿ ಯಾರೆಲ್ಲ ಗೆಲುವು (Elected) ಸಾಧಿಸಿದ್ದಾರೆ? ಇಲ್ಲಿದೆ ಕಂಪ್ಲೀಟ್ ರಿಪೋರ್ಟ್.
ಶಿಕಾರಿಪುರದಲ್ಲಿ ಬಿಜೆಪಿಗೆ ಗೆಲುವು
ಶಿಕಾರಿಪುರ ಪುರಸಭೆಯ 10ನೇ ವಾರ್ಡ್‌ಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಡಿ.ಆರ್.ರಾಘವೇಂದ್ರ ಗೆಲುವು ಸಾಧಿಸಿದ್ದಾರೆ. 776 ಮತಗಳ ಪೈಕಿ ರಾಘವೇಂದ್ರ 290 ಮತಗಳನ್ನು ಪಡೆದಿದ್ದಾರೆ. ಪಕ್ಷೇತರ ಅಭ್ಯರ್ಥಿ ರಮೇಶ್ 275, ಕಾಂಗ್ರೆಸ್‌ನ ಚೋರಡಿ ಗಿಡ್ಡೇಶ್ 191 ಮತ ಗಳಿಸಿದ್ದಾರೆ. ಕಾಂಗ್ರೆಸ್ ಸದಸ್ಯ ಮಹೇಶ್ ಹುಲ್ಮಾರ್ ಬಿಜೆಪಿ ಸೇರ್ಪಡೆಯಿಂದ ಸ್ಥಾನ ತೆರವಾಗಿತ್ತು.
ಶಿರಾಳಕೊಪ್ಪದಲ್ಲಿ ಕಾಂಗ್ರೆಸ್ ಗೆಲುವು
ಶಿರಾಳಕೊಪ್ಪ ಪುರಸಭೆಯ 7ನೇ ವಾರ್ಡ್‌ನ ಸದಸ್ಯ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಿರ್ಮಲಾ ಪ್ರಕಾಶ್ ಗಲುವು ಸಾಧಿಸಿದ್ದಾರೆ. 466 ಮತಗಳು ಚಲಾವಣೆಯಾಗಿದ್ದು, ನಿರ್ಮಲಾ ಪ್ರಕಾಶ್ 456 ಮತ ಗಳಿಸಿದ್ದಾರೆ. ಬಿಜೆಪಿಗೆ 9 ಮತ, ಒಂದು ನೋಟಾ ಮತ ಚಲಾವಣೆಯಾಗಿತ್ತು. ಪುರಸಭೆಯ ಪಕ್ಷೇತರ ಸದಸ್ಯ ಅನಿಲ್ ಕುಮಾರ್ ನಿಧನದಿಂದ ಸ್ಥಾನ ತೆರವಾಗಿತ್ತು.
» ತರಲಘಟ್ಟ : ಶಿಕಾರಿಪುರದ ತರಲಘಟ್ಟ ಗ್ರಾಮ ಪಂಚಾಯಿತಿಯ 1ನೇ ವಾರ್ಡ್‌ಗೆ ನಡೆದ ಉಪಚುನಾವಣೆಯಲ್ಲಿ ಪುಷ್ಪಲತಾ ಪ್ರದೀಪ್ 317 ಮತ ಪಡೆದು ಆಯ್ಕೆಯಾಗಿದ್ದಾರೆ.
» ಬಾರಂದೂರು : ಭದ್ರಾವತಿಯ ಬಾರಂದೂರು ಗ್ರಾಮ ಪಂಚಾಯಿತಿಯ ಕ್ಷೇತ್ರ 1ಕ್ಕೆ ನಡೆದ ಉಪ ಚುನಾವಣೆಯಲ್ಲಿ 484 ಮತ ಪಡೆದು ಜೆ.ಕಿರಣ್ ಆಯ್ಕೆಯಾಗಿದ್ದಾರೆ.
» ಕುದರೂರು : ಸಾಗರ ತಾಲೂಕು ತುಮರಿ ಸಮೀಪದ ಕುದರೂರು ಗ್ರಾಮ ಪಂಚಾಯಿತಿಯ 1ನೇ ವಾರ್ಡ್‌ಗೆ ನಡೆದ ಉಪ ಚುನಾವಣೆಯಲ್ಲಿ ಮಂಜುನಾಥ್ ಬೇಸೂರು 195 ಮತ ಪಡೆದು ಆಯ್ಕೆಯಾಗಿದ್ದಾರೆ.
» ತೀರ್ಥಮತ್ತೂರು : ತೀರ್ಥಹಳ್ಳಿಯ ತೀರ್ಥಮತ್ತೂರು ಗ್ರಾಮ ಪಂಚಾಯಿತಿಯಲ್ಲಿ ತೆರವಾಗಿದ್ದ ಸದಸ್ಯ ಸ್ಥಾನಕ್ಕೆ ರೂಪಾ ಶ್ರೀನಿವಾಸ್ 223 ಮತ ಪಡೆದು ಆಯ್ಕೆಯಾಗಿದ್ದಾರೆ.
» ಮೈದೊಳಲು : ಹೊಳೆಹೊನ್ನೂರು ಸಮೀಪದ ಮೈದೊಳಲು ಗ್ರಾಮ ಪಂಚಾಯಿತಿಯ ಮೂರು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಮಲ್ಲಾಪುರದ ಮೂಡ್ಲರ್ ಪರಮೇಶ್ವರಪ್ಪ, ರಾಮರಾವ್ ಮುತ್ಯಾಲ, ವಿಶಾಲಾಕ್ಷಿ ರಂಗಪ್ಪ ಅವಿರೋಧವಾಗಿ ಆಯ್ಕೆಯಾದರು.
» ಅರಹತೊಳಲು : ಹೊಳೆಹೊನ್ನೂರು ಸಮೀಪದ ಅರಹತೊಳಲು ಗ್ರಾಮ ಪಂಚಾಯಿತಿಗೆ ಅಶ್ವಿನಿ, ಆಶಾ, ನಾಗಮ್ಮ ಇವರ ರಾಜೀನಾಮೆಯಿಂದ ತೆರವಾಗಿದ್ದ ಮೂರು ಸದಸ್ಯ ಸ್ಥಾನಕ್ಕೆ ಗೌರಮ್ಮ, ಸುಧಾ, ಕೆ.ಸಿ.ವಿದ್ಯಾ ಅವಿರೋಧವಾಗಿ ಆಯ್ಕೆಯಾದರು.
» ಕೋಟೆಗಂಗೂರು : ಶಿವಮೊಗ್ಗ ತಾಲೂಕು ಕೋಟೆಗಂಗೂರು ಗ್ರಾಮ ಪಂಚಾಯಿತಿಯ ಒಂದು ಸದಸ್ಯ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಡಿ.ಎಲ್.ರಮೇಶ್ 608 ಮತ ಪಡೆದು ಆಯ್ಕೆಯಾಗಿದ್ದಾರೆ.
ಇದನ್ನೂ ಓದಿ » ಶಿವಮೊಗ್ಗದಲ್ಲಿ ದಿನೇಶ್ ಅಮಿನ್ ಮಟ್ಟು ಉಪನ್ಯಾಸ, ಇಲ್ಲಿದೆ 3 ಪ್ರಮುಖ ಪಾಯಿಂಟ್
Elected Representatives
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422