ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 24 JANUARY 2024
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
EDUCATION NEWS : ಕುವೆಂಪು ವಿಶ್ವವಿದ್ಯಾಲಯದ ವಿದ್ಯಾವಿಷಯಕ ಪರಿಷತ್ತಿಗೆ ವಿಧಾನ ಪರಿಷತ್ತಿನ ಇಬ್ಬರು ಶಾಸಕರನ್ನು ನೇಮಿಸಲಾಗಿದೆ. ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್.ಅರುಣ್ ಮತ್ತು ಸೂರಜ್ ರೇವಣ್ಣ ಅವರನ್ನು ನೇಮಿಸಿ ಸಭಾಪತಿ ಅವರು ನಾಮ ನಿರ್ದೇಶನ ಮಾಡಿದ್ದಾರೆ.
ಈ ಸಂಬಂಧ ವಿಧಾನ ಪರಿಷತ್ತಿನ ಕಾರ್ಯದರ್ಶಿ ಅವರು ಕುವೆಂಪು ವಿವಿ ಕುಲ ಸಚಿವರಿಗೆ ಆದೇಶ ಪ್ರತಿ ರವಾನಿಸಿದ್ದಾರೆ.
ಏನಿದು ವಿದ್ಯಾವಿಷಯಕ ಪರಿಷತ್ತು?
ವಿಶ್ವವಿದ್ಯಾಲಯಗಳ ಶೈಕ್ಷಣಿಕ ಚುಟುವಟಿಕೆ ಕುರಿತು ಶಾಸನಗಳು, ಆದೇಶಗಳು, ನಿಯಮಗಳನ್ನು ರಚಿಸಲು ವಿದ್ಯಾವಿಷಯಕ ಪರಿಷತ್ತು (ಅಕಾಡೆಮಿಕ್ ಕೌನ್ಸಿಲ್) ರಚಿಸಲಾಗುತ್ತದೆ. ಪ್ರತಿ ವಿಶ್ವವಿದ್ಯಾಲಯಕ್ಕು ಪ್ರತ್ಯೇಕ ಅಕಾಡೆಮಿಕ್ ಕೌನ್ಸಿಲ್ ಸ್ಥಾಪಿಸಲಾಗಿರುತ್ತದೆ. ವಿವಿಯ ಕುಲಪತಿ ವಿದ್ಯಾವಿಷಯಕ ಪರಿಷತ್ತಿನ ಅಧ್ಯಕ್ಷ, ಕುಲಸಚಿವರು ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ. ಉಳಿದಂತೆ ಉನ್ನತ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಶಾಸಕರು, ಕಾಲೇಜುಗಳ ಪ್ರಾಂಶುಪಾಲರು, ವಿವಿಧ ವಿಭಾಗಗಳ ಮುಖ್ಯಸ್ಥರು ಸೇರಿದಂತೆ ಹಲವರು ಇದರ ಸದಸ್ಯರಾಗಿರುತ್ತಾರೆ.
ಇದನ್ನೂ ಓದಿ – ಶಿವಮೊಗ್ಗ ವಿಮಾನ ನಿಲ್ದಾಣದ ಟರ್ಮಿನಲ್ ಒಳಗೆ ಹೆಡೆ ಎತ್ತಿದ ನಾಗರ ಹಾವು