ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ: ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ, ರಾಷ್ಟ್ರೀಯ ಶಿಕ್ಷಣ ಸಮಿತಿ, ಸಿ.ಭೀಮಸೇನ ರಾವ್ ಕಾನೂನು ಕಾಲೇಜಿನ ವತಿಯಿಂದ ಏರ್ಪಡಿಸಿದ್ದ ಮಂಗಳೂರು ವಲಯ ಮಟ್ಟದ ಯುವಜನೋತ್ಸವದ ಸಮಾರೋಪ ಸಮಾರಂಭದಲ್ಲಿ ಸಿ.ಬಿ.ಆರ್ ಕಾನೂನು ಕಾಲೇಜು ವಿದ್ಯಾರ್ಥಿಗಳ ತಂಡ ಚಾಂಪಿಯನ್ಸ್ ಗಳಾಗಿ ಹೊರಹೊಮ್ಮಿದರು.
ವಿವೇಕಾನಂದ ಕಾನೂನು ಕಾಲೇಜು ಪುತ್ತೂರು ಹಾಗೂ ವೈಕುಂಠ ಬಾಳಿಗ ಕಾನೂನು ಕಾಲೇಜು ಉಡುಪಿ ರನ್ನರ್ ಅಪ್ ಆಗಿ ಬಹುಮಾನ ಪಡೆದರು. ಎರಡು ದಿನಗಳ ಕಾಲ ನಡೆದ ವಿವಿಧ ಸ್ಪರ್ಧೆಗಳಲ್ಲಿ ರಾಜ್ಯದ 10 ಕಾನೂನು ಕಾಲೇಜಿನ ವಿದ್ಯಾರ್ಥಿಗಳ ತಂಡ ಭಾಗವಹಿಸಿದ್ದರು.
ಶಾಸ್ತ್ರೀಯ ನೃತ್ಯ ಸ್ಪರ್ಧೆಯಲ್ಲಿ ಸಿಬಿಆರ್ ಕಾನೂನು ಕಾಲೇಜು ಶಿವಮೊಗ್ಗ (ಪ್ರಥಮ), ವಿವೇಕಾನಂದ ಕಾನೂನು ಕಾಲೇಜು ಪುತ್ತೂರು (ದ್ವಿತೀಯ). ಸ್ವರ ಏಕಗಾನ (Classical Vocal Solo) ಶ್ರೀ ಧರ್ಮಸ್ಥಳ ಮಂಜುನಾಥ ಕಾನೂನು ಕಾಲೇಜು (ಪ್ರಥಮ), ವೈಕುಂಠ ಬಾಳಿಗ ಕಾನೂನು ಕಾಲೇಜು ಉಡುಪಿ (ದ್ವಿತೀಯ). ರಂಗೋಲಿ ಸ್ಪರ್ಧೆಯಲ್ಲಿ ಆಳ್ವಾಸ್ ಕಾನೂನು ಕಾಲೇಜು (ಪ್ರಥಮ), ಸಿಬಿಆರ್ ಕಾನೂನು ಕಾಲೇಜು ಶಿವಮೊಗ್ಗ (ದ್ವಿತೀಯ). ಸ್ಪಾಟ್ ಪೇಂಟಿಂಗ್ ಸ್ಪರ್ಧೆಯಲ್ಲಿ ವಿವೇಕಾನಂದ ಕಾನೂನು ಕಾಲೇಜು ಪುತ್ತೂರು (ಪ್ರಥಮ), ಸಿಬಿಆರ್ ಕಾನೂನು ಕಾಲೇಜು ಶಿವಮೊಗ್ಗ (ದ್ವಿತೀಯ).

ಲಘು ಗಾಯನ (Light Vocal) ಸ್ಪರ್ಧೆಯಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥ ಕಾನೂನು ಕಾಲೇಜು (ಪ್ರಥಮ), ಸಿಬಿಆರ್ ಕಾನೂನು ಕಾಲೇಜು ಶಿವಮೊಗ್ಗ (ದ್ವಿತೀಯ). ಗುಂಪು ಗಾಯನ (Group Song) ವಿವೇಕಾನಂದ ಕಾನೂನು ಕಾಲೇಜು ಪುತ್ತೂರು (ಪ್ರಥಮ), ಶ್ರೀ ಧರ್ಮಸ್ಥಳ ಮಂಜುನಾಥ ಕಾನೂನು ಕಾಲೇಜು (ದ್ವಿತೀಯ).
ಕಾರ್ಟೂನಿಂಗ್ ಸ್ಪರ್ಧೆಯಲ್ಲಿ ಸಿಬಿಆರ್ ಕಾನೂನು ಕಾಲೇಜು ಶಿವಮೊಗ್ಗ (ಪ್ರಥಮ), ಶಾರದ ಕಾಲೇಜು ಚಿಕ್ಕಮಗಳೂರು (ದ್ವಿತೀಯ). ಜನಪದ ನೃತ್ಯ (Folk Dance) ಸ್ಪರ್ಧೆಯಲ್ಲಿ ಸಿಬಿಆರ್ ಕಾನೂನು ಕಾಲೇಜು ಶಿವಮೊಗ್ಗ (ಪ್ರಥಮ), ವೈಕುಂಠ ಬಾಳಿಗ ಕಾನೂನು ಕಾಲೇಜು ಉಡುಪಿ (ದ್ವಿತೀಯ).
ಜನಪದ ವಾದ್ಯವೃಂದ (Folk Orchestra) ಸಿಬಿಆರ್ ಕಾನೂನು ಕಾಲೇಜು ಶಿವಮೊಗ್ಗ (ಪ್ರಥಮ), ವಿವೇಕಾನಂದ ಕಾನೂನು ಕಾಲೇಜು ಪುತ್ತೂರು (ದ್ವಿತೀಯ). ಚರ್ಚಾ ಸ್ಪರ್ಧೆ (Debate) ಸಿಬಿಆರ್ ಕಾನೂನು ಕಾಲೇಜು ಶಿವಮೊಗ್ಗ (ಪ್ರಥಮ), ವಿವೇಕಾನಂದ ಕಾನೂನು ಕಾಲೇಜು ಪುತ್ತೂರು (ದ್ವಿತೀಯ).
ವಾಗ್ಮಿತಾ ಸ್ಪರ್ಧೆಯಲ್ಲಿ (Elocution) ವೈಕುಂಠ ಬಾಳಿಗ ಕಾನೂನು ಕಾಲೇಜು ಉಡುಪಿ (ಪ್ರಥಮ), ಎಂ.ಕೃಷ್ಣ ಕಾನೂನು ಕಾಲೇಜು ಹಾಸನ (ದ್ವಿತೀಯ). ಮೈಮ್ ಸ್ಪರ್ಧೆಯಲ್ಲಿ ಆಳ್ವಾಸ್ ಕಾನೂನು ಕಾಲೇಜು (ಪ್ರಥಮ), ವೈಕುಂಠ ಬಾಳಿಗ ಕಾನೂನು ಕಾಲೇಜು ಉಡುಪಿ (ದ್ವಿತೀಯ).
ಇದನ್ನೂ ಓದಿ » ಶಿವಮೊಗ್ಗದ ಟ್ರಾಫಿಕ್ ಪೊಲೀಸ್ ಠಾಣೆಗೆ ನ್ಯಾಯಾಧೀಶರ ದಿಢೀರ್ ಭೇಟಿ, ಕಾರಣವೇನು?
ಮಿಮಿಕ್ರಿ ಸ್ಪರ್ಧೆಯಲ್ಲಿ ವೈಕುಂಠ ಬಾಳಿಗ ಕಾನೂನು ಕಾಲೇಜು ಉಡುಪಿ (ಪ್ರಥಮ), ಸಿಬಿಆರ್ ಕಾನೂನು ಕಾಲೇಜು ಶಿವಮೊಗ್ಗ (ದ್ವಿತೀಯ). ನಾಟಕ ಸ್ಪರ್ಧೆಯಲ್ಲಿ (Skit) ಆಳ್ವಾಸ್ ಕಾನೂನು ಕಾಲೇಜು (ಪ್ರಥಮ), ಸಿಬಿಆರ್ ಕಾನೂನು ಕಾಲೇಜು ಶಿವಮೊಗ್ಗ (ದ್ವಿತೀಯ) ಸ್ಥಾನ ಪಡೆದರು.
LATEST NEWS
- ಬೆಳಗ್ಗೆ ಲೇಔಟ್‌ಗೆ ಬಂದ ಲೆಕ್ಚರರ್‌ಗೆ ಕಾದಿತ್ತು ಆಘಾತ, ರಾತ್ರಿ 11.15ರ CCTV ದೃಶ್ಯ ಕಂಡು ಶಾಕ್

- ಶಿವಮೊಗ್ಗ TO ಬೆಂಗಳೂರು ಇನ್ನಷ್ಟು ವೇಗ, ದ್ವಿಪಥ ಯೋಜನೆಗೆ ಒತ್ತಾಯ

- ಜಮೀನಿಗೆ ನೀರು ಹರಿಸಲು ಹೋಗಿದ್ದ ವ್ಯಕ್ತಿಗೆ ಕಾದಿತ್ತು ಸಾವು, ಆಗಿದ್ದೇನು?

- ನಾಳೆಯಿಂದ SSLC ಪರೀಕ್ಷೆ, ಹೇಗಿದೆ ಸಿದ್ಧತೆ? ಯಾವ್ಯಾವ ತಾಲೂಕಿನಲ್ಲಿ ಎಷ್ಟು ಪರೀಕ್ಷಾ ಕೇಂದ್ರಗಳಿವೆ?

- ಮನೆಯ ಮೀಟರ್ ಬೋರ್ಡ್ ಮೇಲೆ ಕೀ ಇಡುವ ಅಭ್ಯಾಸ ಇದ್ಯಾ? ನಿದಿಗೆಯಲ್ಲಿ ದಾಖಲಾಯ್ತು ಕೇಸ್, ಯಾಕೆ?

About The Editor
ನಿತಿನ್ ಆರ್.ಕೈದೊಟ್ಲು















