ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ |SHIMOGA NEWS | 18 NOVEMBER 2020
ಪದವಿ ಕಾಲೇಜುಗಳ ತರಗತಿ ಆರಂಭವಾಗಿ ಐದು ದಿನವಾಯ್ತು. ಆದರೆ ವಿದ್ಯಾರ್ಥಿಗಳ ಹಾಜರಾತಿ ಬೆರಳೆಣಿಕೆಯಷ್ಟಿದೆ. ಹಾಗಾಗಿ ಕಾಲೇಜುಗಳು ಆನ್‍ಲೈನ್ ಕ್ಲಾಸ್‍ಗಳನ್ನೆ ಮುಂದುವರೆಸಿವೆ.
ಎಷ್ಟಿದೆ ವಿದ್ಯಾರ್ಥಿಗಳ ಹಾಜರಾತಿ?
ಕೋವಿಡ್ ಲಾಕ್‍ಡೌನ್ ಬಳಿಕ ನವೆಂಬರ್ 17ರಿಂದ ಪದವಿ ಕಾಲೇಜುಗಳು ಆರಂಭವಾಗಿವೆ. ಆದರೆ ತರಗತಿಗೆ ಬರಲು ವಿದ್ಯಾರ್ಥಿಗಳಿಗೆ ಪೋಷಕರ ಅನುಮತಿ ಕಡ್ಡಾಯ. ಹಾಗಾಗಿ ವಿದ್ಯಾರ್ಥಿಗಳ ಹಾಜರಾತಿ ಸಂಪೂರ್ಣ ಕುಸಿದಿದೆ. ಕೆಲವು ಕಾಲೇಜುಗಳಲ್ಲಿ ಹಾಜರಾತಿಯೇ ಇಲ್ಲವಾಗಿದೆ.
ಎಲ್ಲೆಲ್ಲಿ ಎಷ್ಟೆಷ್ಟು ವಿದ್ಯಾರ್ಥಿಗಳು ಬಂದಿದ್ದಾರೆ?
- ಕಾಲೇಜು ಶಿಕ್ಷಣ ಇಲಾಖೆ ದಾಖಲೆಗಳು ವಿದ್ಯಾರ್ಥಿಗಳ ಹಾಜರಾತಿ ಸಂಪೂರ್ಣ ಕುಸಿದಿರುವುದನ್ನು ಸಾಬೀತುಪಡಿಸುತ್ತದೆ.
- ಶಿವಮೊಗ್ಗ ಜಿಲ್ಲೆಯ 16 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 4610 ಅಂತಿಮ ವರ್ಷದ ವಿದ್ಯಾರ್ಥಿಗಳಿದ್ದಾರೆ.
- ನವೆಂಬರ್ 20ರಂದು ತರಗತಿಗೆ ಹಾಜರಾದ ವಿದ್ಯಾರ್ಥಿಗಳ ಸಂಖ್ಯೆ ಕೇವಲ 67.
- ಇನ್ನು ಕೋವಿಡ್ ತಪಾಸಣೆ ಮಾಡಿಸಿಕೊಂಡ ವಿದ್ಯಾರ್ಥಿಗಳ ಸಂಖ್ಯೆ ಕೇವಲ 1231.
- ಜಿಲ್ಲೆಯ ಒಂಭತ್ತು ಖಾಸಗಿ ಕಾಲೇಜುಗಳಲ್ಲಿ 1903 ವಿದ್ಯಾರ್ಥಿಗಳಿದ್ದಾರೆ.
- ನವೆಂಬರ್ 20ರಂದು ಕಾಲೇಜಿಗೆ ಬಂದವರು ಕೇವಲ 36 ವಿದ್ಯಾರ್ಥಿಗಳು.
- ಕೋವಿಡ್ ಪರೀಕ್ಷೆ ಒಳಗಾದವರು ಬರೀ 467 ವಿದ್ಯಾರ್ಥಿಗಳು.
ಹಾಜರಾತಿ ಕಡಿಮೆಗೆ ಕಾರಣವೇನು?
ಕೋವಿಡ್ ಆತಂಕವೇ ಹಾಜರಾತಿ ಕಡಿಮೆಯಾಗಲು ಕಾರಣವಾದರೂ, ವಿದ್ಯಾರ್ಥಿಗಳು ಆನ್‍ಲೈನ್ ಕ್ಲಾಸ್‍ಗೆ ಒಗ್ಗಿ ಹೋಗಿದ್ದಾರೆ. ಆಫ್‍ಲೈನ್‍ಗಿಂತಲೂ ಆನ್‍ಲೈನ್ ತರಗತಿಯೇ ಉತ್ತಮ ಎಂದು ಭಾವಿಸಿದಂತಿದೆ.
ಕುವೆಂಪು ವಿವಿಯಲ್ಲಿ ಎಲ್ಲವೂ ಸೇಫ್
ಇತ್ತ ವಿದ್ಯಾರ್ಥಿಗಳು, ಪೋಷಕರಲ್ಲಿ ಕುವೆಂಪು ವಿಶ್ವವಿದ್ಯಾಲಯ ಭರವಸೆ ಮೂಡಿಸಿದೆ. ಶಿವಮೊಗ್ಗ ಲೈವ್.ಕಾಂಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಕುವೆಂಪು ವಿವಿ ಕುಲಪತಿ ಪ್ರೊ.ವೀರಭದ್ರಪ್ಪ ಅವರು, ಎಲ್ಲಾ ಸುರಕ್ಷಿತ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಸಂದರ್ಶನದ ಸಂಪೂರ್ಣ ವಿಡಿಯೋ ರಿಪೋರ್ಟ್ ಇಲ್ಲಿದೆ.
ಜಿಲ್ಲೆಯಲ್ಲಿ ಕರೋನ ಸೋಂಕು ಹರಡುವ ಪ್ರಮಾಣ ತಗ್ಗಿದೆ. ಆದರೆ ಎರಡನೆ ಅಲೆಯ ಭೀತಿ ಇದೆ. ಇದು ಕೂಡ ವಿದ್ಯಾರ್ಥಿಗಳು, ಪೋಷಕರಲ್ಲಿ ಆತಂಕ ಮೂಡಿಸಿರಬಹುದು.
ALSO READ | SPECIAL REPORT | ಶಿವಮೊಗ್ಗದಲ್ಲಿ ಶೇ.2ಕ್ಕೆ ಕುಸಿದ ಕರೋನ, ಎರಡನೆ ಅಲೆ ಭೀತಿಯಲ್ಲಿ ಆಡಳಿತ, ಕಾರಣಗಳೇನು ಗೊತ್ತಾ?
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422