ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 10 APRIL 2024
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
EDUCATION NEWS : 2023-24ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದೆ. ಶಿವಮೊಗ್ಗ ಜಿಲ್ಲೆಯ ಮೂವರು ವಿದ್ಯಾರ್ಥಿಗಳು ರಾಜ್ಯಮಟ್ಟದ ರ‍್ಯಾಂಕ್ ಪಡೆದಿದ್ದಾರೆ.
ಯಾರೆಲ್ಲ ರ‍್ಯಾಂಕ್ ಗಳಿಸಿದ್ದಾರೆ?
ಪವನ್‌ಗೆ ಎರಡನೇ ರ‍್ಯಾಂಕ್
ಕಾಮರ್ಸ್ ವಿಭಾಗದಲ್ಲಿ 596 ಅಂಕ ಗಳಿಸಿ ರಾಜ್ಯಕ್ಕೆ ಎರಡನೇ ರ‍್ಯಾಂಕ್ ಪಡೆದಿದ್ದಾರೆ. ಶಿಕಾರಿಪುರದ ಕುಮದ್ವತಿ ಕಾಂಪೊಸಿಟ್ ಪಿಯು ಕಾಲೇಜು ವಿದ್ಯಾರ್ಥಿ. ತಂದೆ ಎಸ್.ಮಂಜುನಾಥ್ ಕುಮದ್ವತಿ ಬಿ.ಇಡ್ ಕಾಲೇಜಿನಲ್ಲಿ ಎಫ್‌ಡಿಎ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತಾಯಿ ಅನಿತಾ.ಎಂ.ಎಸ್. ಗೃಹಿಣಿ.
ಕಾಲೇಜು ಆಡಳಿತ ಮತ್ತು ಪೋಷಕರಿಂದ ಉತ್ತಮ ಸಹಕಾರ ಇತ್ತು. ಸ್ವ ಅಧ್ಯಯನ ಮಾಡುತ್ತಿದ್ದೆ. ರಾತ್ರಿ ವೇಳೆ ಓದುವುದು ನನಗೆ ಅಭ್ಯಾಸ. ತಡರಾತ್ರಿವರೆಗೂ ಓದುತ್ತಿದ್ದೆ. ಈಗ ರಾಜ್ಯಕ್ಕೆ ರ‍್ಯಾಂಕ್ ಬಂದಿರುವುದು ಖುಷಿ ತಂದಿದೆ.ಪವನ್, ಕುಮದ್ವತಿ ಪಿಯು ಕಾಲೇಜು
ಚುಕ್ಕಿಗೆ ನಾಲ್ಕನೆ ರ‍್ಯಾಂಕ್
ಕಲಾ ವಿಭಾಗದಲ್ಲಿ ಶಿವಮೊಗ್ಗದ ಡಿವಿಎಸ್ ಸ್ವತಂತ್ರ ಪಿಯು ಕಾಲೇಜು ವಿದ್ಯಾರ್ಥಿನಿ ಚುಕ್ಕಿ.ಕೆ.ಸಿ 593 ಅಂಕ ಗಳಿಸಿ 4ನೇ ರ‍್ಯಾಂಕ್ ಪಡೆದಿದ್ದಾರೆ. ಇವರು ಶಿವಮೊಗ್ಗದ ಕನ್ನಡ ಮೀಡಿಯಂ ನ್ಯೂಸ್ ಚಾನೆಲ್‌ನ ಸಂಪಾದಕ ಹೊನ್ನಾಳಿ ಚಂದ್ರಶೇಖರ್ ಮತ್ತು ವಕೀಲರಾದ ಪೂರ್ಣಮಾ ಹೆಚ್.ಎಂ ಅವರ ಪುತ್ರಿ.
ದಿನಕ್ಕೆ 4-5 ಗಂಟೆ ಅಧ್ಯಯನ ಮಾಡುತ್ತಿದ್ದೆ. ಸಹಪಾಠಿಗಳು, ಉಪನ್ಯಾಸಕರ ಜತೆ ವಿಷಯದ ಕುರಿತು ಚರ್ಚೆ ನಡೆಸಿದ್ದು ಹೆಚ್ಚಿನ ಅಂಕ ಪಡೆಯಲು ಸಹಕಾರಿಯಾಯಿತು. ಯುಪಿಎಸ್‌ಸಿ ಪರೀಕ್ಷೆ ಬರೆಯುವ ಹಂಬಲವಿದೆ. ಮುಂದೆ ಕಾನೂನು ಪದವಿ ಪಡೆದು ಜಡ್ಜ್ ಆಗುವ ಕನಸು ಕಂಡಿದ್ದೇನೆ.ಕೆ.ಸಿ.ಚುಕ್ಕಿ, ಡಿವಿಎಸ್ ಪಿಯು ಕಾಲೇಜು, ಶಿವಮೊಗ್ಗ.
ಸಾತ್ವಿಕ್‌ಗೆ 4ನೇ ರ‍್ಯಾಂಕ್
ವಿಜ್ಞಾನ ವಿಭಾಗದಲ್ಲಿ ಶಿವಮೊಗ್ಗದ ಪೇಸ್ ಪಿಯು ಕಾಲೇಜಿನ ಸಾತ್ವಿಕ್ ಕೆ.ವೈ. 595 ಅಂಕ ಗಳಿಸಿ ರಾಜ್ಯಕ್ಕೆ 4ನೇ ರ‍್ಯಾಂಕ್ ಪಡೆದಿದ್ದಾರೆ. ಮೂಲತಃ ಹೊಸನಗರ ತಾಲೂಕು ಕೋಡೂರು ಗ್ರಾಮದವರು. ತಂದೆ ಯೋಗೇಶ್ ಕೃಷಿಕರು, ತಾಯಿ ಅಪರ್ಣಾ ಗೃಹಿಣಿ.
ಉಪನ್ಯಾಸಕರು, ಪೋಷಕರ ಸಹಕಾರದಿಂದ ರ‍್ಯಾಂಕ್ ಪಡೆಯಲು ಸಾಧ್ಯವಾಯಿತು. ನಿರಂತರ ಓದಿನಿಂದ ಪರೀಕ್ಷೆ ಎದುರಿಸುವುದು ಸುಲಭವಾಯಿತು. ಇಂಜಿನಿಯರಿಂಗ್ ಮಾಡುವ ಗುರಿಯಿದೆ.ಸಾತ್ವಿಕ್, ಪೇಸ್ ಪಿಯು ಕಾಲೇಜು
ಜಿಲ್ಲೆಗೆ 8ನೇ ಸ್ಥಾನ
ಇನ್ನು, ಶಿವಮೊಗ್ಗ ಜಿಲ್ಲೆ ಫಲಿತಾಂಶದಲ್ಲಿ ಸುಧಾರಣೆ ಕಂಡಿದೆ. ಕಳೆದ ವರ್ಷ ಶೇ.83.13ರಷ್ಟು ಫಲಿತಾಂಶ ಬಂದಿತ್ತು. ಈ ವರ್ಷ ಶೇ.88.58ರಷ್ಟು ಫಲಿತಾಂಶ ಬಂದಿದೆ. ರಾಜ್ಯದಲ್ಲಿ ಶಿವಮೊಗ್ಗ ಜಿಲ್ಲೆಗೆ 8ನೇ ಸ್ಥಾನ ಲಭಿಸಿದೆ.
ಇದನ್ನೂ ಓದಿ – ಶಿವಮೊಗ್ಗದಲ್ಲಿ ನಿನ್ನೆಗಿಂತಲು ಇವತ್ತು ತಾಪಮಾನ ತುಸು ಏರಿಕೆ, ಎಷ್ಟಿರುತ್ತೆ ಇವತ್ತು ಉಷ್ಣಾಂಶ?