SHIVAMOGGA LIVE NEWS | 30 MAY 2024
EDUCATION NEWS : ದ್ವಿಚಕ್ರ ವಾಹನ ಸವಾರರಿಗೆ ಅಪಘಾತದ ಕುರಿತು ಎಚ್ಚರಿಸುವುದು, ಒಂದು ವೇಳೆ ಅಪಘಾತ ಸಂಭವಿಸಿದರೆ ತಕ್ಷಣ ಸಂಬಂಧಿಸಿದವರಿಗೆ ಮಾಹಿತಿ ತಲುಪಿಸುವ ಸ್ಮಾರ್ಟ್ ಹೆಲ್ಮೆಟ್ (Helmet) ಅಭಿವೃದ್ಧಿಪಡಿಸಲಾಗಿದೆ. ಶಿವಮೊಗ್ಗದ ಜೆಎನ್‌ಎನ್ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು ಸ್ಮಾರ್ಟ್ ಹೆಲ್ಮೆಟ್ ಸಿದ್ಧಪಡಿಸಿದ್ದಾರೆ.
ನಗರದ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ಇಂಜಿನಿಯರಿಂಗ್ ವಿಭಾಗದ ವತಿಯಿಂದ ಕಾಲೇಜಿನ ಆವರಣದಲ್ಲಿ ಏರ್ಪಡಿಸಿದ್ದ ಎಲೆಕ್ಟ್ರಾನಿಕ್ಸ್ ತಾಂತ್ರಿಕ ಪ್ರಯೋಗಗಳ ಅನಾವರಣ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ಪ್ರಜ್ವಲ್.ಎಸ್.ಎಲ್, ಉದಿತ್ ಎಂ.ಡಿ, ಶ್ರೀಕೃಷ್ಣ ಕಂಠಿ, ಮೊಹಮದ್ ಶೇಕ್ ಅವರ ತಂಡ ಸಹ ಪ್ರಾದ್ಯಾಪಕಿ ರೂಪಾ.ಬಿ.ಎಸ್ ಮಾರ್ಗದರ್ಶನದಲ್ಲಿ ರೂಪಿಸಿದ ‘ಸ್ಮಾರ್ಟ್ ಹೆಲ್ಮೆಟ್ ಫಾರ್ ಅಡ್ವಾನ್ಸ್ಡ್ ಅಸಿಸ್ಟೆನ್ಸ್ ಅಂಡ್ ಸೇಫ್ಟಿ’ ಪ್ರಾತ್ಯಕ್ಷಿಕೆ ನೀಡಿದರು.
ಹೇಗೆ ಕೆಲಸ ಮಾಡುತ್ತೆ ಸ್ಮಾರ್ಟ್ ಹೆಲ್ಮೆಟ್?
ಸ್ಮಾರ್ಟ್ ಹೆಲ್ಮೆಟ್ ಧರಿಸಿ ವಾಹನ ಚಾಲನೆ ಮಾಡುವುದರಿಂದ ಹಿಂದೆ ಬರುವ ಇತರೆ ವಾಹನಗಳನ್ನು ಚಿಕ್ಕ ಪರದೆಯ ಮೂಲಕ ಸವಾರರು ನೋಡಬಹುದು. ಇನ್ನು ತುರ್ತು ಸಂದರ್ಭ ನಿಖರ ಸ್ಥಳದ ಮಾಹಿತಿಯನ್ನು ಅಪಘಾತಕ್ಕಿಡಾದ ವ್ಯಕ್ತಿಯ ಸಂಬಂಧಿಕರಿಗೆ ತಲುಪುವಂತೆ ರೂಪಿಸಲಾಗಿದೆ. ಐಓಟಿ ತಂತ್ರಜ್ಞಾನದೊಂದಿಗೆ ರಾಸ್ಬೆರಿ ಪೈ ಮತ್ತು ಅರ್ಡಿನೊ ಮೈಕ್ರೊ ಕಂಟ್ರೊಲರ್ ಬಳಸಿ ಹೆಲ್ಮೆಟ್ ರೂಪಿಸಲಾಗಿದೆ. ಮೂರು ತಿಂಗಳ ನಿರಂತರ ಪ್ರಯೋಗಗಳು ನಡೆಸಿದ್ದೇವೆ ಎನ್ನುತ್ತಾರೆ ವಿದ್ಯಾರ್ಥಿಗಳ ತಂಡ.
ಹಲವು ಪ್ರಯೋಗಗಳ ಅನಾವರಣ
ಐಓಟಿ ಮೂಲಕ ಮೊಬೈಲ್ ಮೂಲಕವೇ ಸ್ವಯಂಚಾಲಿತವಾಗಿ ಅಡಿಕೆ ಬೇಯಿಸುವ ಮತ್ತು ಒಣಗಿಸುವ ಯೋಜನಾ ಪ್ರಾತ್ಯಕ್ಷಿಕೆಯನ್ನು ವಿದ್ಯಾರ್ಥಿಗಳಾದ ಮೊಹಮದ್ ಫೌಜಾನ್, ಚಂದನ್.ಆರ್.ಎಸ್, ಸೈಯದ್ ಮೊಹಮದ್ ನಯಾಜ್ ತಂಡ ಸಹಾಯಕ ಪ್ರಾಧ್ಯಾಪಕಿ ಪ್ರೇಮಾ.ಕೆ.ಎನ್ ಅವರ ಮಾರ್ಗದರ್ಶನದಲ್ಲಿ ರೂಪಿಸಿ ಕಾರ್ಯಕ್ರಮದಲ್ಲಿ ಪ್ರದರ್ಶಿಸಿದರು. ಇದರೊಂದಿಗೆ ಡೀಪ್ ಲರ್ನಿಂಗ್ ಮೂಲಕ ಇನ್‌ಫ್ಯಾಟ್ಸ್ ಕ್ರೈ ರೆಸ್ಪಾನ್ಸ್, ಅಂಧರಿಗಾಗಿ ಫೇಕ್ ಕರೆನ್ಸಿ ರೆಕಗ್ನಿಷನ್ ಸಿಸ್ಟಮ್, ವಿಶುಯಲ್ ಕ್ರಿಪ್ಟೊಗ್ರೆಫಿ ಸ್ಕೀಮ್ ಡಿಸೈನ್ ಬೇಸಡ್ ಆನ್ ಕ್ಯೂಆರ್ ಕೋಡ್, ವೈಫೈ ಮೂಲಕ ಡೇಟಾ ಟ್ರಾನ್ಸ್‌ಮಿಷನ್, ಮೊಬೈಲ್ ನಲ್ಲಿರುವ ತಾಂತ್ರಿಕ ಗುಣಲಕ್ಷಣಗಳನ್ನು ವಿದ್ಯಾರ್ಥಿಗಳಿಗೆ ತಿಳಿ ಹೇಳುವ ಜಿಎಸ್‌ಎಂ ಮಾಡೆಲ್ ಹೊಂದಿದ ಸೆಲ್ ಫೋನ್, ಬ್ರೈನ್ ಕಂಟ್ರೋಲ್ಡ್ ರೊಬೊಟಿಕ್ ಕಾರು, ಕೃತಕ ಬುದ್ದಿಮತ್ತೆ ಮೂಲಕ ಕ್ಷ-ಕಿರಣದಿಂದ ಶ್ವಾಸಕೋಶ ಕ್ಯಾನ್ಸರ್ ಪತ್ತೆ ಮಾಡುವ ತಂತ್ರಜ್ಞಾನ ಸೇರಿದಂತೆ ವಿದ್ಯಾರ್ಥಿಗಳ ನಾವೀನ್ಯ ಪ್ರಯೋಗಗಳು ನೋಡುಗರನ್ನು ಆಕರ್ಷಿಸಿತು.
ಪ್ರಯೋಗಗಳಿಗೆ ಬಹುಮಾನ
ಕಾರ್ಯಕ್ರಮದಲ್ಲಿ ಸಹಾಯಕ ಪ್ರಾಧ್ಯಾಪಕಿ ಡಾ.ಶೀಲಾ.ಎಸ್ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಾದ ವರುಣ.ಹೆಚ್, ಸುಮಂತ್.ಯು, ಪುರುಷೋತ್ತಮ್, ಯುವರಾಜ್ ತಂಡ ರೂಪಿಸಿದ ಡಿಸೈನ್ ಸಿಮ್ಯುಲೇಷನ್ ಅಂಡ್ ಲೇಔಟ್ ಆಫ್ ಲೋ ಡ್ರಾಪ್ ಔಟ್ ಓಲ್ಟೇಜ್ ರೆಗ್ಯುಲೇಟರ್ (ಪ್ರಥಮ ಬಹುಮಾನ), ಡಾ.ಶ್ವೇತಾ.ಹೆಚ್.ಆರ್ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಾದ ಅಂಕಿತಾ.ಬಿ, ರತ್ನಾ.ಹೆಚ್.ಜಿ, ಗಗನಾ, ಮೊಹಮದ್ ಇಸ್ಮಾಯಿಲ್ ತಂಡ ರೂಪಿಸಿದ ಆಟೊಮೆಟೆಡ್ ರೆಸ್ಪಾನ್ಸ್ ಅಂಡ್ ಕ್ಲಾಸಿಫಿಕೇಷನ್ ಆಫ್ ಇನ್ ಫ್ಯಾಂಟ್ಸ್ ಕ್ರೈ(ದ್ವಿತೀಯ ಬಹುಮಾನ), ಸ್ಮಾರ್ಟ್ ಹೆಲ್ಮೆಟ್ ಫಾರ್ ಅಡ್ವಾನ್ಸ್ಡ್ ಅಸಿಸ್ಟೆನ್ಸ್ ಅಂಡ್ ಸೇಫ್ಟಿ (ತೃತೀಯ ಬಹುಮಾನ) ಪಡೆದಿದೆ.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ.ವೈ.ವಿಜಯಕುಮಾರ್, ಸಂಶೋಧನಾ ಡೀನ್ ಡಾ.ಎಸ್.ವಿ.ಸತ್ಯನಾರಾಯಣ, ಏಕತ್ವ ಇನೊವೇಷನ್ ಕಂಪನಿ ಸಿಇಓ ವಿಕಾಸ್.ಹೆಚ್.ಸಿ, ಕ್ಯಾಡೆನ್ಸ್ ಡಿಸೈನ್ ಸಿಸ್ಟಮ್ ಇಂಜಿನಿಯರ್ ಸಂಜಯ್.ಎ.ಸಿ, ಸಂಯೋಜಕರಾದ ಡಾ.ಪ್ರಮೋದ್ ಕುಮಾರ್.ಎಸ್, ಎಸ್.ಡಿ.ನಳೀನಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200