SHIVAMOGGA LIVE NEWS, 11 DECEMBER 2024
ಶಿವಮೊಗ್ಗ : ಜವಾಹರಲಾಲ್ ನೆಹರು ರಾಷ್ಟ್ರೀಯ ಇಂಜಿನಿಯರಿಂಗ್ ಕಾಲೇಜಿನಲ್ಲಿ (JNNCE) ಡಿ.13 ಮತ್ತು 14 ರಂದು ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ಇಂಜಿನಿಯರಿಂಗ್ ವಿಭಾಗದ ವತಿಯಿಂದ ಅಂತಾರಾಷ್ಟ್ರೀಯ ವಿಚಾರ ಸಂಕಿರಣ ಆಯೋಜಿಸಲಾಗಿದೆ. ಅಂತಾರಾಷ್ಟ್ರೀಯ ಮಟ್ಟದ ಸಂಶೋಧಕರು ಮತ್ತು ಸಂಶೋಧನಾರ್ಥಿಗಳು ಭಾಗವಹಿಸುತ್ತಿದ್ದಾರೆ.
ಇದನ್ನೂ ಓದಿ » ಚಂದ್ರಯಾನ 3 ಯೋಜನೆಯಲ್ಲಿ ಶಿವಮೊಗ್ಗ ಜಿಲ್ಲೆಯ ವಿಜ್ಞಾನಿ, ಇವರು ಮಾಜಿ MLA ಪುತ್ರಿ, JNNCE ವಿದ್ಯಾರ್ಥಿನಿ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೆಎನ್‌ಎನ್ ಕಾಲೇಜು ಪ್ರಾಂಶುಪಾಲ ಡಾ. ವೈ.ವಿಜಯಕುಮಾರ್, ಕಾಲೇಜಿನ ಸರ್. ಎಂ.ವಿ.ಸಭಾಂಗಣದಲ್ಲಿ ಮಲ್ಟಿಮೀಡಿಯಾ ಪ್ರೊಸೆಸಿಂಗ್ ಮತ್ತು ತಂತ್ರಜ್ಞಾನದ ಕುರಿತು ವಿಚಾರ ಸಂಕಿರಣ ನಡೆಯಲಿದೆ ಎಂದು ತಿಳಿಸಿದರು.
ಇಂಜಿನಿಯರಿಂಗ್ ಪದವಿ ಅಂದರೆ ತರಗತಿಗಳು, ಪಠ್ಯ ಚಟುವಟಿಕೆಗೆ ಮಾತ್ರ ಸೀಮಿತವಲ್ಲ. ಇಂಜಿನಿಯರಿಂಗ್ ಕ್ಷೇತ್ರದ ನವೀನ ಸಂಶೋಧನೆಗಳ ಕುರಿತು ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕಿದೆ. ಈ ದಿಸೆಯಲ್ಲಿ ವಿಚಾರ ಸಂಕಿರಣಗಳನ್ನು ಆಯೋಜಿಸಲಾಗುತ್ತಿದೆ.
– ಡಾ. ವೈ.ವಿಜಯಕುಮಾರ್, ಪ್ರಾಂಶುಪಾಲ
ದೇಶ, ವಿದೇಶದ ಸಂಶೋಧಕರು
ಡಿ.13ರ ಬೆಳಗ್ಗೆ 10 ಗಂಟೆಗೆ ಬೆಂಗಳೂರು ಐಐಎಸ್ಸಿ ಪ್ರಾಧ್ಯಾಪಕ ಟಿ.ಶ್ರೀನಿವಾಸ್ ವಿಚಾರ ಸಂಕಿರಣ ಉದ್ಘಾಟಿಸಲಿದ್ದಾರೆ. ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್.ನಾರಾಯಣ ರಾವ್, ಅತಿಥಿಗಳಾಗಿ ಆಸ್ಟ್ರೇಲಿಯಾ ಡಿಕಿನ್ ವಿಶ್ವವಿದ್ಯಾಲಯದ ಡಾ.ಗ್ಯಾಂಗ್ ಲಿ, ಎನ್‌ಇಎಸ್ ಕಾರ್ಯದರ್ಶಿ ಎಸ್.ಎನ್.ನಾಗರಾಜ, ಐಇಇಇ ಮಂಗಳೂರು ಉಪವಿಭಾಗದ ಮುಖ್ಯಸ್ಥ ಡಾ.ವಾಸುದೇವ ಭಾಗವಹಿಸಲಿದ್ದಾರೆ. ಕಾಲೇಜಿನ ಪ್ರಾಂಶುಪಾಲರಾದ ಡಾ.ವೈ.ವಿಜಯಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಶೈಕ್ಷಣಿಕ ಡೀನ್ ಡಾ.ಪಿ.ಮಂಜುನಾಥ, ಸಂಶೋಧನಾ ಡೀನ್ ಡಾ.ಎಸ್.ವಿ.ಸತ್ಯನಾರಾಯಣ ಉಪಸ್ಥಿತರಿರಲಿದ್ದಾರೆ.
ಎರಡು ವರ್ಷಕ್ಕೆ ಒಮ್ಮೆ ಈ ವಿಚಾರ ಸಂಕಿರಣ ನಡೆಸುತ್ತಿದ್ದೇವೆ. ಕೋವಿಡ್ ಸಂದರ್ಭ ಮಾತ್ರ ಆನ್‌ಲೈನ್‌ನಲ್ಲಿ ವಿಚಾರ ಸಂಕಿರಣ ನಡೆಯಿತು. ಈ ಬಾರಿ ದೇಶದ ನಾನಾ ಕಡೆಯಿಂದ 333 ಸಂಶೋಧನ ಪ್ರಬಂಧಗಳು ಪರಿಶೀಲನೆಗೆ ಬಂದಿದ್ದವು. 102 ಸಂಶೋಧನ ಪ್ರಬಂಧಗಳು ಆಯ್ಕೆ ಆಗಿದ್ದವು. ಈ ಪೈಕಿ 60 ಅಭ್ಯರ್ಥಿಗಳು ಪ್ರಬಂಧಗಳನ್ನು ಪ್ರಸ್ತುತಪಡಿಸಲಾಗುತ್ತಿದೆ.
– ಡಾ. ಎಸ್.ವಿ.ಸತ್ಯನಾರಾಯಣ, ಡೀನ್, ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್
ಎರಡು ದಿನ ವಿಚಾರ ಸಂಕಿರಣದಲ್ಲಿ ವಿವಿಧ ಗೋಷ್ಠಿಗಳು ನಡೆಯಲಿವೆ. ಡಿ.14ರ ಸಂಜೆ 4ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಬೆಂಗಳೂರಿನ ತೇಜಸ್ ನೆಟ್ ವರ್ಕ್ ಉಪಾಧ್ಯಕ್ಷ ಅನಿನ್‌ಧ್ಯ ಸಹ, ಇನ್ಫೋಸಿಸ್ ಕಂಪನಿ ಸಹ ಉಪಾಧ್ಯಕ್ಷೆ ಜ್ಞಾನಪ್ರಿಯಾ, ಎನ್‌ಇಎಸ್ ಖಜಾಂಚಿ ಡಿ.ಜಿ.ರಮೇಶ್ ಸೇರಿದಂತೆ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ » ಹೆದ್ದಾರಿಯಲ್ಲಿ ಗುಂಡಿ ಮುಚ್ಚಿದ ಸಂಸದ, ಗಮನ ಸೆಳೆದ JNNCE ಆವಿಷ್ಕಾರ
ಸುದ್ದಿಗೋಷ್ಠಿಯಲ್ಲಿ ಸಹ ಪ್ರಾಧ್ಯಾಪಕರಾದ ಡಾ. ಶೀಲಾ, ಡಾ. ಪ್ರಮೋದ್, ಸಾರ್ವಜನಿಕ ಸಂಪರ್ಕಾಧಿಕಾರಿ ಸಿ.ಎಂ.ನೃಪತುಂಗ, ಗುರುರಾಜ್ ಇದ್ದರು.
ಇದನ್ನೂ ಓದಿ » ಶಿವಮೊಗ್ಗದಲ್ಲಿ ಅರ್ಧಕ್ಕೆ ಹಾರಿದ ತ್ರಿವರ್ಣ ಧ್ವಜ, ಪ್ರಮುಖರಿಂದ ಸಂತಾಪ, ಯಾರೆಲ್ಲ ಏನೆಲ್ಲ ಹೇಳಿದ್ದಾರೆ?