ಶಿವಮೊಗ್ಗ : ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಇರುವ ಖಾಲಿ ಜಾಗಕ್ಕೆ (fencing) ರಾತ್ರೋರಾತ್ರಿ ಬೇಲಿ ಹಾಕಲಾಗಿದೆ. ಇದು ವಿವಾದದ ಸ್ವರೂಪ ಪಡೆದು ಸ್ಥಳದಲ್ಲಿ ಕೆಲ ಹೊತ್ತು ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಸ್ಥಳಕ್ಕೆ ದೌಡಾಯಿಸಿದ ಜಿಲ್ಲಾ ರಕ್ಷಣಾಧಿಕಾರಿ ಪರಿಸ್ಥಿತಿ ತಿಳಿಗೊಳಿಸಿದರು.
ಇದನ್ನೂ ಓದಿ » ಶಿವಮೊಗ್ಗದಲ್ಲಿ ನಡೆಯಬೇಕಿದ್ದ ಮೊದಲ ಕಂಬಳ ರದ್ದು, ಯಾಕೆ? ಮುಂದೆ ನಡೆಯುತ್ತಾ?
![]() |
ದಿಢೀರ್ ಪ್ರತ್ಯಕ್ಷವಾದ ಬೇಲಿ
ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಇರುವ ಖಾಲಿ ಜಾಗದ ಪ್ರವೇಶ ದ್ವಾರಕ್ಕೆ ಬೇಲಿ (fencing) ಹಾಕಲಾಗಿದೆ. ಎಂದಿನಂತೆ ಖಾಲಿ ಜಾಗದಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡಲು ಸಾದ್ಯವಾಗದೆ, ಸವಾರರು ರಸ್ತೆಯಲ್ಲೆ ನಿಲ್ಲಿಸಿದ್ದರು. ಇದರಿಂದ ಸಂಚಾರ ದಟ್ಟಣೆ ಉಂಟಾಗಿತ್ತು. ವಿಷಯ ತಿಳಿಯುತ್ತಿದ್ದಂತೆ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಸ್ಥಳಕ್ಕೆ ದೌಡಾಯಿಸಿ ಬೇಲಿ ತೆರವುಗೊಳಿಸುವಂತೆ ಪಟ್ಟು ಹಿಡಿದರು.
ಪೊಲೀಸರ ಜೊತೆಗೆ ಮಾತಿನ ಚಕಮಕಿ
ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಜಮಾಯಿಸಿದ್ದರಿಂದ ಜಯನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಸಮಾಧಾನಪಡಿಸಲು ಯತ್ನಿಸಿದರು. ಈ ಸಂದರ್ಭ ಹಿಂದೂ ಕಾರ್ಯಕರ್ತರು ಮತ್ತು ಪೊಲೀಸರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಬಳಿಕ ಹಿಂದೂ ಸಂಘಟನೆಗಳ ಕಾರ್ಯಕರ್ತರು ಬೇಲಿ ಮುಂಭಾಗದಲ್ಲಿಯೇ ಧರಣಿ ಆರಂಭಿಸಿದರು.
ಇದನ್ನೂ ಓದಿ » ಶಿವಮೊಗ್ಗದಲ್ಲಿ ಕಂಡ ಚಂದ್ರ, ಪೂಜೆ ಸಲ್ಲಿಸಿ ಪುನೀತರಾದ ಜನ, ಸಿಟಿಯಲ್ಲಿ ಹೇಗಿತ್ತು ದರ್ಶನ?
ಸ್ಥಳಕ್ಕೆ ರಕ್ಷಣಾಧಿಕಾರಿ ದೌಡು
ವಿಷಯ ತಿಳಿದು ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಸ್ಥಳಕ್ಕೆ ದೌಡಾಯಿಸಿದರು. ಪ್ರತಿಭಟನಾನಿರತರ ಮನವಿ ಆಲಿಸಿದರು. ಬಳಿಕ ಮಾತನಾಡಿದ ಎಸ್.ಪಿ ಮಿಥುನ್ ಕುಮಾರ್, ‘ಬೇಲಿ (fencing) ಕುರಿತು ಮಹಾನಗರ ಪಾಲಿಕೆ ಕಮಿಷನರ್ ಜೊತೆಗೆ ಚರ್ಚೆ ನಡೆಸುತ್ತೇನೆ. ಬೇಲಿ ಹಾಕಿದವರಾರು ಎಂದು ಪರಿಶೀಲಿಸುತ್ತೇವೆ. ಇಂದು ಸಂಜೆ 7 ಗಂಟೆಯೊಳಗೆ ಬೇಲಿ ತೆರವು ಮಾಡಲಾಗುತ್ತದೆ’ ಎಂದು ಭರವಸೆ ನೀಡಿದರು.
ಇದನ್ನೂ ಓದಿ » ಕೂಡ್ಲಿಯಲ್ಲಿ ಅದ್ಧೂರಿ ಜಾತ್ರೆ, ಸಂಗಮದಲ್ಲಿ ಸಾವಿರ ಸಾವಿರ ಜನರಿಂದ ಪುಣ್ಯ ಸ್ನಾನ, ಹೇಗಿದೆ ಈ ಬಾರಿ ವೈಭವ?
ಯಾರೆಲ್ಲ ಏನೆಲ್ಲ ಹೇಳಿದರು?
ಇದು ಮಹಾನಗರ ಪಾಲಿಕೆ ಜಾಗ. ವರ್ಷಕ್ಕೆ ಎರಡು ಬಾರಿ ಇಲ್ಲಿ ಪ್ರಾರ್ಥನೆಗೆ ಅವಕಾಶ ಇದೆ. ಆದರೆ ನಿನ್ನೆ ಸಾಮೂಹಿಕ ಪ್ರಾರ್ಥನೆ ನಂತರ ರಾತ್ರಿಯೋ, ಬೆಳಗಿನ ಜಾವವೋ ಬೇಲಿ ಹಾಕಿದ್ದಾರೆ. ಇದನ್ನು ಕೂಡಲೆ ತೆರವು ಮಾಡಿ ವಾಹನಗಳ ಪಾರ್ಕಿಂಗ್‌ಗೆ ಅವಕಾಶ ನೀಡಬೇಕು. ಬೇಲಿ ಹಾಕಲು ರೈಲ್ವೆ ಹಳಿಯ ಕಂಬಿಯನ್ನು ಬಳಸಿದ್ದಾರೆ. ಕಳೆದ ವರ್ಷವು ಇದೇ ರೀತಿ ಬೇಲಿ ಹಾಕಿದ್ದಾಗ ತೆರವು ಮಾಡಿಸಿದ್ದೆವು. ಈ ಜಾಗ ಪಾಲಿಕೆಗೆ ಸೇರಿದ್ದು ಎಂಬುದಕ್ಕೆ ದಾಖಲೆಗಳಿವೆ.
– ರಮೇಶ್ ಬಾಬು ಜಾಧವ್, ಹಿಂದೂ ಮುಖಂಡ
ಡಿಸಿ ಕಚೇರಿ, ಪೊಲೀಸ್ ಠಾಣೆ, ಬ್ಯಾಂಕ್ ಮುಂಭಾಗ ಈ ಜಾಗ ಇದೆ. ವರ್ಷದಲ್ಲಿ ಎರಡು ಬಾರಿ ಪ್ರಾರ್ಥನೆಗೆ ಅವಕಾಶವಿದೆ. ಉಳಿದ ಸಂದರ್ಭ ಸಾರ್ವಜನಿಕ ಬಳಕೆಗೆ ಮೀಸಲಿಡಲಾಗುತ್ತದೆ. ನಿನ್ನೆ ನಮಾಜ್ ಮಾಡುವಾಗ ಬೇಲಿ ಇರಲಿಲ್ಲ. ಸಂಜೆ ನಂತರ ಬೇಲಿ ಹಾಕಲಾಗಿದೆ. ಆಗಲೆ ಪೊಲೀಸ್ ಇಲಾಖೆ ಇದನ್ನು ತೆರವು ಮಾಡಬೇಕಿತ್ತು. ಈ ಕೂಡಲೆ ಅಕ್ರಮ ಬೇಲಿ ತೆರವು ಮಾಡಿ ಜಾಗ ಸಾರ್ವಜನಿಕ ಉಪಯೋಗಕ್ಕೆ ಮೀಸಲಿಡಬೇಕು. ಇಲ್ಲವಾದಲ್ಲಿ ಹಿಂದು ಸಮಾಜದವರೆಲ್ಲ ಸೇರಿ ಬೇಲಿ ತೆರವು ಮಾಡುತ್ತೇವೆ.
– ದೀನದಯಾಳು, ಹಿಂದು ಮುಖಂಡ
ಬೇಲಿ ವಿವಾದದಿಂದಾಗಿ ಸ್ಥಳದಲ್ಲಿ ಕೆಲವು ಹೊತ್ತು ಗೊಂದಲ ನಿರ್ಮಾಣವಾಗಿತ್ತು. ಆದರೆ ಪೊಲೀಸರು ಪ್ರತಿಭಟನಾಕಾರರನ್ನು ಸಮಾಧನಪಡಿಸಿ ಕಳುಹಿಸಿದರು. ಅಲ್ಲದೆ ಮುಂಜಾಗ್ರತ ಕ್ರಮವಾಗಿ ಸ್ಥಳದಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.

ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200