ಶಿವಮೊಗ್ಗದಲ್ಲಿ ಹೆಚ್ಚಾಯ್ತು ಕರೋನ ಪಾಸಿಟಿವ್ ಕೇಸ್, ಇನ್ನೂರರ ಗಡಿಗೆ ಬಂತು ಒಟ್ಟು ಆಕ್ಟಿವ್ ಪ್ರಕರಣ

ಸೈಟ್‌ ಮಾರಾಟಕ್ಕಿದೆ

ಶಿವಮೊಗ್ಗದ ಬಿದಿರೆಯಲ್ಲಿ ಸೈಟ್‌ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559

ಶಿವಮೊಗ್ಗದಲ್ಲಿ ಬಿ.ಇಡಿ ಕೋರ್ಸ್‌ಗೆ ಪ್ರವೇಶಾತಿ ಆರಂಭ

⇒ ಪೂರ್ತಿ ಡಿಟೇಲ್ಸ್‌ಗೆ ಇಲ್ಲಿ ಕ್ಲಿಕ್‌ ಮಾಡಿ

ಶಿವಮೊಗ್ಗ ಲೈವ್.ಕಾಂ | SHIMOGA NEWS | 31 MARCH 2021

ಶಿವಮೊಗ್ಗದಲ್ಲಿ ಇವತ್ತು ಕರೋನ ಸೋಂಕಿತರ ಸಂಖ್ಯೆ ಮೂವತ್ತರ ಗಡಿ ದಾಟಿದೆ. ಕಳೆದ ಒಂದು ವಾರದಲ್ಲಿ ಇದೇ ಮೊದಲ ಬಾರಿಗೆ ಇಷ್ಟೊಂದು ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.

ಜಿಲ್ಲೆಯಲ್ಲಿ ಇವತ್ತು 32 ಮಂದಿಗೆ ಕರೋನ ಪಾಸಿಟಿವ್ ಬಂದಿದೆ. ಇದರಿಂದಾಗಿ ಒಟ್ಟು ಸೋಂಕಿತರ ಸಂಖ್ಯೆ 195ಕ್ಕೆ ಏರಿಕೆಯಾಗಿದೆ.

ಇವತ್ತು ಪಾಸಿಟಿವ್ ಬಂದಿರುವವರ ಪೈಕಿ ಶಿವಮೊಗ್ಗ ತಾಲೂಕಿನಲ್ಲಿ 14, ಭದ್ರಾವತಿಯಲ್ಲಿ 3, ಶಿಕಾರಿಪುರ 2, ತೀರ್ಥಹಳ್ಳಿ 6, ಸೊರಬ 5, ಹೊಸನಗರ 1, ಹೊರ ಜಿಲ್ಲೆಯಿಂದ ಬಂದಿರುವ ಒಬ್ಬರಲ್ಲಿ ಸೋಂಕ ಪತ್ತೆಯಾಗಿದೆ.

ಎರಡು ಸಾವಿರ ಮಂದಿಗೆ ನೆಗೆಟಿವ್

ಇವತ್ತು ಜಿಲ್ಲೆಯಲ್ಲಿ 2632 ಮಂದಿಯ ಸ್ಯಾಂಪಲ್ ಪಡೆದುಕೊಳ್ಳಲಾಗಿದೆ. ಇನ್ನು, ಪರೀಕ್ಷೆಗೆ ಒಳಪಟ್ಟ ಸ್ಯಾಂಪಲ್‍ಗಳ ಪೈಕಿ 2017 ಮಂದಿಯ ಸ್ಯಾಂಪಲ್‍ಗಳು ನೆಗೆಟಿವ್ ಬಂದಿದೆ. ಪಾಸಿಟಿವ್ ಬಂದಿರುವ 32 ಮಂದಿಯ ಪೈಕಿ ಏಳು ಮಂದಿ ಕಾಲೇಜು ವಿದ್ಯಾರ್ಥಿಗಳು ಮತ್ತು ಓರ್ವ ಸಿಬ್ಬಂದಿ ಇದ್ದಾರೆ.

ಹೋಂ ಐಸೊಲೇಷನ್‍ನಲ್ಲಿ ಹೆಚ್ಚು

ಸೋಂಕಿತರ ಪೈಕಿ 74 ಮಂದಿ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 37 ಮಂದಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾಗಿದ್ದಾರೆ. ಇನ್ನು ಅತಿ ಹೆಚ್ಚು ಅಂದರೆ, 84 ಮಂದಿ ಹೋಂ ಐಸೊಲೇಷನ್‍ನಲ್ಲಿದ್ದಾರೆ ಎಂದು ಜಿಲ್ಲಾಡಳಿತ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್‍ನಲ್ಲಿ ತಿಳಿಸಲಾಗಿದೆ.

ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200

ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com

Leave a Comment