ಶಿವಮೊಗ್ಗ ಲೈವ್.ಕಾಂ | SHIMOGA NEWS | 22 MAY 2021
ಶಿವಮೊಗ್ಗದಲ್ಲಿ ಕರೋನ ಅಟ್ಟಹಾಸ ಮುಂದುವರೆದಿದೆ. ಜಿಲ್ಲಾಡಳಿತ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ಪ್ರಕಾರ ಇವತ್ತು 14 ಸೋಂಕಿತರು ಸಾವನ್ನಪ್ಪಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಕೋವಿಡ್‍ಗೆ ಬಲಿಯಾದವರ ಸಂಖ್ಯೆ 686ಕ್ಕೆ ಹೆಚ್ಚಳವಾಗಿದೆ.
ಇನ್ನು, ಇವತ್ತು 662 ಮಂದಿ ಕೋವಿಡ್‍ನಿಂದ ಗುಣವಾಗಿದ್ದಾರೆ. ಆದರೆ 663 ಮಂದಿಗೆ ಇವತ್ತು ಪಾಸಿಟಿವ್ ಬಂದಿದೆ.
ಶಿವಮೊಗ್ಗ ತಾಲೂಕಿನಲ್ಲಿ 195 ಮಂದಿಗೆ ಇವತ್ತು ಪಾಸಿಟಿವ್ ಬಂದಿದೆ. ಭದ್ರಾವತಿಯಲ್ಲಿ 126, ಸಾಗರದಲ್ಲಿ 128, ತೀರ್ಥಹಳ್ಳಿಯಲ್ಲಿ 30, ಶಿಕಾರಿಪುರದಲ್ಲಿ 68, ಹೊಸನಗರದಲ್ಲಿ 30, ಸೊರಬದಲ್ಲಿ 64 ಮತ್ತು ಇತರೆ ಜಿಲ್ಲೆಯಿಂದ ಬಂದಿರುವ 22 ಮಂದಿಯಲ್ಲಿ ಕರೋನ ಪಾಸಿಟಿವ್ ಬಂದಿದೆ.
ಜಿಲ್ಲೆಯಲ್ಲಿ ಸಕ್ರಿಯ ಕರೋನ ಪ್ರಕರಣದ ಸಂಖ್ಯೆ ಮತ್ತೊಮ್ಮೆ ಏಳು ಸಾವಿರದ ಗಡಿ ದಾಟಿದೆ. ಈಗ 7121 ಮಂದಿಗೆ ಕರೋನಾಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.
# Nation’s Biggest Offer Starts Midnight at shop.bigbazaar.com. Shop for ₹1500 & get ₹1000 Cashback! Be the first to shop! https://bit.ly/3v6Fu44ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com
