| No.1 News Website |
| ಶಿವಮೊಗ್ಗ ಲೈವ್ ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್ ಹೊಂದಿರುವ ವೆಬ್‌ಸೈಟ್. ನೀವು ನಮ್ಮ ವಾಟ್ಸಪ್ ಗ್ರೂಪ್ ಸೇರಲು » ಇಲ್ಲಿ ಕ್ಲಿಕ್ ಮಾಡಿ. |
![]()
ಶಿವಮೊಗ್ಗ ಲೈವ್.ಕಾಂ | SHIMOGA NEWS | 11 ಆಗಸ್ಟ್ 2020
ಕರೋನ ಸೋಂಕಿತರ ವಿಚಾರದಲ್ಲಿ ಎರಡು ಪ್ರತ್ಯೇಕ ಹೆಲ್ತ್ ಬುಲೆಟಿನ್ ಪ್ರಕಟಗೊಳ್ಳುತ್ತಿದೆ. ಇದರಿಂದ ಜಿಲ್ಲೆಯಲ್ಲಿ ಗೊಂದಲ ಮುಂದುವರೆದಿದೆ. ಅದರಲ್ಲೂ ಸೋಮವಾರದ ರಿಪೋರ್ಟ್, ಜನರನ್ನು ಚಕಿತಗೊಳಿಸಿದೆ.
ಸೋಮವಾರದ ರಿಪೋರ್ಟ್ ಏನು?
ಶಿವಮೊಗ್ಗ ಜಿಲ್ಲಾಡಳಿತ ಹೆಲ್ತ್ ಬುಲೆಟಿನ್ ಪ್ರಕಟಿಸಿದ್ದು. ಅದರಲ್ಲಿ 210 ಮಂದಿಗೆ ಕರೋನ ಪಾಸಿಟಿವ್ ಎಂದು ದಾಖಲಾಗಿದೆ. ರಾಜ್ಯ ಸರ್ಕಾರ ಸೋಮವಾರ ಪ್ರಟಿಸಿರುವ ವರದಿಯಲ್ಲಿ ಜಿಲ್ಲೆಯಲ್ಲಿ ಯಾವುದೇ ಪ್ರಕರಣಗಳು ಪತ್ತೆಯಾಗಿಲ್ಲ ಎಂದು ತಿಳಿಸಿದೆ. ಇದು ಗೊಂದಲ ಸೃಷ್ಟಿಸಿದೆ. ತಾಂತ್ರಿಕ ಕಾರಣದಿಂದ ರಾಜ್ಯ ಸರ್ಕಾರದ ಹೆಲ್ತ್ ಬುಲೆಟಿನ್‍ನಲ್ಲಿ ಸೋಂಕಿತರ ಸಂಖ್ಯೆ ಸೊನ್ನೆ ಎಂದು ಪ್ರಕಟವಾಗಿದೆ ಎಂದು ಜಿಲ್ಲಾಡಳಿತ ಸ್ಪಷ್ಟನೆ ನೀಡಿದೆ.
ಯಾರ ವರದಿ ಸರಿ?
ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರದ ಹೆಲ್ತ್ ಬುಲೆಟಿನ್‍ಗಳು ಪ್ರತಿದಿನವು ತಾಳೆ ಆಗುವುದಿಲ್ಲ. ಇದು ಗೊಂದಲ ನಿರ್ಮಿಸಿದೆ. ರಾಜ್ಯ ಸರ್ಕಾರದ ಹೆಲ್ತ್ ಬುಲೆಟಿನ್‍ನಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2811 ಇದೆ. ಗುಣವಾಗಿ ಬಿಡುಗಡೆಯಾದವರ ಸಂಖ್ಯೆ 1212 ಇದೆ. ಜಿಲ್ಲಾಡಳಿತದ ವರದಿಯಲ್ಲಿ ಸೋಂಕಿತರ ಸಂಖ್ಯೆ 3057, ಗುಣವಾದವರ ಸಂಖ್ಯೆ 1827 ಇದೆ. ಇವೆರಡಲ್ಲಿ ಯಾವುದು ಸರಿ ಅನ್ನುವುದು ಜನರ ಗೊಂದಲವಾಗಿದೆ.
![]()
ಜಿಲ್ಲಾಡಳಿತ ಹೇಳೋದು ಏನು?
ಸೋಂಕಿತರ ವಿವರನ್ನು ಪ್ರತಿದಿನ ಜಿಲ್ಲಾಡಳಿತ ರಾಜ್ಯ ಸರ್ಕಾರಕ್ಕೆ ಕಳುಹಿಸುತ್ತದೆ. ಆದರೆ ರಾಜ್ಯ ಸರ್ಕಾರದ ವರದಿಯಲ್ಲಿ ಮಾಹಿತಿ ಪ್ರಕಟಿಸಲು ಕೆಲವು ಮಾನದಂಡ ಅನುಸರಿಸಲಾಗುತ್ತಿದೆ. ಇದೆ ಕಾರಣಕ್ಕೆ ಅಲ್ಲಿ ವಿವರ ತಡವಾಗುತ್ತಿದೆ. ಜಿಲ್ಲಾಡಳಿತ ಆಯಾ ದಿನದ ಮಾಹಿತಿಯನ್ನು ಪ್ರತಿದಿನ ಸಂಜೆ 6.30ರವರೆಗೆ ಬಂದ ರಿಪೋರ್ಟ್‍ನ ಆಧಾರದಲ್ಲಿ ವರದಿ ಪ್ರಕಟಿಸುತ್ತಿದೆ. ಹಾಗಾಗಿ ಎರಡು ವರದಿಯಲ್ಲಿ ವ್ಯತ್ಯಾಸ ಬರುತ್ತಿದೆ ಅನ್ನುತ್ತಾರೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್.
ರಾಜ್ಯ ಮಟ್ಟದ ಟಿವಿ ಚಾನೆಲ್‍ಗಳು ಬೆಂಗಳೂರಿನಲ್ಲಿ ಬಿಡುಗಡೆಯಾಗುವ ಸರ್ಕಾರದ ವರದಿ ಅಧಾರದಲ್ಲಿ ಅಂಕಿ, ಸಂಖ್ಯೆಯನ್ನು ಪ್ರಕಟಿಸುತ್ತಿವೆ. ಇದನ್ನು ಗಮನಿಸುವ ವೀಕ್ಷಕರು ಗೊಂದಲಕ್ಕೆ ಸಿಲುಕುತ್ತಿದ್ದಾರೆ. ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತದ ಒಂದೇ ರೀತಿ ಪ್ರಕಟವಾಗುವವರೆಗೆ ಈ ಗೊಂದಲ ಮುಂದುವರೆಯಲಿದೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | shivamoggalive@gmail.com
ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್ ಮೇಲೆ ಕ್ಲಿಕ್ ಮಾಡಿ, ಸುದ್ದಿ ಓದಿ.
- ಕೋಟೆ ದೇವಸ್ಥಾನದಲ್ಲಿ 30 ದಿನ ಸೀತಾಕಲ್ಯಾಣ ಶತಮಾನೋತ್ಸವ, ಏನೇನೆಲ್ಲ ಕಾರ್ಯಕ್ರಮ ಇರಲಿದೆ?
- BREAKING NEWS – ಶಿವಮೊಗ್ಗದ ಖ್ಯಾತ ಡಾಕ್ಟರ್ ಮತ್ತು ಪುತ್ರ ನೇಣಿಗೆ ಶರಣು
- ಬಿಸ್ಕತ್ತು, ಕೇಕ್, ಪಿಜ್ಜಾ, ಬೇಕರಿ ಉತ್ಪನ್ನಗಳ ತಯಾರಿಕೆ ತರಬೇತಿ, ಯಾರೆಲ್ಲ ಭಾಗವಹಿಸಬಹುದು?
- ಕ್ರೆಡಿಟ್ ಕಾರ್ಡ್ನಿಂದ ಹಣ ಕಡಿತ, ಎಸ್ಬಿಐಗೆ ಬಿಸಿ ಮುಟ್ಟಿಸಿದ ಶಿವಮೊಗ್ಗ ಗ್ರಾಹಕ ನ್ಯಾಯಾಲಯ
- ಶಿಕಾರಿಪುರದಲ್ಲಿ ಎತ್ತಿನಗಾಡಿ ಏರಿ ಸರ್ಕಾರದ ವಿರುದ್ಧ ವಿಜಯೇಂದ್ರ ಗುಟುರು, ಏನೇನು ಹೇಳಿದರು?
- ಶಿವಮೊಗ್ಗ ಸಿಟಿಯಲ್ಲಿ ಕಾಲೇಜು ಬಸ್ ಅಡ್ಡಗಟ್ಟಿದ ಅಪರಿಚಿತರು, ಮುಂದೇನಾಯ್ತು?
- BREAKING NEWS – ಶಿವಮೊಗ್ಗದ ಪ್ರಯಾಣಿಕರಿಗು ತಟ್ಟಿದ ಇಂಡಿಗೋ ರದ್ದು ಬಿಸಿ
- BREAKING NEWS – ಶಿವಮೊಗ್ಗ ಜಿಲ್ಲಾಧಿಕಾರಿ ಕಾರು ಜಪ್ತಿಗೆ ಕೋರ್ಟ್ ಆದೇಶ, ಯಾಕೆ?
![]()