SHIVAMOGGA LIVE NEWS, 3 DECEMBER 2024
ಶಿವಮೊಗ್ಗ : ಫೆಂಗಲ್ ಚಂಡಮಾರುತದ (Cyclone) ಪರಿಣಾಮ ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಇವತ್ತೂ ಮಳೆಯಾಗಿದೆ. ಚಂಡಮಾರುತ ದುರ್ಬಲವಾಗುವ ಕುರಿತು ಮಾಧ್ಯಮಗಳಲ್ಲಿ ವರದಿಯಾಗಿದ್ದು, ರೈತರು ನಿಟ್ಟುಸಿರು ಬಿಟ್ಟಿದ್ದಾರೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಸೋಮವಾರ ಮಳೆ, ರಾತ್ರಿಯು ಅಬ್ಬರ
ಫೆಂಗಲ್ ಚಂಡಮಾರುತದ ಪರಿಣಾಮ ಶಿವಮೊಗ್ಗ ಜಿಲ್ಲೆಯಲ್ಲಿ ಸೋಮವಾರ ಇಡೀ ದಿನ ಮೋಡ ಕವಿದ ವಾತಾವರಣ ಇತ್ತು. ಸಂಜೆ ವೇಳೆಗೆ ಶಿವಮೊಗ್ಗ ಮತ್ತು ಭದ್ರಾವತಿಯ ವಿವಿಧೆಡೆ ಮಳೆಯಾಗಿತ್ತು. ಜಿಲ್ಲೆಯಲ್ಲಿ ವಿವಿಧೆಡೆ ಕಳೆದ ರಾತ್ರಿ ಮಳೆಯಾಗಿದೆ. ಇವತ್ತೂ ಮೋಡ ಕವಿದ ವಾತಾವರಣವಿತ್ತು. ಮಧ್ಯಾಹ್ನದ ನಂತರ ಬಿಸಲು ಕಾಣಿಸಿಕೊಂಡಿತ್ತು.
ರೈತರಿಗೆ ಅತಂಕ ಮೂಡಿಸಿದ ಮಳೆ
ಮುಂಗಾರು ಉತ್ತಮವಾಗಿದ್ದರಿಂದ ಜಿಲ್ಲೆಯಲ್ಲಿ ಭತ್ತ, ಜೋಳ ಸೇರಿ ವಿವಿಧ ಬೆಳೆ ಬೆಳೆಯಲಾಗಿದೆ. ಉತ್ತಮ ಫಸಲು ಬಂದಿದ್ದು ಫೆಂಗಲ್ ಚಂಡಮಾರುತ ರೈತರಲ್ಲಿ ಆತಂಕ ಮೂಡಿಸಿದೆ. ಜಿಲ್ಲೆಯಲ್ಲಿ 68,757 ಹೆಕ್ಟೇರ್ನಲ್ಲಿ ಭತ್ತ, 44,040 ಹೆಕ್ಟೇರ್ನಲ್ಲಿ ಜೋಳ ಬೆಳೆಯಾಗಿದೆ.
ಜಿಲ್ಲೆಯ ವಿವಿಧೆಡೆ ಭತ್ತ ಕಟಾವು ಮಾಡಲಾಗುತ್ತಿದ್ದು ಚಂಡಮಾರುತದಿಂದಾಗಿ ಕಟಾವು ಕಾರ್ಯ ಸ್ಥಗಿತಗೊಂಡಿದೆ. ಈಗಾಗಲೇ ಕಟಾವು ಮಾಡಿದವರು ಭತ್ತ ಮತ್ತು ಹುಲ್ಲನ್ನು ಸಂರಕ್ಷಿಸಬೇಕಿದೆ. ಇನ್ನಷ್ಟೆ ಕಟಾವು ಮಾಡಬೇಕಿರುವವರು ಮುಂದೇನು ಎಂದು ಚಿಂತೆಗೀಡಾಗಿದ್ದಾರೆ.
ಇದನ್ನೂ ಓದಿ » ಭದ್ರಾ ಡ್ಯಾಮ್, ನಾಲೆಯ ಗೇಟ್ ಬಂದ್ ಮಾಡುವಾಗ ಕ್ರೇನ್ನ ಕೇಬಲ್ ಕಟ್