ಜಲಾಶಯಗಳ ಮಾಹಿತಿ: ತುಂಗಾ, ಭದ್ರಾ, ಲಿಂಗನಮಕ್ಕಿ ಜಲಾಶಯಗಳ ಇಂದಿನ ನೀರಿನ ಮಟ್ಟ.
ತುಂಗಾ ಜಲಾಶಯ
ಜಲಾಶಯದ ವ್ಯಾಪ್ತಿಯಲ್ಲಿ ಮಳೆಯಾಗಿರುವ ಹಿನ್ನೆಲೆ ಒಳಹರಿವಿನಲ್ಲಿ ಏರಿಕೆ ಕಂಡುಬಂದಿದೆ. ಜಲಾಶಯಕ್ಕೆ ಸದ್ಯ 567 ಕ್ಯೂಸೆಕ್ ಒಳಹರಿವು ಇದೆ. ಜಲಾಶಯದ ಗರಿಷ್ಠ ಮಟ್ಟ 588.24 ಮೀಟರ್. ಇಂದಿನ ನೀರಿನ ಮಟ್ಟ 586.80 ಮೀಟರ್ ತಲುಪಿದೆ. ಇನ್ನು ಜಲಾಶಯದಿಂದ ನದಿಗೆ ಒಟ್ಟು 90 ಕ್ಯೂಸೆಕ್ ನೀರನ್ನು ಹೊರಗೆ ಹರಿಸಲಾಗುತ್ತಿದೆ. ಕಳೆದ ವರ್ಷ ಇದೇ ದಿನ ಜಲಾಶಯದ ಮಟ್ಟ 587.75 ಮೀಟರ್ ಇದ್ದು, 4,935 ಕ್ಯೂಸೆಕ್ ಒಳಹರಿವು ಇತ್ತು.

ಲಿಂಗನಮಕ್ಕಿ ಜಲಾಶಯ
ಲಿಂಗನಮಕ್ಕಿ ಜಲಾಶಯದ ವ್ಯಾಪ್ತಿಯಲ್ಲಿ ಇಂದು 7.2 ಮಿ.ಮೀ ಮಳೆ ದಾಖಲಾಗಿದೆ. ಆದರೆ ಜಲಾಶಯಕ್ಕೆ ಸದ್ಯ ಯಾವುದೇ ಒಳಹರಿವು ದಾಖಲಾಗಿಲ್ಲ. ಇಂದಿನ ನೀರಿನ ಮಟ್ಟ 1751.55 ಅಡಿಗೆ ಇಳಿಕೆಯಾಗಿದ್ದು. ಮಂಗಳವಾರಕ್ಕೆ ಹೋಲಿಸಿದರೆ ನೀರಿನ ಮಟ್ಟ 0.65 ಅಡಿ ಕುಸಿತವಾಗಿದೆ. ಸದ್ಯ ಡ್ಯಾಂನಲ್ಲಿ 19.55 ಟಿಎಂಸಿ ನೀರು ಜಲಾಶಯದಲ್ಲಿದೆ. ವಿದ್ಯುತ್ ಉತ್ಪಾದನೆಗಾಗಿ ಪೆನ್‌ಸ್ಟಾಕ್ ಹಾಗೂ ಸ್ಲೂಯಿಸ್ ಗೇಟ್‌ಗಳ ಮೂಲಕ ಒಟ್ಟು 5,939 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಕಳೆದ ವರ್ಷ ಜೂನ್ 3ರಂದು ಡ್ಯಾಂ ಮಟ್ಟ 1766.20 ಅಡಿ ಇದ್ದು, 34.76 ಟಿಎಂಸಿ ನೀರಿತ್ತು.

ಭದ್ರಾ ಜಲಾಶಯ
ಭದ್ರಾ ಜಲಾಶಯದ ಇಂದಿನ ನೀರಿನ ಮಟ್ಟ 137 ಅಡಿ ನೀರಿನ ಸಂಗ್ರಹವಿದೆ. ಪ್ರಸ್ತುತ ಜಲಾಶಯದಲ್ಲಿ 24.970 ಟಿಎಂಸಿ ನೀರು ಲಭ್ಯವಿದೆ. ಡ್ಯಾಂಗೆ ಸದ್ಯ 129 ಕ್ಯೂಸೆಕ್ ಒಳಹರಿವು ಇದೆ. ಎಡ-ಬಲದಂಡೆ ನಾಲೆ ಹಾಗೂ ನದಿಗೆ ಸೇರಿ ಒಟ್ಟು 442 ಕ್ಯೂಸೆಕ್ ನೀರನ್ನು ಹೊರಗೆ ಹರಿಸಲಾಗುತ್ತಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಜಲಾಶಯದ ಮಟ್ಟ 142 ಅಡಿ 4 ಇಂಚು ಇತ್ತು. 28.515 ಟಿಎಂಸಿ ನೀರಿನ ಸಂಗ್ರಹವಿತ್ತು ಹಾಗೂ 2,419 ಕ್ಯೂಸೆಕ್ ಒಳಹರಿವು ಇತ್ತು.