ದೀಪಾವಳಿ ಗೋಪೂಜೆ, ಶಿವಮೊಗ್ಗದ ನಾಲ್ಕು ಕಡೆ ವ್ಯವಸ್ಥೆ, ಎಲ್ಲೆಲ್ಲಿ? ಯಾವಾಗ ಪೂಜೆ?

ಶಿವಮೊಗ್ಗ: ಗೋವರ್ಧನ ಟ್ರಸ್ಟ್ ವತಿಯಿಂದ ನ.9ರಂದು ನಗರದ ನಾಲ್ಕು ಸ್ಥಳಗಳಲ್ಲಿ ದೀಪಾವಳಿ ಗೋಪೂಜೆ ಆಯೋಜಿಸಲಾಗಿದೆ ಎಂದು ನಾಗಸುಬ್ರಮಣ್ಯ ದೇವಸ್ಥಾನ ಪ್ರಧಾನ ಅರ್ಚಕ ಸಂದೇಶ ಉಪಾಧ್ಯಾಯ ಹೇಳಿದರು. (ಈ ಸುದ್ದಿಯನ್ನು ಇನ್ನು 49 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 8ರಿಂದ 11ರವರೆಗೆ ಗೋಪೂಜೆ ನಡೆಯಲಿದೆ. ಸಾರ್ವಜನಿಕರು ಕುಟುಂಬ ಸಮೇತರಾಗಿ ಆಗಮಿಸಿ ಸ್ವತಃ ಗೋಪೂಜೆ ಸಲ್ಲಿಸಲು ಅವಕಾಶವಿದ್ದು, ಯಾವುದೇ ಸೇವಾ ಶುಲ್ಕ ಇರುವುದಿಲ್ಲ ಎಂದರು.

Gou-Pooje-on-Deepavali-in-Shivamogga

ಎಲ್ಲಲ್ಲಿ ನಡೆಯಲಿದೆ ಗೋಪೂಜೆ?

ವಿನೋಬನಗರದ ಶಿವಾಲಯ, ಸ್ವಾಮಿ ವಿವೇಕಾನಂದ ಬಡಾವಣೆಯ ನಾಗಸುಬ್ರಮಣ್ಯ ದೇವಸ್ಥಾನ, ಕೋಟೆ ರಸ್ತೆಯ ವಾಸವಿ ಪಬ್ಲಿಕ್ ಶಾಲೆ ಹಾಗೂ ರವೀಂದ್ರನಗರದ ಗಣಪತಿ ದೇವಸ್ಥಾನಗಳಲ್ಲಿ ಪೂಜೆ ನಡೆಯಲಿದೆ. ಹೊನ್ನಾಳಿಯ ಹಿರೇಕಲ್ಮಠದ ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ಕಾರ್ಯಕ್ರಮ ನಡೆಯಲಿದೆ. ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅಧ್ಯಕ್ಷತೆ ವಹಿಸುವರು. ಟ್ರಸ್ಟ್ ಅಧ್ಯಕ್ಷ ಕಾಂತೇಶ್ ಈಶ್ವರಪ್ಪ ಉಪಸ್ಥಿತರಿರುವರು ಎಂದರು.

ದೀಪಾವಳಿ ಹಬ್ಬದ ಆಚರಣೆಯಲ್ಲಿ ತಿಥಿಗಳಿಗೆ ವಿಶೇಷ ಮಹತ್ವವಿದೆ. ಈ ಬಾರಿ ಪಾಡ್ಯಮಿ ತಿಥಿ ಹೆಚ್ಚಿನ ಅವಧಿ ಇರುವ ಹಿನ್ನೆಲೆ ಸೋಮವಾರವೇ ಗೋಪೂಜೆ ನಡೆಸಲು ನಿರ್ಧರಿಸಲಾಗಿದೆ – ಸಂದೇಶ ಉಪಾಧ್ಯಾಯ, ಅರ್ಚಕ

ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ

ಟ್ರಸ್ಟ್ ಅಧ್ಯಕ್ಷ ಕಾಂತೇಶ್ ಈಶ್ವರಪ್ಪ, ನವ್ಯಶ್ರೀ ನಾಗೇಶ್, ರುದ್ರಾರಾಧ್ಯ, ಗುರುಗುಹ ನಾಗರಾಜ್,ಹರೀಶ್ ಕಾರ್ನಿಕ್, ದಿನೇಶ್, ಶೇಷಾಚಲ, ಆಚಾರ್ ಇದ್ದರು.