ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
DINA BHAVISHYA, 27 NOVEMBER 2024
» ಮೇಷ
ಅನಗತ್ಯ ಆಲೋಚನೆಗಳಿಂದ ಸಮಯ ವ್ಯರ್ಥ. ಪ್ರಮುಖ ಪ್ರಕರಣಗಳಲ್ಲಿ ಜಯ ಸಿಗಲಿದೆ. ಮಾತಿನ ಮೇಲೆ ನಿಗಾ ಇರಲಿ. ತಾಳ್ಮೆಯಿಂದ ಇರುವುದು ಉಚಿತ.
» ವೃಷಭ
ವ್ಯಾಪಾರ ಉದ್ದೇಶಕ್ಕೆ ದೂರ ಪ್ರಯಾಣ. ದೀರ್ಘಾವಧಿ ಲಾಭ ದೊರೆಯಲಿದೆ. ಇಂದಿನಿಂದಲೆ ಹಣ ಕೂಡಿಡುವುದನ್ನು ಆರಂಭಿಸಿ. ಭವಿಷ್ಯದಲ್ಲಿ ಉಪಯೋಗಕ್ಕೆ ಬರಲಿದೆ.
» ಮಿಥುನ
ಸಂಜೆ ವೇಳೆಗೆ ಶುಭ ಸುದ್ದಿ ಸಿಗಲಿದೆ. ಕುಟುಂಬದವರಿಗಾಗಿ ವಿಶೇಷ ಯೋಜನೆ ರೂಪಿಸುತ್ತೀರಿ. ಮನೆಯಲ್ಲಿ ನಿಮ್ಮ ಗುಣಗಳ ಬಗ್ಗೆ ಚರ್ಚೆಯಾಗಲಿದೆ. ನೆಮ್ಮದಿ ಇರಲಿದೆ.
» ಕರ್ಕಾಟಕ
ಧಾರ್ಮಿಕ ಕಾರ್ಯಗಳಿಂದ ಮಾನಸಿಕ ನೆಮ್ಮದಿ. ಮಕ್ಕಳಿಂದ ಖುಷಿ ಮತ್ತು ನೆಮ್ಮದಿ ಲಭಿಸಲಿದೆ. ನಿರೀಕ್ಷೆಗು ಮೀರಿ ಆದಾಯ ದೊರೆಯಲಿದೆ. ಆದರೂ ಚಿಂತೆ ಕಡಿಮೆಯಾಗುವುದಿಲ್ಲ.
» ಸಿಂಹ
ಕೋಪದ ಸ್ವಭಾವದಿಂದ ಹಣ ಸಂಪಾದನೆಗೆ ತೊಡಕಾಗಲಿದೆ. ಸ್ಪಷ್ಟ ಕಾರಣವೇ ಇಲ್ಲದೆ ಮಾನಸಿಕ ನೆಮ್ಮದಿ ಹಾಳಾಗುತ್ತದೆ. ಸ್ನೇಹಿತರೊಂದಿಗೆ ಮಾತುಕತೆ ಹಿತ ನೀಡಲಿದೆ.
» ಕನ್ಯಾ
ಯಾವುದೆ ಹೂಡಿಕೆಗೆ ಇಂದು ಒಳ್ಳೆಯ ದಿನವಲ್ಲ. ಜೊತೆಗಿರುವವರ ಹೊಗಳಿಕೆಯಿಂದ ಹಿಗ್ಗುತ್ತೀರಿ. ಇದರಿಂದ ತುಸು ನೆಮ್ಮದಿಯ ಭಾವ ಮೂಡಲಿದೆ. ಒತ್ತಡದ ದಿನವಾದರೂ ಆರೋಗ್ಯದ ಮೇಲೆ ಗಮನವಿರಲಿ.
» ತುಲಾ
ದುಂದು ವೆಚ್ಚಕ್ಕೆ ಕಡಿವಾಣ ಹಾಕಿ. ಅತಿಯಾದ ಖರ್ಚಿನಿಂದಾಗಿ ಕುಟುಂಬದವರು ಚಿಂತೆಗೀಡಾಗುತ್ತಾರೆ. ಆರೋಗ್ಯದ ಮೇಲೆ ಹೆಚ್ಚು ಮುತುವರ್ಜಿ ವಹಿಸಿ.
» ವೃಶ್ಚಿಕ
ಹಣದ ಅವಶ್ಯಕತೆ ಉಂಟಾಗಲಿದೆ. ಆದರೆ ಯಾರೊಬ್ಬರು ನಿಮ್ಮ ನೆರವಿಗೆ ಬರುವುದಿಲ್ಲ. ಹೊರಗಿನವರ ಕಾರಣಕ್ಕಾಗಿ ಸಂಗಾತಿಯೊಂದಿಗೆ ಜಗಳ ಮಾಡುವ ಪರಿಸ್ಥಿತಿ ನಿರ್ಮಾಣವಾಗಲಿದೆ.
» ಧನು
ಮಹತ್ವದ ನಿರ್ಧಾರ ಕೈಗೊಳ್ಳಲು ಸುಸಮಯ. ಪೋಷಕರ ಅಭಿಪ್ರಾಯ ಮುಖ್ಯವಾಗಲಿದೆ. ಆಸಕ್ತಿದಾಯ ವಿಷಯಗಳತ್ತ ಹೆಚ್ಚು ಸಮಯ ಕಳೆಯುತ್ತೀರಿ. ಧಾರ್ಮಿಕ ಕಾರ್ಯದಲ್ಲಿ ತೊಡಗುತ್ತೀರಿ.
» ಮಕರ
ಬಾಕಿ ಇರುವ ಸಾಲದ ಹಣ ಹಿಂತಿರುಗಲಿದೆ. ಕೈಗೊಂಡ ಯೋಜನೆಗಳು ಅರ್ಧಕ್ಕೆ ಸ್ಥಗಿತವಾಗಲಿದೆ. ಮನೆಯಲ್ಲಿ ಅಶಾಂತಿಯ ವಾತಾವರಣ ನಿರ್ಮಾಣ ಸಾಧ್ಯತೆ.
» ಕುಂಭ
ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯುತ್ತೀರಿ. ನಿಮ್ಮ ಸಾಮರ್ಥ್ಯದ ಕುರಿತು ಏಕಾಂತದಲ್ಲಿ ಕುಳಿತು ಯೋಚಿಸಿ. ವ್ಯಕ್ತಿತ್ವದಲ್ಲಿ ಸಕಾರಾತ್ಮಕ ಬದಲಾವಣೆಗಳು ಉಂಟಾಗಲಿದೆ.
» ಮೀನ
ಆಸ್ತಿ ವ್ಯವಹಾರದಲ್ಲಿ ಲಾಭ ದೊರೆಯಲಿದೆ. ನೆರೆ ಹೊರೆಯವರಿಂದ ತೊಂದರೆ. ಮನೆಯಲ್ಲಿ ಸಮಯ ಕಳೆಯಲು ಬಯಸುತ್ತೀರಿ. ಆದರೆ ಶಾಂತಿಯುತವಾಗಿ ಇರಲು ಸಾಧ್ಯವಾಗುವುದಿಲ್ಲ.
ಇದನ್ನೂ ಓದಿ » ಇಂದಿರಾ ಕ್ಯಾಂಟೀನ್‌ನಲ್ಲಿ ಮಿನಿಸ್ಟರ್‌ಗೆ ಹೊಟೇಲ್ ಊಟ ಪೂರೈಕೆ, ಒಂದು ದಿನದ ಬಳಿಕ ಹೊರಬಂತು ಸ್ಪಷ್ಟನೆ
Dina Bhavishya
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422