ಮಳೆಗಾಲದ ಮೇಲೆ ಪರಿಣಾಮ ಆಗುತ್ತಾ?

ಕಳೆದ ವರ್ಷ ಮಳೆ ಪ್ರಮಾಣ ತೀವ್ರ ಕುಸಿತ ಉಂಟಾಗಿತ್ತು. ಇದರಿಂದ ಶಿವಮೊಗ್ಗ ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಬರ ಆವರಿಸಿದೆ. ಈಗ ಬಿಸಿಲಿನ ಪ್ರಮಾಣ ಹೆಚ್ಚಾಗಿದ್ದು, ಈ ಬಾರಿಯು ಮಳೆಯ ಮೇಲೆ ಪರಿಣಾಮ ಉಂಟಾಗಬಹುದೆ ಎಂದು ರೈತರು ಚಿಂತೆಗೀಡಾಗಿದ್ದಾರೆ. ಆದರೆ ಜೂನ್ ತಿಂಗಳ ಹೊತ್ತಿಗೆ ಬಿಸಿಲಿನ ಬೇಗೆ ಕಡಿಮೆಯಾಗಲಿದೆ. ಆದ್ದರಿಂದ ಮುಂಗಾರು ಉತ್ತಮವಾಗಿರಲಿದೆ. ಸೆಪ್ಟೆಂಬರ್‌ನಲ್ಲಿ ಲಾ ನಿನಾ (ಎಲ್ ನಿನೋಗೆ ವಿರುದ್ಧವಾದ ವಾತಾವರಣ ಸೃಷ್ಟಿ) ಪರಿಣಾಮ ಹೆಚ್ಚಾಗಿರಲಿದೆ. ಹಿಂಗಾರು ಕೂಡ ತುಂಬಾ ಚನ್ನಾಗಿರಲಿದೆ. ಈ ಬಾರಿ ಸಮೃದ್ಧ ಮಳೆಯಾಗಲಿದೆ ಎಂದು ಹವಾಮಾನ ತಜ್ಞರು ವಿಶ್ಲೇಷಿಸಿದ್ದಾರೆ.






