GOOD MORNING, 26 AUGUST 2024
ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:
ಇನ್ನೊಬ್ಬರ ತಪ್ಪು ಹುಡುಕಲು ತುಂಬಾ ಬುದ್ಧಿವಂತಿಕೆ ಬೇಕಾಗುವುದಿಲ್ಲ. ಇನ್ನೊಬ್ಬರ ಒಳ್ಳೆಯತನ ಮೆಚ್ಚಿಕೊಳ್ಳಲು ದೊಡ್ಡ ಹೃದಯ ಬೇಕು.
ಇದನ್ನೂ ಓದಿ ⇒ ದಿನ ಭವಿಷ್ಯ | 26 ಆಗಸ್ಟ್ 2024 | ಇವತ್ತು ಯಾವ್ಯಾವ ರಾಶಿಗೆ ಹೇಗಿದೆ?
ಶಿವಮೊಗ್ಗ ಜಿಲ್ಲೆಯಾದ್ಯಂತ ಮಳೆಯಾಗುತ್ತಿದೆ. ಇದರಿಂದ ತಾಪಮಾನ ತುಸು ಇಳಿಕೆಯಾಗಿದೆ. ಶಿವಮೊಗ್ಗ, ಭದ್ರಾವತಿಯಲ್ಲಿ ಇವತ್ತು ಗರಿಷ್ಠ 27 ಡಿಗ್ರಿ ಸೆಲ್ಸಿಯಸ್, ಕನಿಷ್ಠ 21 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ. ತೀರ್ಥಹಳ್ಳಿಯಲ್ಲಿ ಗರಿಷ್ಠ 29 ಡಿಗ್ರಿ, ಕನಿಷ್ಠ 24 ಡಿಗ್ರಿ, ಹೊಸನಗರ, ಸಾಗರ, ಸೊರಬ, ಶಿಕಾರಿಪುರ ಗರಿಷ್ಠ 29 ಡಿಗ್ರಿ, ಕನಿಷ್ಠ 23 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ. ಜಿಲ್ಲೆಯ ವಿವಿಧೆಡೆ ಸಾಧಾರಣದಿಂದ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಶಿವಮೊಗ್ಗ ಲೈವ್.ಕಾಂ 
SHIMOGA CITY NEWS
![]()
ಮಾಚೇನಹಳ್ಳಿ : ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಹಾಲು ಒಕ್ಕೂಟದ ಅಧ್ಯಕ್ಷ ಸ್ಥಾನಕ್ಕೆ ಇವತ್ತು ಚುನಾವಣೆ ನಡೆಯಲಿದೆ. ಜು.14ರಂದು ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆದು 14 ನಿರ್ದೇಶಕರು ಆಯ್ಕೆಯಾಗಿದ್ದರು.
ಡಾ. ಅಂಬೇಡ್ಕರ್ ಭವನ : ದುರ್ಗಿಗುಡಿ ಕೋ-ಆಪರೇಟಿವ್ ಸೊಸೈಟಿ ವಜ್ರ ಮಹೋತ್ಸವ ಕಾರ್ಯಕ್ರಮಕ್ಕೆ ಸಂಸದ ರಾಘವೇಂದ್ರ ಚಾಲನೆ. ಸಹಕಾರ ಕ್ಷೇತ್ರ ಭ್ರಷ್ಟಾಚಾರ ಮುಕ್ತ ಮಾಡಿದರಷ್ಟೆ ಯಶಸ್ಸು ಎಂದು ಸಂಸದ ರಾಘವೇಂದ್ರ ಹೇಳಿಕೆ.
ಶಿವಮೊಗ್ಗ : ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ನಗರದ ವಿವಿಧೆಡೆ ದೇಗುಲಗಳಲ್ಲಿ ವಿಶೇಷ ಪೂಜೆ. ಶಾಲೆಗಳು ಸೇರಿದಂತೆ ವಿವಿಧೆಡೆ ಶ್ರೀ ಕೃಷ್ಣ ವೇಷಭೂಷಣ ಸ್ಪರ್ಧೆ ಆಯೋಜಿಸಲಾಗಿದೆ.
ಶಿವಮೊಗ್ಗ ಲೈವ್.ಕಾಂ
ಇದನ್ನೂ ಓದಿ ⇒ ಶಿವಮೊಗ್ಗ ಜಿಲ್ಲಾ ಒಕ್ಕಲಿಗರ ಸಂಘಕ್ಕೆ ನೂತನ ಅಧ್ಯಕ್ಷ, ಪದಾಧಿಕಾರಿಗಳು, ಅವಿರೋಧ ಆಯ್ಕೆ
TALUK NEWS
![]()
ಭದ್ರಾವತಿ : ನಗರಸಭೆ ಉಪಾಧ್ಯಕ್ಷ ಹುದ್ದೆಗೆ ಇವತ್ತು ಚುನಾವಣೆ. ಕಾಂಗ್ರೆಸ್‌ನಿಂದ ಮಣಿ, ಬಿಜೆಪಿ – ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಸವಿತಾ ಉಮೇಶ್ ಕಣಕ್ಕೆ.
ಹೊಳೆಹೊನ್ನೂರು : ತಟ್ಟೆಹಳ್ಳಿ ಚೌಡೇಶ್ವರಿ ದೇವಸ್ಥಾನ ಆವರಣದಲ್ಲಿ ಬೋನಿಗೆ ಬಿದ್ದ ಚಿರತೆ. ರಕ್ಷಣೆ ಆಡಿ ಭದ್ರಾ ಅಭಯಾರಣಕ್ಕೆ ಬಿಟ್ಟ ಅರಣ್ಯ ಇಲಾಖೆ.
ಶಿಕಾರಿಪುರ : ಉಡುತಡಿ ಅಕ್ಕಮಹಾದೇವಿ ಜನಸ್ಥಳದ ಕಲ್ಯಾಣಿಗೆ ಬಿದ್ದು ಯುವಕ ಸಾವು. ತಾಹೀರ್ (21) ಮೃತ ದುರ್ದೈವಿ.
ಸೊರಬ : ಸ್ಥಳೀಯ ಸಂಸ್ಥೆಗಳ ನಾಮ ನಿರ್ದೇಶನ ಸ್ಥಾನಗಳಿಗೆ ಮಾದಿಗ, ಚೆನ್ನಯ್ಯ ಸಮಾಜಗಳನ್ನು ಸಚಿವ ಮಧು ಬಂಗಾರಪ್ಪ ನಿರ್ಲಕ್ಷಿಸುತ್ತಿದ್ದಾರೆ. ಸಮಾಜದ ಮುಖಂಡ ಗುರುರಾಜ್ ಆರೋಪ.
ಸಾಗರ : ಪ್ರೆಸ್ ಟ್ರಸ್ಟ್, ಕಾರ್ಯನಿರತ ಪತ್ರಕರ್ತರ ಸಂಘ, ಕೊಡಚಾದ್ರಿ ವಸತಿ ಶಾಲೆ ವತಿಯಿಂದ ಹಸಿರುಮಕ್ಕಿಯಲ್ಲಿ ಶರಾವತಿ ಹಿನ್ನೀರಿಗೆ ಬಾಗಿನ ಅರ್ಪಣೆ.
LATEST NEWS
- ಮಹಿಳೆಯರೆ ಎಚ್ಚರ, ಶಿವಮೊಗ್ಗ KSRTC ನಿಲ್ದಾಣದಲ್ಲಿ ಬಸ್ ಹತ್ತುವಾಗ ಹುಷಾರ್, ಆಗಿದ್ದೇನು?

- ಶಿವಮೊಗ್ಗದಲ್ಲಿ ಆಟೋ ಪಲ್ಟಿ, ಗ್ಲಾಸ್ ಪೀಸ್ ಪೀಸ್, ಮುಂಭಾಗ ಜಖಂ, ಕಾರಣವೇನು?

- ಶಿವಮೊಗ್ಗಕ್ಕೆ ಬರ್ತಿದ್ದಾರೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಲ್ಲೆಲ್ಲಿ ತೆರಳಲಿದ್ದಾರೆ?

- ಹಸಿದ ಚಿರತೆ ಮರಿ ರಕ್ಷಣೆ, ತಾಯಿ ಚಿರತೆಯ ಭೀತಿಯಲ್ಲಿ ಜನ, ಎಲ್ಲಿ? ಏನಿದು ಪ್ರಕರಣ?

- ನಗದು ತುಂಬಿದ್ದ ಪರ್ಸ್ ವಾರಸುದಾರರಿಗೆ ವಾಪಸ್, ಆಯನೂರು ನಿವಾಸಿಗಳ ಕಾರ್ಯಕ್ಕೆ ಮೆಚ್ಚುಗೆ

About The Editor
ನಿತಿನ್ ಆರ್.ಕೈದೊಟ್ಲು






