ಗುಡ್‌ ಮಾರ್ನಿಂಗ್‌ ಶಿವಮೊಗ್ಗ | ಒಂದೇ ಕ್ಲಿಕ್‌ನಲ್ಲಿ ಇಡೀ ಜಿಲ್ಲೆಯ ಕಂಪ್ಲೀಟ್‌ ನ್ಯೂಸ್‌

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

GOOD MORNING SHIMOGA, 29 JULY 2024 : ಒಂದೊಂದೇ ಸಾಲಿನಲ್ಲಿ ಶಿವಮೊಗ್ಗ ಜಿಲ್ಲೆಯ ಕಂಪ್ಲೀಟ್‌ ಸುದ್ದಿ ಕೊಡುವ ಪ್ರಯತ್ನ, ಗುಡ್‌ ಮಾರ್ನಿಂಗ್‌ ಶಿವಮೊಗ್ಗ. ಇವತ್ತಿನಿಂದ ನಿಮ್ಮ ಶಿವಮೊಗ್ಗ ಲೈವ್.ಕಾಂನಲ್ಲಿ ನಿತ್ಯ ಪ್ರಕಟವಾಗಲಿದೆ.

#fed740 - SHUBODAYA-SHIVAMOGGA

‘ಮನುಷ್ಯ ತನ್ನ ಕೆಲಸದಿಂದ ಶ್ರೇಷ್ಠನಾಗುತ್ತಾನೆಯೇ ಹೊರತು ಹುಟ್ಟಿನಿಂದ ಅಲ್ಲ.’

 

 ಶಿವಮೊಗ್ಗ ಸಿಟಿ‌ ಸುದ್ದಿ 

#d4dcdcಮಲವಗೊಪ್ಪ : ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ ಕಚೇರಿಯಲ್ಲಿ ನೀರಾವರಿ ಸಲಹಾ ಸಮಿತಿ ಸಭೆ. ನಾಲೆಗಳಿಗೆ ನೀರು ಹರಿಸಲು ಸಚಿವ ಮಧು ಬಂಗಾರಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೀರ್ಮಾನ.


#d4dcdcಪತ್ರಿಕಾ ಭವನ : ಮುಸ್ಲಿಮರನ್ನು ಸಂತೃಪ್ತಿ ಪಡಿಸಲು ರಾಮನಗರದ ಹೆಸರು ಬದಲಾವಣೆಗೆ ಸರ್ಕಾರ ಮುಂದಾಗಿದೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಆರೋಪಿಸಿದರು. ಹಿಂದುಳಿದ ವರ್ಗಕ್ಕೆ ಮೀಸಲಿಟ್ಟ 312 ಕೋಟಿ ರೂ. ರದ್ದು ಕ್ರಮ ಸರಿಯಲ್ಲ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.


#d4dcdcಗುಡ್ಡೇಕಲ್‌ : ಶ್ರೀ ಬಾಲಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಆಡಿಕೃತ್ತಿಕೆ ಹರೋಹರ ಜಾತ್ರೆ ಸಂಪನ್ನ. ವಿವಿಧೆಡೆಯಿಂದ ಕಾವಡಿ ಹೊತ್ತು ಬಂದು ಹರಕೆ ತೀರಿಸಿದ ಭಕ್ತರು.


#d4dcdcಖಾಸಗಿ ಆಸ್ಪತ್ರೆ : ವಯೋಸಹಜ ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿರುವ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಆರೋಗ್ಯ ವಿಚಾರಿಸಿದ ಶಾಸಕ ಆರಗ ಜ್ಞಾನೇಂದ್ರ.


#d4dcdcಮಾಚೇನಹಳ್ಳಿ : ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಯ ವ್ಯಾಪ್ತಿಯ ಶಿವಮೊಗ್ಗ ಹಾಲು ಒಕ್ಕೂಟದ ಆಡಳಿತ ಮಂಡಳಿ ಚುನಾವಣೆಗೆ ವೇಳಾಪಟ್ಟಿ ಪ್ರಕಟ. ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭ. ಆ.14ರಂದು ಮತದಾನ ನಡೆಯಲಿದೆ.

GOOD-MORNING-SHIVAMOGGA-BAND

 ತಾಲೂಕು ನ್ಯೂಸ್‌ 

#d4dcdcಭದ್ರಾವತಿ : ಕೇಂದ್ರ ಸಚಿವ ಹೆಚ್‌.ಡಿ.ಕುಮಾರಸ್ವಾಮಿ ಆರೋಗ್ಯ ಸುಧಾರಣೆಗೆ ವಿಐಎಸ್‌ಎಲ್‌ ಕಾರ್ಮಿಕರಿಂದ ವಿಶೇಷ ಪೂಜೆ. ಕಾರ್ಖಾನೆ ಗೇಟ್‌ ಮುಂಭಾಗದ ಗಣಪತಿ ದೇವಸ್ಥಾನದಲ್ಲಿ ಪೂಜೆ.


#d4dcdcಭದ್ರಾವತಿ : ಎಂ.ಸಿ.ಹಳ್ಳಿಯ ಭದ್ರಗಿರಿ ಶಿವಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಿಜೃಂಭಣೆಯ ಕಾವಡಿ ಜಾತ್ರೆ. ಭದ್ರಾವತಿ, ತರೀಕೆರೆ, ಚಿಕ್ಕಮಗಳೂರು, ಶಿವಮೊಗ್ಗ ಸೇರಿದಂತೆ ವಿವಿಧೆಡೆಯ ಭಕ್ತರು ಭಾಗಿ.


#d4dcdcಸಾಗರ : ಲಿಂಗನಮಕ್ಕಿ ಜಲಾಶಯಕ್ಕೆ ಬಂದರು ಮತ್ತು ಮೀನುಗಾರಿಕೆ ಸಚಿವ ಮಂಕಾಳ ವೈದ್ಯ ಭೇಟಿ. ಶರಾವತಿ ನದಿಗೆ ಪೂಜೆ. ಪ್ರವಾಹ ಉಂಟಾಗದಂತೆ ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ.


#d4dcdcಸಾಗರ : ಹಳೆ ದ್ವೇಷಕ್ಕೆ ಮನೆ ಕಾಂಪೌಂಡ್‌ ಒಳಗೆ ಗಾಂಜಾ ಎಸೆದ ಪ್ರಕರಣ ಸಂಬಂಧ ಮೆಸ್ಕಾಂ ಇಂಜಿನಿಯರ್‌ ಬಂಧಿಸಿದ ಸಾಗರ ಪೊಲೀಸರು. ಹುಲ್ಲತ್ತಿಯ ಜಿತೇಂದ್ರ ಎಂಬುವವರ ಮನೆ ಕಾಂಪೌಂಡ್‌ ಒಳಗೆ ಗಾಂಜಾ ಎಸೆದ ಆರೋಪವಿತ್ತು.


#d4dcdcತೀರ್ಥಹಳ್ಳಿ : ಭಾರಿ ಮಳೆಯಿಂದಾಗಿ ಅಡಿಕೆ ಬೆಳೆಗಾರರಿಗೆ ಸಂಕಷ್ಟ. ಕೊಳೆ ರೋಗದಿಂದ ಅಡಿಕೆ ಉದುರುತ್ತಿದೆ. ಬೆಳೆಗಾರರಿಗೆ ಕೂಡಲೆ ಪರಿಹಾರ ನೀಡಬೇಕು. ಸಹಕಾರ ವೇದಿಕೆ ಮುಖ್ಯಸ್ಥ ಕಡ್ತೂರು ದಿನೇಶ್‌ ಆಗ್ರಹ.


#d4dcdcಶಿಕಾರಿಪುರ : ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಐಕ್ಯೂಎಸಿ ಹಾಗೂ ಪಠ್ಯೇತರ ಚುಟುವಟಿಕೆ ಘಟಕಗಳ ವಾರ್ಷಿಕೋತ್ಸವ ಉದ್ಘಾಟಿಸಿದ ವಿಧಾನ ಪರಿಷತ್‌ ಸದಸ್ಯ ಧನಂಜಯ ಸರ್ಜಿ. ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಸಾಧನೆಯ ಕನಸು ಕಾಣುವಂತೆ ಸಲಹೆ.


#d4dcdcಸೊರಬ : ಜೆಡಿಎಸ್‌ ಪಕ್ಷದ ಮುಖಂಡರ ಸಭೆ. ಅತಿವೃಷ್ಟಿಯಿಂದ ನಷ್ಟ ಅನುಭವಿಸಿದ ರೈತರಿಗೆ ಸರ್ಕಾರ ಶೀಘ್ರ ಪರಿಹಾರ ಬಿಡುಗಡೆ ಮಾಡಬೇಕು ಎಂದು ಜೆಡಿಎಸ್‌ ರಾಜ್ಯ ಕಾರ್ಯದರ್ಶಿ ಕೆ.ಅಜ್ಜಪ್ಪ ಒತ್ತಾಯ.


#d4dcdcಹೊಸನಗರ : ರಸ್ತೆ ರಿಪೇರಿಗೆ ಆಡಳಿತಯಂತ್ರ ಗಮನ ಹರಿಸದ ಹಿನ್ನೆಲೆ, ಗ್ರಾಮಸ್ಥರಿಂದಲೆ ದುರಸ್ತಿ. ಹೆಬ್ಬಿಗೆ, ಬರುವೆ ಸಂಪರ್ಕಿಸುವ ಕಲ್ಯಾಣಿಚೌಕ ರಸ್ತೆಯನ್ನು ಗ್ರಾಮಸ್ಥರೆ ದುರಸ್ತಿ ಮಾಡಿದರು.

shivamogga live news whatsappa number

ಇದನ್ನೂ ಓದಿ ⇓

ಯಾವುದೇ ಕ್ಷಣ ಭದ್ರಾ ಜಲಾಶಯದ ಗೇಟುಗಳು ಓಪನ್‌, ನಾಲೆಗಳಿಗು ನೀರು

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : July 30, 2024

Leave a Comment