ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 25 DECEMBER 2022
ಶಿವಮೊಗ್ಗ : ಸರ್ಕಾರಿ ನೌಕರರ ವಿಕಾಸ ಕೇಂದ್ರದಿಂದ ಹೊಸ ವರ್ಷಾಚರಣೆ (new year celebration) ನಿಮಿತ್ತ ಡಿ. 31ರಂದು ಬಸವನಗುಡಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಆಫೀಸರ್ ಕ್ಲಬ್‌ನಲ್ಲಿ ನವ ಸಂವತ್ಸರ ಆಚರಿಸಲಾಗುವುದು ಎಂದು ಸಿ.ಎಸ್. ಷಡಾಕ್ಷರಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಷಡಾಕ್ಷರಿ ಅವರು, ಎರಡೂವರೆ ಎಕರೆ ಜಾಗದಲ್ಲಿ ಹೈಟೆಕ್ ಕ್ಲಬ್ ನಿರ್ಮಿಸಿದ್ದು, ಹೊಸ ವರ್ಷಾಚರಣೆಯನ್ನು (new year celebration) ಕ್ಲಬ್‌ನಲ್ಲೇ ಆಚರಿಸಲು ನಿರ್ಧರಿಸಲಾಗಿದೆ. ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ, ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್, ಜಿಲ್ಲಾ ಪಂಚಾಯಿತಿ ಸಿಇಒ ಎನ್.ಡಿ. ಪ್ರಕಾಶ್ ಪಾಲ್ಗೊಳ್ಳುವರು ಎಂದರು.
ಇದನ್ನೂ ಓದಿ – ಎನ್.ಪಿ.ಎಸ್ ವಿರುದ್ಧ ನಿರ್ಣಾಯಕ ಹೋರಾಟಕ್ಕೆ ಸಮಯ ಫಿಕ್ಸ್, ಅಖಾಡಕ್ಕಿಳಿಯಲು ಸಿದ್ಧವಾಗಿದೆ ಸಂಘ, ಯಾವಾಗ?
ನವ ಸಂವತ್ಸರ ಕಾರ್ಯಕ್ರಮದಲ್ಲಿ ರಾತ್ರಿ 7ರಿಂದ 12ರವರೆಗೆ ವಿಶೇಷ ಗಾಯನ, ಸಂಗೀತ ರಸ ಸಂಜೆ ಏರ್ಪಡಿಸಲಾಗಿದೆ. ಗಾನಕೋಗಿಲೆ ಯುವರಾಜ್, ಸರಿಗಮಪ ಖ್ಯಾತಿಯ ಸುಬ್ರಹ್ಮಣ್ಯ ಪೊಲೀಸ್, ದರ್ಶನ್, ಅಂಕಿತಾ ಕೊಂಡು, ಸ್ಯಾಕ್ಸೋಫೋನ್ ಸಂದೀಪ್ ಭಾಗವಹಿಸಲಿದ್ದಾರೆ ಎಂದು ಷಡಾಕ್ಷರಿ ತಿಳಿಸಿದರು.
ಕ್ಲಬ್ ಮನೋರಂಜನಾ ಕೇಂದ್ರ, ಷಟಲ್ ಬ್ಯಾಡ್ಮಿಂಟನ್, ಕೇರಂ, ಚೆಸ್, ಟೇಬಲ್ ಟೆನ್ನಿಸ್, ಮಲ್ಟಿ ಜಿಮ್, ಮಕ್ಕಳ ಕ್ರೀಡೆಗಳು, ಚಾಟ್ಸ್, ರೆಸ್ಟೋರೆಂಟ್, ಅತಿಥಿಗೃಹ ಮತ್ತು ಮಿನಿ ಪಾರ್ಟಿ ಹಾಲ್ ಹೊಂದಿದೆ. ಕ್ಲಬ್‌ನಲ್ಲಿ ಪ್ರತಿದಿನ ಬೆಳಗ್ಗೆ 5.30ರಿಂದ 6.30ರವರೆಗೆ ಯೋಗ, ಧ್ಯಾನ ಇರಲಿದೆ ಎಂದು ತಿಳಿಸಿದರು.

LATEST NEWS
- ಶಿವಮೊಗ್ಗ ವಿಮಾನ ನಿಲ್ದಾಣ, ಮಹತ್ವದ ಟೆಸ್ಟ್ನಲ್ಲಿ ಪಾಸ್, DoVR ಕೆಲಸ ಶುರು, ಏನಿದು? ಪ್ರಯೋಜನ ಏನು?

- ಶಿವಮೊಗ್ಗ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿಯು ಹೆಚ್ಚಿದ ತಾಪಮಾನ? ಇವತ್ತು ಎಷ್ಟಿರುತ್ತೆ?

- ಭಟ್ಕಳದ ಮಹಿಳೆ ಸೇರಿ ನಾಲ್ವರು ನಗರ ಠಾಣೆ ಪೊಲೀಸರ ಬಲೆಗೆ, ಕಾರಣವೇನು? ಏನೇನೆಲ್ಲ ಸಿಕ್ತು?

- ಇಂದಿನ ಪಂಚಾಂಗ – ಯಾವ್ಯಾವ ಸಮಯ ಯಾವಾಗಿದೆ?

- ಶಿವಮೊಗ್ಗದ ದೇಗುಲಗಳಿಗೆ ಸಂಜೆ ಬಳಿಕ ಹೆಚ್ಚಿದ ಭಕ್ತರು, ವಿಶೇಷ ಪೂಜೆ

About The Editor
ನಿತಿನ್ ಆರ್.ಕೈದೊಟ್ಲು


CLICK & JOIN – SHIVAMOGGA LIVE COMMUNITY



