ಶಿವಮೊಗ್ಗ ಲೈವ್.ಕಾಂ | BANGALORE / SHIMOGA NEWS | 25 ಆಗಸ್ಟ್ 2021
ಕೆಸರುಮಯ ರಸ್ತೆಯಲ್ಲಿ ಸಸಿ ನೆಟ್ಟು ದುರವಸ್ಥೆ ವಿರುದ್ಧ ಬೊಂಬಳಿಗೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರು. ಈ ಕುರಿತು ಶಿವಮೊಗ್ಗ ಲೈವ್.ಕಾಂ ವರದಿ ಪ್ರಕಟಿಸುತ್ತಿದ್ದಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಆರಗ ಜ್ಞಾನೇಂದ್ರ, ಬೊಂಬಳಿಗೆ ಮೇಲುಕೊಪ್ಪದ ಮೂಲಕ ಒಂದು ರಸ್ತೆ ಇದೆ. ಕಾಲು ಸಂಕವನ್ನು ಕೂಡ ಮಾಡಿಸಿದ್ದೇವೆ. ಆದಷ್ಟು ಬೇಗ ಗ್ರಾಮಕ್ಕೆ ರಸ್ತೆ ಮಾಡಿಸುತ್ತೇವೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ರಸ್ತೆ ಸಂಪೂರ್ಣ ಹದಗೆಟ್ಟಿದ್ದರಿಂದ ಗ್ರಾಮಸ್ಥರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಕೆಸರು ಗದ್ದೆಯಂತಾಗಿದ್ದ ರಸ್ತೆಯಲ್ಲಿ ಸಸಿ ನೆಟ್ಟು ಪ್ರತಿಭಟನೆ ನಡೆಸಿದ್ದರು. ಈ ಕುರಿತು ಇವತ್ತು ಬೆಳಗ್ಗೆ ಶಿವಮೊಗ್ಗ ಲೈವ್.ಕಾಂ ವರಿದ ಪ್ರಕಟಿಸಿತ್ತು. ಬೊಂಬಳಿಗೆ ಗ್ರಾಮಸ್ಥರ ಸಂಕಷ್ಟ ಕುರಿತ ವರದ ಇಲ್ಲಿದೆ. ಈ ಲಿಂಕ್ ಕ್ಲಿಕ್ ಮಾಡಿ – ರಸ್ತೆಯಲ್ಲೇ ನಾಟಿ ಮಾಡಿದ ಗ್ರಾಮಸ್ಥರು, ಇಲ್ಲಿಂದ ‘ಸ್ವರ್ಗಕ್ಕೆ ಮೂರೇ ಗೇಣು’, ಗೃಹ ಸಚಿವರ ತವರಲ್ಲಿ ಕೇಳೋರಿಲ್ವಾ ಇವರ ಗೋಳು?
(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್‍ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200