ಈಗ ಬಟ್ಟೆ ಒಗೆಯೋದು ಬಹಳ ಸುಲಭ, ಹೇಗದು? | ವಿಡಿಯೋಗಾಗಿ ಕ್ಲಿಕ್ ಮಾಡಿ
ಶಿವಮೊಗ್ಗ ಲೈವ್.ಕಾಂ |SHIMOGA NEWS | 19 JANUARY 2021
![]() |
ಕರೋನ ಲಾಕ್ಡೌನ್ ಹಿನ್ನೆಲೆಯಲ್ಲಿ ಸ್ಥಗಿತಗವಾಗಿದ್ದ ತಾಳಗುಪ್ಪ – ಮೈಸೂರು ಇಂಟರ್ಸಿಟಿ ರೈಲು ಸಂಚಾರ ಪುನಾರಂಭವಾಗಲಿದೆ. ಜನವರಿ 20 ರಿಂದ 31ರವರೆಗೆ ರೈಲು ಸಂಚಾರ ತಾತ್ಕಾಲಿಕವಾಗಿ ಆರಂಭವಾಗಲಿದೆ. ಜನರ ಸ್ಪಂದನೆ ಗಮನಿಸಿ ಸೇವೆಯನ್ನು ಮುಂದುವರೆಸಲಾಗುತ್ತದೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಆನ್ಲೈನ್ನಲ್ಲೇ ಟಿಕೆಟ್
ಪ್ರಯಾಣಿಕರು ಇಂಟರ್ಸಿಟಿ ರೈಲಿಗೆ ಆನ್ಲೈನ್ ಮೂಲಕವೆ ಟಿಕೆಟ್ ಕಾಯ್ದಿರಿಸಿಕೊಳ್ಳಬೇಕಿದೆ. ರೈಲ್ವೆ ನಿಲ್ದಾಣದಲ್ಲಿ ಟಿಕೆಟ್ ನೀಡುವ ವ್ಯವಸ್ಥೆ ಇಲ್ಲ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಟೈಮಿಂಗ್ಸ್ ಏನು?
ರೈಲು ಸಂಖ್ಯೆ 06295 ಜ.20ರಂದು ಬೆಳಗ್ಗೆ 6ಕ್ಕೆ ಮೈಸೂರಿನಿಂದ ಹೊರಟು, 6.35ಕ್ಕೆ ಕೃಷ್ಣರಾಜನಗರ, ಬೆ.7.25ಕ್ಕೆ ಹೊಳೆನರಸೀಪುರ, 8ಕ್ಕೆ ಹಾಸನ, 8.48ಕ್ಕೆ ಅರಸೀಕೆರೆ, 9.21ಕ್ಕೆ ಕಡೂರು ಜಂಕ್ಷನ್, 9.32ಕ್ಕೆ ಬೀರೂರು, 10ಕ್ಕೆ ತರೀಕೆರೆ, 10.20ಕ್ಕೆ ಭದ್ರಾವತಿ, 10.45ಕ್ಕೆ ಶಿವಮೊಗ್ಗ ನಗರ, 11.49ಕ್ಕೆ ಆನಂದಪುರಂ, ಮಧ್ಯಾಹ್ನ 12.18ಕ್ಕೆ ಸಾಗರ, 1.15ಕ್ಕೆ ತಾಳಗುಪ್ಪ ತಲುಪಲಿದೆ.
ರೈಲು ಸಂಖ್ಯೆ 06296 ಮಧ್ಯಾಹ್ನ 3ಕ್ಕೆ ತಾಳಗುಪ್ಪದಿಂದ ಹೊರಡಲಿದೆ. 4.50ಕ್ಕೆ ಶಿವಮೊಗ್ಗ ತಲುಪಲಿದೆ. 4.55ಕ್ಕೆ ಶಿವಮೊಗ್ಗ ರೈಲ್ವೆ ನಿಲ್ದಾಣದಿಂದ ಹೊರಟು ಭದ್ರಾವತಿ, ಕಡೂರು, ಬೀರೂರು, ಅರಸೀಕೆರೆ ಮೂಲಕ ರಾತ್ರಿ 10.15ಕ್ಕೆ ಮೈಸೂರು ತಲುಪಲಿದೆ.
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200