ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA | 29 ಏಪ್ರಿಲ್ 2020
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ರಂಜಾನ್ ಹಬ್ಬಕ್ಕೂ ಕರೋನ ಲಾಕ್‌ಡೌನ್ ಬಿಸಿ ತಟ್ಟಿದೆ. ಶಿವಮೊಗ್ಗದಲ್ಲಿ ಸಾಮೂಹಿಕ ಪ್ರಾರ್ಥನೆ ಇಲ್ಲ. ಇಫ್ತಾರ್ ಕೂಟಗಳನ್ನು ನಡೆಸುವಂತಿಲ್ಲ. ಈ ಬಾರಿ ಆಚರಣೆ ಮನೆಯ ನಾಲ್ಕು ಗೋಡೆಗಷ್ಟೇ ಸೀಮಿತಗೊಂಡಿದೆ.
ರಂಜಾನ್ ಹಿನ್ನೆಲೆ ಮುಸ್ಲಿಂ ಸಮುದಾಯದವರು ಒಂದು ತಿಂಗಳು ಉಪವಾಸ ನಡೆಸುತ್ತಾರೆ. ಈ ವೇಳೆ ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆ ನೆರವೇರಿಸಲಾಗುತ್ತಿತ್ತು. ಆದರೆ ಕರೋನ ಪರಿಣಾಮ ಈ ಬಾರಿ ಶಿವಮೊಗ್ಗದಲ್ಲಿ ಸಾಮೂಹಿಕ ಪ್ರಾರ್ಥನೆಯನ್ನು ನಿರ್ಬಂರ್ಧಿಸಲಾಗಿದೆ.
ಇನ್ನು, ಈ ಹಬ್ಬದ ಸಂದರ್ಭ ಇಫ್ತಾರ್ ಕೂಟಗಳನ್ನು ಆಯೋಜಿಸಲಾಗುತ್ತಿತ್ತು. ಆದರೆ ಈ ಬಾರಿ ಅದಕ್ಕೂ ಬ್ರೇಕ್ ಬಿದ್ದಿದೆ. ಇಫ್ತಾರ್ ಕೂಟಗಳನ್ನು ಆಯೋಜಿಸಲು ಅವಕಾಶವಿಲ್ಲ.
ಶಿವಮೊಗ್ಗದ ಮಸೀದಿಗಳು ಬಂದ್
ಶಿವಮೊಗ್ಗದಾದ್ಯಂತ ಎಲ್ಲ ಮಸೀದಿಗಳನ್ನು ಬಂದ್ ಮಾಡಲಾಗಿದೆ. ಕೆಲವು ಮಸೀದಿಗಳ ಮುಂದೆ ಕರೋನ ಜಾಗೃತಿ ಮತ್ತು ಮನೆಯಲ್ಲಿ ಪ್ರಾರ್ಥನೆ ಸಲ್ಲಿಸುವಂತೆ ಸೂಚನಾ ಫಲಕ ಅಳವಡಿಸಲಾಗಿದೆ.
ಈ ಪರಿಸ್ಥಿತಿಯಲ್ಲಿ ಯಾರೂ ಮಸೀದಿಗೆ ಬಂದು ನಮಾಜ್ ಮಾಡುವುದು ಬೇಡ. ನಮ್ಮ ಮಸೀದಿ ವ್ಯಾಪ್ತಿಗೆ ಬರುವವರಿಗೆ ಈ ಕುರಿತು ಈಗಾಗಲೇ ಸೂಚನೆ ನೀಡಿದ್ದೇವೆ. ಮನೆಯಿಂದಲೇ ಪ್ರಾರ್ಥನೆ ಸಲ್ಲಿಸಬೇಕಿದೆ ಅಂತಾರೆ ಎಂಕೆಕೆ ರಸ್ತೆಯ ಮಸೀದಿಯೊಂದರ ಇಮಾಮ್ ಮುನೀರ್ ಫೈಜಿ.
ಶುಕ್ರವಾರದ ಪ್ರಾರ್ಥನೆ ಮತ್ತು ರಂಜಾನ್ ಅವಧಿಯಲ್ಲಿ ನಡೆಯುವ ದೈನಂದಿನ ಸಾಮೂಹಿಕ ಪ್ರಾರ್ಥನೆಯನ್ನು ನಿರ್ಬಂಧಿಸಲಾಗಿದೆ. ಲಾಕ್‍ಡೌನ್ ಕಾರಣ ಈ ನಿರ್ಬಂಧ ವಿಧಿಸಲಾಗಿದೆ. ಹಾಗಾಗಿ ಇಫ್ತಾರ್ ಕೂಟ ಏರ್ಪಡಿಸುವುದು, ಮಸೀದಿ ಸುತ್ತ ಆಹಾರ ಪದಾರ್ಥಗಳ ಅಂಗಡಿ ತೆರೆಯುವುದು, ಯುವಕರು ರಾತ್ರಿ ರಸ್ತೆಗಳಲ್ಲಿ ಅನಗತ್ಯವಾಗಿ ಸಂಚರಿಸುವುದನ್ನೂ ನಿರ್ಬಂಧಿಸಲಾಗಿದೆ ಎಂದು ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಬಿ.ಹಬೀಬುಲ್ಲಾ ಮನವಿ ಮಾಡಿದ್ದಾರೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]