ಶಿವಮೊಗ್ಗ ಲೈವ್.ಕಾಂ | NATIONAL NEWS | 22 ಮಾರ್ಚ್ 2021
67ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆಯಾಗಿದೆ. ಕೋವಿಡ್ -19ರ ಕಾರಣದಿಂದಾಗಿ ಒಂದು ವರ್ಷ ವಿಳಂಬವಾಗಿ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ.
ಕನ್ನಡದ ಅಕ್ಷಿ ಮತ್ತು ಅವನೇ ಶ್ರೀಮನ್ನಾರಾಯಣ ಚಿತ್ರಗಳು ಪ್ರಶಸ್ತಿ ಬಾಚಿಕೊಂಡಿವೆ. ಬಾಲಿವುಡ್ ನಟ ಮನೋಜ್ ಬಾಜಪೇಯ್ ಮತ್ತು ತಮಿಳು ನಟ ಧನುಷ್ ಅವರು ಜಂಟಿಯಾಗಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಬಾಲಿವುಡ್ ನಡಿ ಕಂಗನಾ ರನೌತ್ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಲಭಿಸಿದೆ.
ಯಾರಿಗೆಲ್ಲ ಪ್ರಶಸ್ತಿ ಲಭಿಸಿದೆ?
ಅತ್ಯುತ್ತಮ ಚಿತ್ರ : ಮರಕ್ಕರ್ (ಮಲಯಾಳಂ),
ಅತ್ಯುತ್ತಮ ನಟ : ಧನುಷ್ (ಅಸುರನ್), ಮನೋಜ್ ಭಾಜಪೇಯ್ (ಭೋನ್ಸಲೆ)
ಅತ್ಯುತ್ತಮ ನಟಿ : ಕಂಗನಾ ರನೌತ್ (ಪಂಗಾ ಮತ್ತು ಮಣಿ ಕರ್ಣೀಕಾ ಸಿನಿಮಾ)
ಅತ್ಯುತ್ತಮ ಸಹಾಯಕ ನಟ : ನಟ ವಿಜಯ್ ಸೇತುಪತಿ (ಸೂಪರ್ ಡಿಲಕ್ಸ್)
ಅತ್ಯುತ್ತಮ ಸಹಾಯಕ ನಟಿ : ಪಲ್ಲವಿ ಜೋಷಿ (ದಿ ತಾಷ್ಕೆಂಟ್ ಫೈಲ್ಸ್)
ಅತ್ಯುತ್ತಮ ನಿರ್ದೇಶಕ : ಸಂಜಯ್ ಪುರಾನ್ ಸಿಂಗ್ ಚೌಹಾನ್ (ಬಹಟ್ಟರ್ ಹುರೈನ್)
ಅತ್ಯುತ್ತಮ ಕನ್ನಡ ಚಿತ್ರ : ಅಕ್ಷಿ
ಅತ್ಯುತ್ತಮ ಹಿಂದಿ ಚಿತ್ರ : ಚಿಚೋರೆ
ಅತ್ಯುತ್ತಮ ಬೆಂಗಾಲಿ ಸಿನಿಮಾ : ಗುಮ್ನಾಮಿ
ಅತ್ಯುತ್ತಮ ತುಳು ಚಿತ್ರ : ಪಿಂಗಾರ
ಅತ್ಯುತ್ತಮ ತೆಲುಗು ಚಿತ್ರ : ಜೆರ್ಸಿ
ಅತ್ಯುತ್ತಮ ತಮಿಳು ಸಿನಿಮಾ : ಅಸುರನ್
ಅತ್ಯುತ್ತಮ ಮಲಯಾಳಂ ಚಿತ್ರ : ಸಕಲ್ಲ ನೊಟ್ಟಂ
ಅತ್ಯುತ್ತಮ ಸಾಹಸ ನಿರ್ದೇಶನ : ಅವನೇ ಶ್ರೀಮನ್ನಾರಾಯಣ
ಅತ್ಯುತ್ತಮ ಸಾಹಸ ನಿರ್ದೇಶನ ತೆಲುಗು : ಮಹರ್ಷಿ
ಅತ್ಯುತ್ತಮ ನಿರ್ದೇಶಕ : ತಮಿಳಿನ ವೆಟ್ರಿಮಾರನ್ ಸಿನಿಮಾದ ನಿರ್ದೇಶಕ
ಅತ್ಯುತ್ತಮ ಸಾಮಾಜಿಕ ಕಳಕಳಿ : ಆನಂದಿ ಗೋಪಾಲ್
ಅತ್ಯುತ್ತಮ ಸಂಗೀತ ನಿರ್ದೆಶಕ : ವಿಶ್ವಾಸಂ ಚಿತ್ರಕ್ಕಾಗಿ ಡಿ ಇಮಾನ್ ನಾನ್
ಅತ್ಯುತ್ತಮ ಚಿತ್ರ ಸ್ನೇಹಿ ರಾಜ್ಯ (ಸಿಕ್ಕಿಂ)
ಫೀಚರ್ ಫಿಲ್ಮ್ ವಿಭಾಗದಲ್ಲಿ ಸರ್ ಡೇವಿಡ್ ಅಟೆನ್ ಬರೋ ಅವರ ವೈಲ್ಡ್ ಕರ್ನಾಟಕ ಚಿತ್ರವು ಪ್ರಶಸ್ತಿ ಪಡೆದುಕೊಂಡಿದೆ.