ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS UPDATE | 29 NOVEMBER 2024
ಶಿವಮೊಗ್ಗ : ನಗರದ ಪ್ರಜ್ಞಾ ಬುಕ್ ಗ್ಯಾಲರಿಯಲ್ಲಿ ನ.30ರಂದು ಸಂಜೆ 5.30ಕ್ಕೆ ‘ಸಸ್ಯ ಸಗ್ಗ’ ಪುಸ್ತಕದ ಕುರಿತು ರೇವಣಸಿದ್ದಯ್ಯ ಬಿ. ಹಿರೇಮಠ್ ಮಾತನಾಡಲಿದ್ದಾರೆ. ಬರಹಗಾರ, ಕೃಷಿ ವಿಜ್ಞಾನಿ ಕೆ.ಎನ್.ಗಣೇಶಯ್ಯ ಅವರೊಂದಿಗೆ ಸಂವಾದ ನಡೆಯಲಿದೆ. ಆಸಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದು ಎಂದು ಬುಕ್ ಗ್ಯಾಲರಿಯ ಮುಖ್ಯಸ್ಥೆ ಸೌಮ್ಯ ಕೃಷ್ಣಮೂರ್ತಿ ತಿಳಿಸಿದ್ದಾರೆ.ಗಣೇಶಯ್ಯ ಜೊತೆ ಸಂವಾದ

ಬಜೆಟ್ ಸಮಾಲೋಚನಾ ಸಭೆ ಮುಂದೂಡಿಕೆ
ಶಿವಮೊಗ್ಗ : ಮಹಾನಗರ ಪಾಲಿಕೆಯ 2025– 26ನೇ ಸಾಲಿನ ಆಯವ್ಯಯ ಸಿದ್ಧಪಡಿಸಲು ಪಾಲಿಕೆ ಸಭಾಂಗಣದಲ್ಲಿ ನ.30ರಂದು ಬೆಳಿಗ್ಗೆ 11.30ಕ್ಕೆ ಆಯೋಜಿಸಿದ್ದ ಸಾರ್ವಜನಿಕರು ಹಾಗೂ ಸಂಘ–ಸಂಸ್ಥೆಗಳ ಮೊದಲನೇ ಹಂತದ ಪೂರ್ವಭಾವಿ ಸಮಾಲೋಚನಾ ಸಭೆಯನ್ನು ಡಿ. 4ರಂದು ಬೆಳಿಗ್ಗೆ 11.30ಕ್ಕೆ ಮುಂದೂಡಲಾಗಿದೆ. ನಗರದ ನಾಗರಿಕರು ಹಾಗೂ ಸಂಘ–ಸಂಸ್ಥೆಯವರು ಸಭೆಗೆ ಹಾಜರಾಗಿ ಸಲಹೆ ಸೂಚನೆಗಳನ್ನು ನೀಡುವಂತೆ ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.
ಶಿಕಾರಿಪುರ ಪುರಸಭೆಗೆ ಐವರ ನಾಮ ನಿರ್ದೇಶನ

ಶಿಕಾರಿಪುರ : ಪುರಸಭೆಯ ನಾಮ ನಿರ್ದೇಶಿತ ಸದಸ್ಯರನ್ನಾಗಿ ಕಾಂಗ್ರೆಸ್ನ ಐವರು ಮುಖಂಡರನ್ನು ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಶ್ರೀಧರ್ ಕರ್ಕಿ, ಯು.ಬಿ.ವಿಜಯಕುಮಾರ್, ಬುಡೇನ್ ಖಾನ್, ಸುರೇಶ್ ಧಾರವಾಡ, ನಗರದ ರವಿಕಿರಣ್ ನೇಮಕವಾಗಿದ್ದಾರೆ.
ಇದನ್ನೂ ಓದಿ » ಕುವೆಂಪು ವಿವಿ ಕುರಿತು ವಿಧಾನಸೌಧದಲ್ಲಿ ಚರ್ಚೆ | 3 ಫಟಾಫಟ್ ಸುದ್ದಿಗಳು
LATEST NEWS
- ಶಿವಮೊಗ್ಗ ವಿಮಾನ ನಿಲ್ದಾಣ, ಮಹತ್ವದ ಟೆಸ್ಟ್ನಲ್ಲಿ ಪಾಸ್, DoVR ಕೆಲಸ ಶುರು, ಏನಿದು? ಪ್ರಯೋಜನ ಏನು?

- ಶಿವಮೊಗ್ಗ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿಯು ಹೆಚ್ಚಿದ ತಾಪಮಾನ? ಇವತ್ತು ಎಷ್ಟಿರುತ್ತೆ?

- ಭಟ್ಕಳದ ಮಹಿಳೆ ಸೇರಿ ನಾಲ್ವರು ನಗರ ಠಾಣೆ ಪೊಲೀಸರ ಬಲೆಗೆ, ಕಾರಣವೇನು? ಏನೇನೆಲ್ಲ ಸಿಕ್ತು?

- ಇಂದಿನ ಪಂಚಾಂಗ – ಯಾವ್ಯಾವ ಸಮಯ ಯಾವಾಗಿದೆ?

- ಶಿವಮೊಗ್ಗದ ದೇಗುಲಗಳಿಗೆ ಸಂಜೆ ಬಳಿಕ ಹೆಚ್ಚಿದ ಭಕ್ತರು, ವಿಶೇಷ ಪೂಜೆ

About The Editor
ನಿತಿನ್ ಆರ್.ಕೈದೊಟ್ಲು





