ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 29 NOVEMBER 2024
ವಿಧಾನಸೌಧದಲ್ಲಿ ಕುವೆಂಪು ವಿವಿ ಕುರಿತು ಸಭೆ
ಬೆಂಗಳೂರು : ಕುವೆಂಪು ವಿಶ್ವವಿದ್ಯಾಲಯದ (University) ಸಮಸ್ಯೆಗಳು ಮತ್ತು ಅಭಿವೃದ್ಧಿ ವಿಚಾರವಾಗಿ ಬೆಂಗಳೂರಿನ ವಿಧಾನಸೌಧದಲ್ಲಿ ಸಚಿವ ಮಧು ಬಂಗಾರಪ್ಪ ನೇತೃತ್ವದಲ್ಲಿ ಸಭೆ ನಡೆಯಿತು. ಕುಲಪತಿ ಪ್ರೊ. ಶರತ್ ಅನಂತಮೂರ್ತಿ, ಆರ್ಥಿಕ ಇಲಾಖೆ ಜಂಟಿ ಕಾರ್ಯದರ್ಶಿ ಉಮಾ, ಉನ್ನತ ಶಿಕ್ಷಣ ಇಲಾಖೆ ಉಪ ಕಾರ್ಯದರ್ಶಿ ಕುಮಾರ್ ಸೇರಿದಂತೆ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ನರಸಿಂಹ ಗಂಧದಮನೆ ನೂತನ ಅಧ್ಯಕ್ಷ
ಶಿವಮೊಗ್ಗ : ದುರ್ಗಿಗುಡಿ ಕೋ ಆಪರೇಟಿವ್ ಸೊಸೈಟಿಯ ನೂತನ ಅಧ್ಯಕ್ಷರಾಗಿ ನರಸಿಂಹ ಗಂಧದಮನೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಗುರುವಾರ ನಡೆದ ಚುನಾವಣೆಯಲ್ಲಿ ನರಸಿಂಹ ಗಂಧದಮನೆ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಅಧಿಕಾರ ವಹಿಸಿಕೊಂಡರು.
ಶಿವಮೊಗ್ಗದಲ್ಲಿ ಏಕಲವ್ಯ ನಾಟಕ ಪ್ರದರ್ಶನ
ಶಿವಮೊಗ್ಗ : ರಂಗಾಯಣದ ವತಿಯಿಂದ ಕಾಲೇಜು ರಂಗೋತ್ಸವದಲ್ಲಿ ನ.30ರಂದು ಸಂಜೆ 6.30ರಿಂದ ಸುವರ್ಣ ಸಂಸ್ಕೃತಿ ಭವನದಲ್ಲಿ ಏಕಲವ್ಯ ನಾಟಕ ಪ್ರದರ್ಶನ ಆಯೋಜಿಸಲಾಗಿದೆ. ಡಾ. ಸಿದ್ಧಲಿಂಗಯ್ಯ ರಚನೆಯ, ಪ್ರಮೋದ್ ಶಿಗ್ಗಾಂವ್ ವಿನ್ಯಾಸ, ನಿರ್ದೇಶನ ಮಾಡಿದ್ದಾರೆ. ಒಬ್ಬರಿಗೆ ಪ್ರವೇಶ ದರ 30 ರೂ. ನಿಗದಿಪಡಿಸಲಾಗಿದೆ.
ಇದನ್ನು ಓದಿ » ಜೋಗ ಜಲಪಾತದಲ್ಲಿ ರೈನ್ ಡಾನ್ಸ್, ಈಜು ಕೊಳ, ಇನ್ನು ಏನೇನಿರುತ್ತೆ?
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422