ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS UPDATE | 29 NOVEMBER 2024
ಶಿವಮೊಗ್ಗ : ನಗರದ ಪ್ರಜ್ಞಾ ಬುಕ್ ಗ್ಯಾಲರಿಯಲ್ಲಿ ನ.30ರಂದು ಸಂಜೆ 5.30ಕ್ಕೆ ‘ಸಸ್ಯ ಸಗ್ಗ’ ಪುಸ್ತಕದ ಕುರಿತು ರೇವಣಸಿದ್ದಯ್ಯ ಬಿ. ಹಿರೇಮಠ್ ಮಾತನಾಡಲಿದ್ದಾರೆ. ಬರಹಗಾರ, ಕೃಷಿ ವಿಜ್ಞಾನಿ ಕೆ.ಎನ್.ಗಣೇಶಯ್ಯ ಅವರೊಂದಿಗೆ ಸಂವಾದ ನಡೆಯಲಿದೆ. ಆಸಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದು ಎಂದು ಬುಕ್ ಗ್ಯಾಲರಿಯ ಮುಖ್ಯಸ್ಥೆ ಸೌಮ್ಯ ಕೃಷ್ಣಮೂರ್ತಿ ತಿಳಿಸಿದ್ದಾರೆ.ಗಣೇಶಯ್ಯ ಜೊತೆ ಸಂವಾದ
ಶಿವಮೊಗ್ಗ : ಮಹಾನಗರ ಪಾಲಿಕೆಯ 2025– 26ನೇ ಸಾಲಿನ ಆಯವ್ಯಯ ಸಿದ್ಧಪಡಿಸಲು ಪಾಲಿಕೆ ಸಭಾಂಗಣದಲ್ಲಿ ನ.30ರಂದು ಬೆಳಿಗ್ಗೆ 11.30ಕ್ಕೆ ಆಯೋಜಿಸಿದ್ದ ಸಾರ್ವಜನಿಕರು ಹಾಗೂ ಸಂಘ–ಸಂಸ್ಥೆಗಳ ಮೊದಲನೇ ಹಂತದ ಪೂರ್ವಭಾವಿ ಸಮಾಲೋಚನಾ ಸಭೆಯನ್ನು ಡಿ. 4ರಂದು ಬೆಳಿಗ್ಗೆ 11.30ಕ್ಕೆ ಮುಂದೂಡಲಾಗಿದೆ. ನಗರದ ನಾಗರಿಕರು ಹಾಗೂ ಸಂಘ–ಸಂಸ್ಥೆಯವರು ಸಭೆಗೆ ಹಾಜರಾಗಿ ಸಲಹೆ ಸೂಚನೆಗಳನ್ನು ನೀಡುವಂತೆ ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.ಬಜೆಟ್ ಸಮಾಲೋಚನಾ ಸಭೆ ಮುಂದೂಡಿಕೆ
ಶಿಕಾರಿಪುರ : ಪುರಸಭೆಯ ನಾಮ ನಿರ್ದೇಶಿತ ಸದಸ್ಯರನ್ನಾಗಿ ಕಾಂಗ್ರೆಸ್ನ ಐವರು ಮುಖಂಡರನ್ನು ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಶ್ರೀಧರ್ ಕರ್ಕಿ, ಯು.ಬಿ.ವಿಜಯಕುಮಾರ್, ಬುಡೇನ್ ಖಾನ್, ಸುರೇಶ್ ಧಾರವಾಡ, ನಗರದ ರವಿಕಿರಣ್ ನೇಮಕವಾಗಿದ್ದಾರೆ.ಶಿಕಾರಿಪುರ ಪುರಸಭೆಗೆ ಐವರ ನಾಮ ನಿರ್ದೇಶನ
ಇದನ್ನೂ ಓದಿ » ಕುವೆಂಪು ವಿವಿ ಕುರಿತು ವಿಧಾನಸೌಧದಲ್ಲಿ ಚರ್ಚೆ | 3 ಫಟಾಫಟ್ ಸುದ್ದಿಗಳು
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422