ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE | 7 JULY 2023 | ORANGE ALERT
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
SHIMOGA : ಜಿಲ್ಲೆಯಾದ್ಯಂತ ಮಳೆಯ ಅಬ್ಬರ ಮುಂದುವರೆದಿದೆ. ತೀರ್ಥಹಳ್ಳಿ, ಹೊಸನಗರ ತಾಲೂಕಿನ ವಿವಿಧೆಡೆ ಬೆಳಗ್ಗೆಯಿಂದ ಜೋರು ಮಳೆಯಾಗುತ್ತಿರುವುದಾಗಿ ವರದಿಯಾಗಿದೆ. ಉಳಿದೆಡೆ ಸಣ್ಣ ಪ್ರಮಾಣದಲ್ಲಿ ಮಳೆಯಾಗಿದೆ. (ORANGE ALERT)
ತೀರ್ಥಹಳ್ಳಿಯ ತೀರ್ಥ ಮತ್ತೂರು ಮತ್ತು ಹೊಸನಗರದ ನಗರದಲ್ಲಿ ಭಾರಿ ಮಳೆಯಾಗುತ್ತಿದೆ. ಇನ್ನು, ತೀರ್ಥಹಳ್ಳಿಯ ಹಿರೇಕೋಡಿಗೆ, ಕಮ್ಮರಡಿ, ಅರೇಹಳ್ಳಿ, ಹೊನ್ನೇತಾಳು, ಬಿದರಗೋಡು, ಭಾಂಡ್ಯ ಕುಕ್ಕೆ, ಕುಡುಮಲ್ಲಿಗೆ, ಬೆಜ್ಜವಳ್ಳಿ, ಮಂಡಗದ್ದೆ, ಸಾಲ್ಗುಡಿ, ಆರಗ, ಹೊಸಹಳ್ಳಿ, ತ್ರಯಂಬಕಪುರ, ನೊಣಬೂರಿನಲ್ಲಿ ಸಾಧಾರಣ ಮಳೆಯಾಗುತ್ತಿದೆ.
ಹೊಸನಗರ ತಾಲೂಕಿನ ಅಮೃತ, ಬೆಳ್ಳೂರು, ಬಾಳೂರು, ಚಿಕ್ಕಜೇನಿ, ಕೋಡೂರು, ಮಾರುತಿಪುರ, ತ್ರಿಣಿವೆ, ಸೋನಲೆ, ಹೊಸೂರು, ಸಾಗರ ತಾಲೂಕಿನ ಭೀಮನೇರಿ, ಕೆಳದಿ, ಶಿವಮೊಗ್ಗದ ಆಯನೂರು, ಕುಂಸಿ, ಭದ್ರಾವತಿಯ ನಾಗತಿಬೆಳಗಲು, ಯರೇಹಳ್ಳಿ, ಅರೆಬಿಳಚಿ, ಕಲ್ಲಿಹಾಳ್, ಶಿಕಾರಿಪುರದ ಅಂಜನಾಪುರ, ಕಿಟ್ಟದಹಳ್ಳಿ, ಸೊರಬದ ತತ್ತೂರು ಸುತ್ತಮುತ್ತ ಸಾಧಾರಣದಿಂದ ಹೆಚ್ಚು ಮಳೆಯಾಗುತ್ತಿದೆ.
ಇದನ್ನೂ ಓದಿ – ಗಾಜನೂರು ತುಂಗಾ ಡ್ಯಾಂನ 12 ಗೇಟ್ ಓಪನ್, ಒಳ ಹರಿವು ಎಷ್ಟಿದೆ? ಹೊರ ಹೋಗುತ್ತಿರುವ ನೀರೆಷ್ಟು?
ಜಿಲ್ಲೆಗೆ ಆರೆಂಜ್ ಅಲರ್ಟ್
ಮತ್ತೊಂದೆಡೆ ಶಿವಮೊಗ್ಗ, ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಿಗೆ ಇವತ್ತು ಕೂಡ ಆರೆಂಜ್ ಅಲರ್ಟ್ (ORANGE ALERT) ಘೋಷಿಸಲಾಗಿದೆ. ಇನ್ನು ಮೂರು ಗಂಟೆಯಲ್ಲಿ ಈ ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.