ಶಿವಮೊಗ್ಗ: ಬೆಂಗಳೂರಿನ ಕಾಲೇಜೊಂದರ (College) ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ಬ್ರಾಹ್ಮಣ ವಿದ್ಯಾರ್ಥಿಯೊಬ್ಬ ಧರಿಸಿದ್ದ ಜನಿವಾರವನ್ನು (Janivara) ಅಲ್ಲಿನ ಸಿಬ್ಬಂದಿ ತೆಗೆಸಿದ್ದಾರೆ. ಇದನ್ನು ಖಂಡಿಸಿ ಅಖಿಲ ಕರ್ನಾಟಕ ಸ್ಮಾರ್ಥ ಬ್ರಾಹ್ಮಣ ಸಂಘದ ಹೆಚ್.ಎಸ್. ಗಣೇಶ್ ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ.➤ ಸುದ್ದಿಯ ಮುಂದಿನ 5 ಪ್ಯಾರಾಗಳು ಕೆಳಗಿವೆ.
ಧರಣಿಗು ಮುನ್ನ ಜಿಲ್ಲಾಧಿಕಾರಿ ಭೇಟಿಯಾಗಿ ಅವರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿದ್ದಾರೆ. ಪರೀಕ್ಷಾ ಕೇಂದ್ರದಲ್ಲಿ ನಡೆದ ಈ ಘಟನೆ ಒಂದು ಸಮುದಾಯದ ಧಾರ್ಮಿಕ ಆಚರಣೆಗೆ ಮಾಡಿದ ಅಪಮಾನವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.


ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಯ ಜನಿವಾರ ತೆಗೆಸಿರುವುದು ನಮ್ಮ ಸಮುದಾಯಕ್ಕೆ ಮತ್ತು ಧರ್ಮಕ್ಕೆ ಮಾಡಿದ ಅವಮಾನ. ಈ ಘಟನೆ ಖಂಡಿಸಿ ಅಹೋರಾತ್ರಿ ಶಾಂತಿಯುತ ಧರಣಿ ನಡೆಸುತ್ತಿದ್ದೇನೆ. ಬ್ರಾಹ್ಮಣ ಸಮುದಾಯದ ವಿವಿಧ ಸಂಘಟನೆಗಳ ಒಬ್ಬೊಬ್ಬ ಪ್ರಮುಖರು ಇಡೀ ರಾತ್ರಿ ತಮ್ಮೊಂದಿಗೆ ಕೆಲ ಹೊತ್ತು ಇದ್ದು ಧರಣಿಗೆ ಬೆಂಬಲ ನೀಡಲಿದ್ದಾರೆ.
– ಹೆಚ್.ಎಸ್.ಗಣೇಶ್, ಧರಣಿ ನಿರತರು
ಗಣೇಶ್ ಅವರೊಂದಿಗೆ ಬ್ರಾಹ್ಮಣ ಸಮುದಾಯದ ಬಿ.ಒ.ಐ ಸಂಘಟನೆ ಪ್ರಮುಖರಾದ ಸಂತೋಷ್ ಇದ್ದರು.
ಇದನ್ನೂ ಓದಿ : ಹೆದ್ದಾರಿಯ ಮಧ್ಯದಲ್ಲಿದ್ದ ಯಮರೂಪಿ ಗುಂಡಿ ಮುಚ್ಚಿದ ಜನ, ಆಡಳಿತದ ವಿರುದ್ಧ ಆಕ್ರೋಶ