ಶಿವಮೊಗ್ಗ ಲೈವ್.ಕಾಂ | SHIMOGA NEWS | 10 ಅಕ್ಟೋಬರ್ 2021
ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:
HIGHLITES
» ಅಕ್ಟೋಬರ್ ತಿಂಗಳ ಮೊದಲ ಹತ್ತು ದಿನದಲ್ಲಿ ಒಂಭತ್ತು ಭಾರಿ ದರ ಏರಿಕೆ
» ಇವತ್ತು ಮತ್ತೆ ಏರಿತು ಪೆಟ್ರೋಲ್, ಡಿಸೇಲ್ ರೇಟ್
» ಶಿವಮೊಗ್ಗದಲ್ಲಿ ಇವತ್ತು ಪೆಟ್ರೋಲ್ 31 ಪೈಸೆ, ಡಿಸೇಲ್ 37 ಪೈಸೆ ಹೆಚ್ಚಳ
ಪೆಟ್ರೋಲ್, ಡಿಸೇಲ್ ದರ ಮತ್ತೆ ಗಗನಮುಖಿಯಾಗುತ್ತಿವೆ. ಅಕ್ಟೋಬರ್ ತಿಂಗಳಲ್ಲಿ ತೈಲೋತ್ಪನ್ನಗಳ ಬೆಲೆ ಪುನಃ ಹೆಚ್ಚಳವಾಗುತ್ತಿದೆ. ಈ ತಿಂಗಳ ಮೊದಲ ಹತ್ತು ದಿನದಲ್ಲಿ ಒಂಭತ್ತು ಭಾರಿ ಇವುಗಳ ಬೆಲೆ ಏರಿಕೆಯಾಗಿದ್ದು, ವಾಹನ ಸವಾರರನ್ನು ಚಿಂತೆಗೀಡುಮಾಡಿದೆ.
ನೂರರ ಸನಿಹಕ್ಕೆ ಬಂತು ಡಿಸೇಲ್
ಶಿವಮೊಗ್ಗದಲ್ಲಿ ಇವತ್ತೂ ಡಿಸೇಲ್ ಬೆಲೆ ಏರಿಕೆಯಾಗಿದೆ. ಇವತ್ತು 37 ಪೈಸೆ ಹೆಚ್ಚಳವಾಗಿದೆ. ಇದರಿಂದಾಗಿ ಡಿಸೇಲ್ ಪ್ರತಿ ಲೀಟರ್’ಗೆ 99.75 ರೂ.ಗೆ ತಲುಪಿದೆ. ಇನ್ನು 25 ಪೈಸೆ ಏರಿಕೆಯಾದರೆ ಡಿಸೇಲ್ ದರ ನೂರು ರೂ. ಆಗಲಿದೆ. ಶಿವಮೊಗ್ಗದ ಜಿಲ್ಲೆಯಲ್ಲಿ ಅಕ್ಟೋಬರ್ ತಿಂಗಳ ಮೊದಲ ಹತ್ತು ದಿನದಲ್ಲಿ ಡಿಸೇಲ್ ಪ್ರತಿ ಲೀಟರ್ ಮೇಲೆ 3.14 ರೂ. ಏರಿಕೆಯಾಗಿದೆ.

ಈಗಾಗಲೇ ಬಳ್ಳಾರಿ ಜಿಲ್ಲೆಯಲ್ಲಿ ಡಿಸೇಲ್ ಪ್ರತಿ ಲೀಟರ್’ಗೆ 100.32 ರೂ.ಗೆ ತಲುಪಿದೆ. ಇವತ್ತಿನ ಪ್ರಮಾಣದಲ್ಲೇ ನಾಳೆಯೂ ದರ ಏರಿಕೆಯಾದರೆ ಶಿವಮೊಗ್ಗದಲ್ಲಿಯೂ ಡಿಸೇಲ್ ದರ ನೂರು ರೂ. ತಲುಪಲಿದೆ.
ರಾಕೆಟ್ ವೇಗದಲ್ಲಿ ಏರುತ್ತಿದೆ ಪಟ್ರೋಲ್ ದರ
ಶಿವಮೊಗ್ಗ ಜಿಲ್ಲೆಯಲ್ಲಿ ಪೆಟ್ರೋಲ್ ದರವು ರಾಕೆಟ್ ವೇಗದಲ್ಲಿ ಏರಿಕೆಯಾಗುತ್ತಿದೆ. ಇವತ್ತು ಪೆಟ್ರೋಲ್ ದರ 31 ಪೈಸೆ ಹೆಚ್ಚಳವಾಗಿದೆ. ಇದರಿಂದ ಪ್ರತಿ ಲೀಟರ್ ಪೆಟ್ರೋಲ್ ದರ 109.20 ರೂ.ಗೆ ತಲುಪಿದೆ. ಅಕ್ಟೋಬರ್ ತಿಂಗಳ ಮೊದಲ ಹತ್ತು ದಿನದಲ್ಲಿ ಪೆಟ್ರೋಲ್ ದರ ಹಂತ ಹಂತವಾಗಿ ಪ್ರತಿ ಲೀಟರ್’ಗೆ 2.58 ರೂ. ಹೆಚ್ಚಳವಾಗಿದೆ.

ಅಗತ್ಯ ವಸ್ತುಗಳ ಬೆಲೆ ಏರಿಕೆ
ಪೆಟ್ರೋಲ್, ಡಿಸೇಲ್ ದರ ಏರಿಕೆಯ ಬಿಸಿಯಿಂದಾಗಿ ಅಗತ್ಯ ವಸ್ತುಗಳ ಬೆಲೆಯೂ ಹೆಚ್ಚಳವಾಗಲಿದೆ. ಕರೋನಾದಿಂದ ಕೆಲಸ ಕಳೆದುಕೊಂಡವರು, ಬಿಸ್ನೆಸ್ ಕಳೆದುಕೊಂಡು ಜನರು ಹೈರಾಣಾಗಿದ್ದಾರೆ. ಇಂತಹ ಸಂದರ್ಭ ತೈಲೋತ್ಪನ್ನಗಳ ಬೆಲೆ ಏರಿಕೆ ಮತ್ತು ಅಗತ್ಯ ವಸ್ತುಗಳ ದರ ಹೆಚ್ಚಳದಿಂದಾಗಿ ಜನರು ಮತ್ತಷ್ಟು ಸಂಕಷ್ಟಕ್ಕೀಡಾಗಿದ್ದಾರೆ.
(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್‍ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ ಮೂಲಕ ಸುದ್ದಿಗಾಗಿ 7411700200
LATEST NEWS
- ಸರ್ಕಾರಿ ಮಹಿಳಾ ನೌಕರರ ಸಂಘ ಅಸ್ಥಿತ್ವಕ್ಕೆ, ಉದ್ದೇಶವೇನು? ರಾಜ್ಯಾಧ್ಯಕ್ಷೆ ಏನೆಲ್ಲ ಹೇಳಿದರು?

- ಅರ್ಧಕ್ಕರ್ಧ ಶಿವಮೊಗ್ಗ ಸಿಟಿಯಲ್ಲಿ ಫೆಬ್ರವರಿ 7ರಂದು ಇಡೀ ದಿನ ಕರೆಂಟ್ ಇರಲ್ಲ, ಯಾವ್ಯಾವ ಏರಿಯಾ? ಇಲ್ಲಿದೆ ಲಿಸ್ಟ್

- ಶಿವಮೊಗ್ಗ ಜಿಲ್ಲೆಯಲ್ಲಿ ಮತ್ತಷ್ಟು ತಗ್ಗಿದ ತಪಮಾನ, ಯಾವ್ಯಾವ ತಾಲೂಕಿನಲ್ಲಿ ಎಷ್ಟಿದೆ?

- ಶಿವಮೊಗ್ಗ ಮಾರಿಕಾಂಬಾ ಜಾತ್ರೆ, ಪಂದ್ಯ ಗೆದ್ದವರಿಗೆ ಎರಡು ಟಗರು

- MRPಗಿಂತಲು ಹೆಚ್ಚು ವಸೂಲಿ, ಫ್ಲಿಪ್ಕಾರ್ಟ್ ಸಂಸ್ಥೆಗೆ ಬಿಸಿ ಮುಟ್ಟಿಸಿದ ಶಿವಮೊಗ್ಗ ಗ್ರಾಹಕ ನ್ಯಾಯಾಲಯ

About The Editor
ನಿತಿನ್ ಆರ್.ಕೈದೊಟ್ಲು






