ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 4 ನವೆಂಬರ್ 2021
ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡಿಸೇಲ್ ಮೇಲಿನ ಅಬಕಾರಿ ಸುಂಕ ಇಳಿಕೆ ಮಾಡಿದೆ. ಇದರಿಂದ ತೈಲೋತ್ಪನ್ನಗಳ ಬೆಲೆಯಲ್ಲಿ ತುಸು ಇಳಿಕೆಯಾಗಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಮೇಲೆ 6.28 ರೂ. ಕಡಿತವಾಗಿದೆ. ಹಾಗಾಗಿ ಪೆಟ್ರೋಲ್ ದರ 109.24 ರೂ. ಇಳಿಕೆಯಾಗಿದೆ. ಇನ್ನು ಡಿಸೇಲ್ ಪ್ರತಿ ಲೀಟರ್ ಮೇಲೆ 12.45 ರೂ. ಕಡಿತವಾಗಿದೆ. ಡಿಸೇಲ್ ದರ ಶಿವಮೊಗ್ಗ ಜಿಲ್ಲೆಯಲ್ಲಿ ಪ್ರತಿ ಲೀಟರ್’ಗೆ 93.41 ರೂ.ಗೆ ತಲುಪಿದೆ.
ರಾಜ್ಯ ಸರ್ಕಾರದ ಕಡಿತದ ನಿರೀಕ್ಷೆಯಲ್ಲಿ
ಕೇಂದ್ರ ಸರ್ಕಾರ ಅಬಕಾರಿ ಸುಂಕ ಕಡಿತದ ಬೆನ್ನಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಬಕಾರಿ ಸುಂಕ ಕಡಿತದ ಮುನ್ಸೂಚನೆ ನೀಡಿದ್ದಾರೆ. ಇದರಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಪೆಟ್ರೋಲ್, ಡಿಸೇಲ್ ದರ ಮತ್ತಷ್ಟು ಇಳಿಕೆಯಾಗುವ ನಿರೀಕ್ಷೆ ಇದೆ.
ಕಳೆದ ತಿಂಗಳು ಭಾರಿ ಏರಿಕೆ
ಅಕ್ಟೋಬರ್ ತಿಂಗಳಲ್ಲಿ ಪ್ರತಿ ದಿನ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯಾಗಿದೆ. ಪ್ರತಿ ಭಾರಿ 36 ಅಥವಾ 37 ಪೈಸೆಯಂತೆ ದರ ಹೆಚ್ಚಳವಾಗಿತ್ತು. ಹಾಗಾಗಿ ಕಳೆದ ತಿಂಗಳು ಶಿವಮೊಗ್ಗದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 7.97 ರೂ. ಹೆಚ್ಚಳವಾಗಿತ್ತು. ಡಿಸೇಲ್ ದರ 8.71 ರೂ. ಹೆಚ್ಚಳವಾಗಿತ್ತು. ಈಗ ಅಬಕಾರಿ ಸುಂಕ ಕಡಿತದಿಂದಾಗಿ ವಾಹನ ಸವಾರರು ತುಸು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಅಲ್ಲದೆ ಬೆಲೆ ಏರಿಕೆ ಬಿಸಿ ಸ್ವಲ್ಪ ತಗ್ಗುವ ಸಾಧ್ಯತೆ ಇದೆ.
ಶಿವಮೊಗ್ಗದಲ್ಲಿ ಇದೆ ಮೊದಲು..! ಏಳು ನಿಮಿಷದಲ್ಲಿ ರೆಡಿಯಾಗುತ್ತೆ ಕೇಕ್.. ಮೂರು ದಿನ ಭರ್ಜರಿ ಆಫರ್.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422