ಶಿವಮೊಗ್ಗ ಲೈವ್.ಕಾಂ | SHIMOGA | 10 ಅಕ್ಟೋಬರ್ 2019
ಶಿವಮೊಗ್ಗ ದಸರಾದಲ್ಲಿ ಅಂಬಾರಿ ಹೊತ್ತ ಸಾಗರ್ ಜೊತೆ ಫೋಟೊಗೆ ಡಿಮಾಂಡಪ್ಪೋ ಡಿಮಾಂಡು. ಸಂಸದರು, ಅಧಿಕಾರಿಗಳನ್ನು ಫೋಟೊಗೆ ಸೆಳೆದ ಸಾಗರ್.
ಶಿವಮೊಗ್ಗ ದಸರಾದಲ್ಲಿ ಅಂಬಾರಿ ಹೊತ್ತ ಸಾಗರ, ಭಾನುಮತಿ ಮತ್ತು ಗಂಗೆ ಆನೆಗಳು ಸಕ್ರೆಬೈಲು ಬಿಡಾರಕ್ಕೆ ಹಿಂತಿರುಗಿವೆ. ಸದ್ಯ ಅನೆಗಳು ರೆಸ್ಟ್ ಮೂಡ್’ನಲ್ಲಿವೆ. ಆದರೆ ಬಿಡಾರಕ್ಕೆ ಬರುತ್ತಿರುವ ಪ್ರವಾಸಿಗರು ಮಾತ್ರ ಸಾಗರ್ ಜೊತೆಗೆ ಸೆಲ್ಫಿ ಮತ್ತು ಫೋಟೊಗೆ ಮುಗಿಬೀಳುತ್ತಿದ್ದಾರೆ.
ಸಂಸದರನ್ನು ಸೆಳೆದ ಸಾಗರ್
ವನ್ಯಜೀವಿ ಸಪ್ತಾಹದ ಅಂಗವಾಗಿ ಸಕ್ರೆಬೈಲು ಆನೆ ಬಿಡಾರದ ಲೋಗೋ ಲಾಂಚ್ ಮಾಡಲು ಬಂದಿದ್ದ ಸಂಸದ ಬಿ.ವೈ.ರಾಘವೇಂದ್ರ ಅವರನ್ನು ಸಾಗರ್ ತನ್ನತ್ತ ಸೆಳೆದುಕೊಂಡ. ರಾಘವೇಂದ್ರ ಸಾಗರ್ ಆನೆಯ ಜೊತೆಗೆ ಫೋಟೊ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು. ತಮ್ಮ ಮಗನನ್ನು ಕರೆದು ನಿಲ್ಲಿಸಿಕೊಂಡು ಫೋಟೊ ತೆಗೆಸಿಕೊಂಡರು.






ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | shivamoggalive@gmail.com
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200