SHIVAMOGGA LIVE NEWS, 9 DECEMBER 2024
ಬೆಂಗಳೂರು : ಹಿಂದೂ ಮಹಾಸಾಗರದಲ್ಲಿ ವಾಯುಭಾರ ಕುಸಿತದಿಂದಾಗಿ ದಕ್ಷಿಣ ಭಾರತದ ಹಲವೆಡೆ ಮತ್ತೆ ಮಾಳೆಯಾಗಲಿದೆ (Rain) ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಡಿ.10 ರಿಂದ 13ರವರೆಗೆ ದಕ್ಷಿಣ ಭಾರತದ ಹಲವೆಡೆ ಮಳೆಯಾಗಲಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಡಿ.10ರಂದು ತಮಿಳುನಾಡು, ಪುದುಚೆರಿ ಭಾಗದಲ್ಲಿ ಭಾರಿ ಮಳೆಯಾಗಲಿದೆ. ಹಾಗಾಗಿ ಈ ಭಾಗದಲ್ಲಿ ಯಲ್ಲೋ ಅಲರ್ಟ್ ಘೋಷಿಸಲಾಗಿದೆ. ಡಿ.11ರಂದು ತಮಿಳುನಾಡು, ಪುದುಚೆರಿಗೆ ಆರೆಂಜ್ ಅಲರ್ಟ್, ಆಂಧ್ರದ ಕರಾವಳಿ, ರಾಯಲಸೀಮ ಭಾಗಕ್ಕೆ ಯಲ್ಲೋ ಅಲರ್ಟ್ ಪ್ರಕಟಿಸಲಾಗಿದೆ.
ರಾಜ್ಯದಲ್ಲೂ ಮಳೆ ಮುನ್ಸೂಚನೆ
ಡಿ.12ರಂದು ಕರ್ನಾಟಕದ ಹಲವೆಡೆ ಯಲ್ಲೋ ಅಲರ್ಟ್ ಘೋಷಿಸಲಾಗಿದೆ. ಅಂದು ತಮಿಳುನಾಡು, ಪುದುಚೆರಿಗೆ ಆರೆಂಜ್ ಅಲರ್ಟ್, ಆಂಧ್ರದ ಕರಾವಳಿ, ರಾಯಲಸೀಮ, ಕರ್ನಾಟಕದ ದಕ್ಷಿಣ ಒಳನಾಡು, ಕೇರಳ ರಾಜ್ಯಕ್ಕೆ ಯಲ್ಲೋ ಅಲರ್ಟ್ ಪ್ರಕಟಿಸಲಾಗಿದೆ. ಡಿ.13ರಂದು ತಮಿಳುನಾಡು, ಪುದುಚೆರಿ, ಕರ್ನಾಟಕದ ದಕ್ಷಿಣ ಒಳನಾಡು, ಕರಾವಳಿ ಭಾಗ ಮತ್ತು ಕೇರಳ ರಾಜ್ಯಗಳಿಗೆ ಯಲ್ಲೋ ಅಲರ್ಟ್ ಘೋಷಿಸಲಾಗಿದೆ.
ಮತ್ತೆ ಮಳೆಯಿಂದ ರೈತರು ಹೈರಾಣು
ಫೆಂಗಲ್ ಚಂಡಮಾರುತದಿಂದಾಗಿ ಕಳೆದ ವಾರ ಶಿವಮೊಗ್ಗ ಜಿಲ್ಲೆಯ ಹಲವು ಕಡೆ ಭಾರಿ ಮಳೆಯಾಗಿತ್ತು. ಇದರಿಂದ ರೈತರು ಸಂಕಷ್ಟಕ್ಕೀಡಾಗಿದ್ದರು. ಕೊಯ್ಲು ಮಾಡಿದ್ದ ಭತ್ತವನ್ನು ಮಳೆಯಿಂದ ರಕ್ಷಿಸುವುದಕ್ಕೆ ಹರಸಾಹಸ ಪಟ್ಟಿದ್ದರು. ಬಹುತೇಕ ಕಡೆ ಹುಲ್ಲು ತೊಯ್ದು ಹೋಗಿದೆ.
ಇದನ್ನೂ ಓದಿ » ಶಿವಮೊಗ್ಗದ ಸರ್ಜಿ ಆಸ್ಪತ್ರೆ ಇನ್ಮುಂದೆ ಪೇಪರ್ ಲೆಸ್, ಏನಿದು?
ಚಂಡಮಾರುತದ ಅಬ್ಬರ ಕಡಿಮೆಯಾಗುತ್ತಿದ್ದಂತೆ ಕೊಯ್ಲು ಆರಂಭವಾಗಿತ್ತು. ಈಗ ವಾಯುಭಾರ ಕುಸಿತದಿಂದಾಗಿ ಮಳೆಯ ಮುನ್ಸೂಚನೆ ಹೊರ ಬೀಳುತ್ತಿದ್ದಂತೆ ರೈತರು ಆತಂಕಕ್ಕೀಡಾಗಿದ್ದಾರೆ. ಕೊಯ್ಲು ಮುಂದೂಡುವತ್ತ ಯೋಚಿಸುತ್ತಿದ್ದಾರೆ. ಇನ್ನು ಈಗಾಗಲೇ ಕೊಯ್ಲು ಮುಗಿಸಿದವರು ಭತ್ತದ ರಕ್ಷಣೆಗೆ ಮಾರ್ಗೋಪಾಯ ಕಂಡುಕೊಳ್ಳಬೇಕಾಗಿದೆ.