ಶಿವಮೊಗ್ಗ ಜಿಲ್ಲೆಯಲ್ಲಿ ಇವತ್ತೂ ಮಳೆ, ಕೋಡೂರಿನಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು ವರ್ಷಧಾರೆ, ಎಲ್ಲೆಲ್ಲಿ ಹೇಗಿದೆ ಈಗ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ : ಜಿಲ್ಲೆಯಲ್ಲಿ ಇವತ್ತೂ ಮಳೆ (Rainfall) ಮುಂದುವರೆದಿದೆ. ಮಧ್ಯಾಹ್ನದ ವೇಳೆಗೆ ಶುರುವಾದ ಮಳೆ ಎಡೆಬಿಡದೆ ಸುರಿಯುತ್ತಿದೆ. ಅಲ್ಲಲ್ಲಿ ಗುಡುಗು, ಗಾಳಿ ಸಹಿತ ಮಳೆಯಾಗುತ್ತಿದೆ.

ತೀರ್ಥಹಳ್ಳಿ, ಹೊಸನಗರ, ಸಾಗರ, ಸೊರಬ ಮತ್ತು ಶಿಕಾರಿಪುರದ ವಿವಿಧೆಡೆ ಜೋರು ಮಳೆಯಾಗುತ್ತಿದೆ (Rainfall). ಶಿವಮೊಗ್ಗ, ಭದ್ರಾವತಿ ತಾಲೂಕುಗಳಲ್ಲಿ ಮೋಡ ಕವಿದ ವಾತಾವರಣವಿದೆ. ವಿವಿಧೆಡೆ ತುಂತುರು ಮಳೆಯಾದ ಮಾಹಿತಿ ಇದೆ.

ಮಾರುತಿಪುರ, ತಾಳಗುಂದದಲ್ಲಿ ಭಾರಿ ಮಳೆ

Web-Design

ಹೊಸನಗರ ತಾಲೂಕು ಮಾರುತಿಪುರ, ಶಿಕಾರಿಪುರದ ತಾಳಗುಂದ, ಸಾಗರದ ಹೊಸೂರು, ಸೊರಬದ ಇಂಡುವಳ್ಳಿ, ಬಿಳುವಾಣಿ ಸುತ್ತಮುತ್ತ ಇವತ್ತು ಭಾರಿ ಮಳೆಯಾದ ವರದಿಯಾಗಿದೆ. ಮಾರುತಿಪುರ ಸುತ್ತಮುತ್ತ ಈತನಕ 51 ಮಿ.ಮೀ ಮಳೆಯಾಗಿದೆ. ಶಿಕಾರಿಪುರ ತಾಲೂಕು ತಾಳಗುಂದಲ್ಲಿ 40 ಮಿ.ಮೀ ಮಳೆಯಾಗಿದೆ. ಭಾರಿ ಬಿಸಿಲಿನಿಂದ ಹೈರಾಣಾಗಿದ್ದ ಜನರಿಗೆ ಜೋರು ಮಳೆ ತಂಪು ನೀಡಿದೆ.

Heavy-Rainfall-at-ripponpete-in-Shikaripura-taluk.
ಶಿಕಾರಿಪುರ ತಾಲೂಕು ಶಿರಾಳಕೊಪ್ಪದಲ್ಲಿ ಭಾರಿ ಮಳೆ.

ಇದನ್ನೂ ಓದಿ » ಹೊಸಮನೆ ಚಾನಲ್‌ ಏರಿ ಮೇಲೆ ಭೀಕರ ಅಪಘಾತ, ಯುವಕನ ಸ್ಥಿತಿ ಗಂಭೀರ

ಕೋಡೂರಿನಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು ಮಳೆ

ಕಳೆದ 24 ಗಂಟೆ ಅವಧಿಯಲ್ಲಿ ಹೊಸನಗರ ತಾಲೂಕು ಕೋಡೂರಿನಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು ಮಳೆಯಾಗಿದೆ. ಈ ಅವಧಿಯಲ್ಲಿ 82 ಮಿ.ಮೀ ಮಳೆಯಾಗಿದೆ. ಕೋಡೂರು ಸುತ್ತಮುತ್ತ ಸುರಿದ ಭಾರಿ ಮಳೆಗೆ ತೋಟ, ಗದ್ದೆಯಲ್ಲಿ ಬೆಳೆ ಹಾನಿ ಉಂಟಾಗಿತ್ತು.

https://parishramaneetacademy.com/landing-page/
ಹೆಚ್ಚಿನ ಮಾಹಿತಿಗೆ ಈ ಫೋಟೊ ಮೇಲೆ ಕ್ಲಿಕ್‌ ಮಾಡಿ

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment