ಅಡಕೆ ರೇಟ್ ಕುಸಿಯಲು 3 ಕಾರಣ ಪಟ್ಟಿ ಮಾಡಿದ ಕಾಂಗ್ರೆಸ್, ಏನದು ಕಾರಣ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS |12 DECEMBER 2022

ಶಿವಮೊಗ್ಗ : ಗುಜರಾತ್ ಮತ್ತು ಉತ್ತರ ಭಾರತದ ಕೆಲವು ವರ್ತಕರ ಲಾಭಕ್ಕಾಗಿ ಕರ್ನಾಟಕದ ಲಕ್ಷಾಂತರ ಅಡಕೆ (adike rate down) ಬೆಳೆಗಾರರ ಹಿತವನ್ನು ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಬಲಿ ಕೊಟ್ಟಿದೆ ಎಂದು ಕಾಂಗ್ರೆಸ್ ಮುಖಂಡ, ಮಲೆನಾಡು ಪ್ರದೇಶ ಸಂತ್ರಸ್ಥರ ಅಧ್ಯಯನ ಸಮಿತಿ ಸಂಚಾಲಕ ರಮೇಶ್ ಹೆಗ್ಡೆ ಆರೋಪಿಸಿದರು.

Shimoga Nanjappa Hospital

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಮೇಶ್ ಹೆಗ್ಡೆ ಅವರು, ಕರ್ನಾಟಕದಲ್ಲಿ 5.50 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಅಡಕೆ ಬೆಳೆಯಲಾಗುತ್ತಿದೆ. ದೇಶದ ಒಟ್ಟು ಅಡಕೆ ಬೆಳೆಯ ಶೇ.80ರಷ್ಟು ಅಡಕೆ ರಾಜ್ಯದಲ್ಲಿ ಬೆಳೆಯಲಾಗುತ್ತಿದೆ. ಆದರೆ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ಅಡಕೆ ಬೆಳೆಗಾರರ ಹಿತ ಕಾಯುವಲ್ಲಿ ವಿಫಲವಾಗಿದೆ. ಇದೆ ಕಾರಣಕ್ಕೆ ಅಡಕೆ ಬೆಲೆ ಕುಸಿತವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

(adike rate down)

ಬೆಲೆ ಕುಸಿಯುಲು 3 ಕಾರಣ

ಕಾರಣ 1 – ವಿದೇಶಿ ಅಡಕೆ ಆಮದು

ದೇಶದಲ್ಲಿ ಅಡಕೆ ದಾಸ್ತಾನು ಇದೆ. ಹಾಗಿದ್ದೂ, ಕನಿಷ್ಠ ಖರೀದಿ ದರಕ್ಕಿಂತಲು ಕಡಿಮೆ ದರದಲ್ಲಿ ಭುತಾನ್ ನಿಂದ ಅಡಕೆ ಆಮದು ಮಾಡಿಕೊಳ್ಳಲಾಗುತ್ತಿದೆ. 2017ರಲ್ಲಿ ಪ್ರತಿ ಕೆ.ಜಿ. ಅಡಕೆ ಆಮದಿಗೆ ಕನಿಷ್ಠ ಖರೀದಿ ದರ 251 ನಿಗದಿಪಡಿಸಲಾಗಿತ್ತು. ಈಗ ಅದಕ್ಕೂ ರಿಯಾಯಿತಿ ನೀಡಿ 17 ಸಾವಿರ ಟನ್ ಅಡಕೆ ಆಮದು ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯ ಗುಜರಾತ್ ಮತ್ತು ಉತ್ತರ ಭಾರತದ ಕೆಲವು ವರ್ತಕರಿಗೆ ಅನುಕೂಲ ಮಾಡಲು ಈ ಕ್ರಮ ಕೈಗೊಳ್ಳಲಾಗಿದೆ.

(adike rate down)

ಕಾರಣ 2 – ಅಡಕೆ ಕಳ್ಳ ಸಾಗಣೆ

ಈಶಾನ್ಯ ಭಾರತದ ಮಿಜೋರಾಂ, ಮಣಿಪುರದ ಮೂಲಕ ಸಾವಿರಾರು ಟನ್ ಅಡಕೆ ಕಳ್ಳ ಸಾಗಣೆಯಾಗುತ್ತಿದೆ. ಮಯಾನ್ಮಾರ್ ನಿಂದ ಕಳ್ಳ ಹಾದಿಯಲ್ಲಿ ಅಡಕೆ ಬರುತ್ತಿದೆ. ಮಿಜೋರಾಂನ ಕಾಂಗ್ರೆಸ್ ಶಾಸಕರೊಬ್ಬರು ಕಳ್ಳ ಸಾಗಣೆ ತಡೆಗೆ, ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದರು. ಗುಜರಾತ್ ಮತ್ತು ಮಹಾರಾಷ್ಟ್ರಕ್ಕೆ ಈ ಅಡಕೆ ಹೋಗುತ್ತಿದೆ ಎಂದು ಪತ್ರದಲ್ಲಿ ಆರೋಪಿಸಿದ್ದರು. ಕ್ಯಾಂಪ್ಕೊ ಸಂಸ್ಥೆಯು ಅಡಕೆ ಕಳ್ಳ ಸಾಗಣೆ ತಡೆಗೆ ಕ್ರಮ ಕೈಗೊಳ್ಳುವಂತೆ ಕೇಂದ್ರಕ್ಕೆ ಪತ್ರ ಬರೆದಿದೆ. ಆದರೆ ಈತನಕ ಕ್ರಮ ಕೈಗೊಂಡಿಲ್ಲ. ಇದು ಕೂಡ ಗುಜರಾತ್ ವರ್ತಕರಿಗೆ ಲಾಭ ಮಾಡಿಕೊಡುವ ಹುನ್ನಾರವಾಗಿದೆ.

BA Ramesh Hegde Shimoga Congress Press meet on Adike rate.

(adike rate down)

ಕಾರಣ 3 – ಶ್ರೀಲಂಕಾದಿಂದ ಕಳಪೆ ಅಡಕೆ

ಭಾರತ ತನ್ನ ನೆರೆಹೊರೆ ದೇಶದೊಂದಿಗೆ ಸಾಫ್ಟಾ, ಸಾರ್ಕ್ ಮತ್ತು  ಭಾರತ – ಶ್ರೀಲಂಕಾ ನಡುವೆ ಮುಕ್ತ ವಾಣಿಜ್ಯ ಒಪ್ಪಂದ ಮಾಡಿಕೊಂಡಿದೆ. ಈ ಒಪ್ಪಂದ ದುರುಪಯೋಗ ಮಾಡಿಕೊಂಡು ಇಂಡೋನೇಷಿಯಾದ ಕಳಪೆ ಅಡಕೆಯನ್ನು ಭಾರತಕ್ಕೆ ರಫ್ತು ಮಾಡಲಾಗುತ್ತಿದೆ. ಇಂಡೋನೇಷಿಯಾ ದೇಶದ ಅಡಕೆಯನ್ನು ಶ್ರೀಲಂಕಾಗೆ ಆಮದು ಮಾಡಿಕೊಳ್ಳಲಾಗುತ್ತದೆ. ಅದನ್ನೆ ಶ್ರೀಲಂಕ ಮೂಲದ ಅಡಕೆ ಎಂದು ಬಿಂಬಿಸಿ ಕಳಪೆ ಅಡಕೆಯನ್ನು ಭಾರತಕ್ಕೆ ರಫ್ತು ಮಾಡಲಾಗುತ್ತಿದೆ. ಇದನ್ನು ಕೂಡ ಕೇಂದ್ರ ಸರ್ಕಾರ ತಡೆಯುತ್ತಿಲ್ಲ.

ಕಾಂಗ್ರೆಸ್ ಕಾಲದಲ್ಲಿ ದಾಖಲೆ ಬೆಲೆ

ಡಾ. ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಪ್ರತಿ ಕ್ವಿಂಟಾಲ್ ಅಡಕೆ ಬೆಲೆ ದಾಖಲೆ ಮಟ್ಟ ತಲುಪಿತ್ತು. ವಿದೇಶದಿಂದ ಆಮದು ಕನಿಷ್ಠ ಖರೀದಿ ದರವನ್ನು ಹೆಚ್ಚಳ ಮಾಡಿದ್ದರು. ಹಾಗಾಗಿ ಆಮದು ಕಡಿಮೆಯಾಗಿತ್ತು. ಇನ್ನು ಈಶಾನ್ಯ ಭಾಗದಿಂದ ಕಳ್ಳ ಸಾಗಣೆಯನ್ನು ಕೂಡ ತಡೆದಿದ್ದರು. ಇದು ರಾಜ್ಯದ ಅಡಕೆ ಬೆಳೆಗಾರರಿಗೆ ಲಾಭ ತಂದು ಕೊಟ್ಟಿತ್ತು ಎಂದು ರಮೇಶ್ ಹೆಗ್ಡೆ ತಿಳಿಸಿದರು.

ಇದನ್ನೂ ಓದಿ – ಅಡಕೆ ಬೆಳೆಗಾರರ ನಿದ್ರೆಗೆಡಿಸಿದ ರೇಟ್, ಎಲೆ ಚುಕ್ಕೆ ರೋಗ, ಇಳುವರಿ ಕುಸಿತದ ಬೆನ್ನಿಗೆ ಮತ್ತೊಂದು ಶಾಕ್

ಪ್ರಮುಖರಾದ ದೀಪಕ್ ಸಿಂಗ್, ನಗರದ ಮಹಾದೇವಪ್ಪ, ಖಲೀಮ್ ಉಲ್ಲಾ, ಹೆಚ್.ಎಂ.ಮಧು, ಮಂಜುನಾಥ್, ವಿಜಯ್ ಕುಮಾರ್, ಚಂದ್ರಭೂಪಾಲ್ ಸೇರಿದಂತೆ ಹಲವರು ಪತ್ರಿಕಾಗೋಷ್ಠಿಯಲ್ಲಿದ್ದರು.

Shimoga Nanjappa Hospital

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ

ಈಗಲೇ ಕರೆ ಮಾಡಿ
9972194422

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : December 12, 2022

ನಾಳೆಯಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ, ಶಿವಮೊಗ್ಗದಲ್ಲಿ ಎಷ್ಟು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ?

ನಾಳೆಯಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ, ಶಿವಮೊಗ್ಗದಲ್ಲಿ ಎಷ್ಟು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ?

ಬ್ಯಾಂಕ್‌ ಉದ್ಯೋಗಿ, ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ, ಗಾಯಾಳುಗಳು ಆಸ್ಪತ್ರೆಗೆ

ಬ್ಯಾಂಕ್‌ ಉದ್ಯೋಗಿ, ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ, ಗಾಯಾಳುಗಳು ಆಸ್ಪತ್ರೆಗೆ

ಶಿವಮೊಗ್ಗದಲ್ಲಿ ಕೆಲಸ ಖಾಲಿ ಇದೆ, ತಿಂಗಳಿಗೆ ₹20,000 ದಿಂದ ₹50,000 ದವರೆಗೆ ಸಂಬಳ

ಶಿವಮೊಗ್ಗದಲ್ಲಿ ಕೆಲಸ ಖಾಲಿ ಇದೆ, ತಿಂಗಳಿಗೆ ₹20,000 ದಿಂದ ₹50,000 ದವರೆಗೆ ಸಂಬಳ

ತಂದೆ, ಮಗನಿಗೆ ಜೀವಾವಧಿ ಶಿಕ್ಷೆ, ದಂಡ ವಿಧಿಸಿದ ಶಿವಮೊಗ್ಗ ಕೋರ್ಟ್‌, ಯಾಕೆ?

ತಂದೆ, ಮಗನಿಗೆ ಜೀವಾವಧಿ ಶಿಕ್ಷೆ, ದಂಡ ವಿಧಿಸಿದ ಶಿವಮೊಗ್ಗ ಕೋರ್ಟ್‌, ಯಾಕೆ?

ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್? – 17 ಮಾರ್ಚ್‌ 2026 – ಅಡಿಕೆ ಧಾರಣೆ

ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್? – 17 ಮಾರ್ಚ್‌ 2026 – ಅಡಿಕೆ ಧಾರಣೆ

ಶಿವಮೊಗ್ಗ ಡಿ.ಸಿ ಎದುರು ಮೈದಾನಕ್ಕೆ ಬ್ಯಾರಿಕೇಡ್‌, ಹಿಂದೂ ಸಂಘಟನೆಗಳು ಗರಂ, ಕಾರಣವೇನು?

ಶಿವಮೊಗ್ಗ ಡಿ.ಸಿ ಎದುರು ಮೈದಾನಕ್ಕೆ ಬ್ಯಾರಿಕೇಡ್‌, ಹಿಂದೂ ಸಂಘಟನೆಗಳು ಗರಂ, ಕಾರಣವೇನು?

ಬೆಳಗ್ಗೆ ಲೇಔಟ್‌ಗೆ ಬಂದ ಲೆಕ್ಚರರ್‌ಗೆ ಕಾದಿತ್ತು ಆಘಾತ, ರಾತ್ರಿ 11.15ರ CCTV ದೃಶ್ಯ ಕಂಡು ಶಾಕ್‌

ಬೆಳಗ್ಗೆ ಲೇಔಟ್‌ಗೆ ಬಂದ ಲೆಕ್ಚರರ್‌ಗೆ ಕಾದಿತ್ತು ಆಘಾತ, ರಾತ್ರಿ 11.15ರ CCTV ದೃಶ್ಯ ಕಂಡು ಶಾಕ್‌

ಶಿವಮೊಗ್ಗ TO ಬೆಂಗಳೂರು ಇನ್ನಷ್ಟು ವೇಗ, ದ್ವಿಪಥ ಯೋಜನೆಗೆ ಒತ್ತಾಯ

ಶಿವಮೊಗ್ಗ TO ಬೆಂಗಳೂರು ಇನ್ನಷ್ಟು ವೇಗ, ದ್ವಿಪಥ ಯೋಜನೆಗೆ ಒತ್ತಾಯ

ಜಮೀನಿಗೆ ನೀರು ಹರಿಸಲು ಹೋಗಿದ್ದ ವ್ಯಕ್ತಿಗೆ ಕಾದಿತ್ತು ಸಾವು, ಆಗಿದ್ದೇನು?

ಜಮೀನಿಗೆ ನೀರು ಹರಿಸಲು ಹೋಗಿದ್ದ ವ್ಯಕ್ತಿಗೆ ಕಾದಿತ್ತು ಸಾವು, ಆಗಿದ್ದೇನು?

ನಾಳೆಯಿಂದ SSLC ಪರೀಕ್ಷೆ, ಹೇಗಿದೆ ಸಿದ್ಧತೆ? ಯಾವ್ಯಾವ ತಾಲೂಕಿನಲ್ಲಿ ಎಷ್ಟು ಪರೀಕ್ಷಾ ಕೇಂದ್ರಗಳಿವೆ?

ನಾಳೆಯಿಂದ SSLC ಪರೀಕ್ಷೆ, ಹೇಗಿದೆ ಸಿದ್ಧತೆ? ಯಾವ್ಯಾವ ತಾಲೂಕಿನಲ್ಲಿ ಎಷ್ಟು ಪರೀಕ್ಷಾ ಕೇಂದ್ರಗಳಿವೆ?

Leave a Comment