ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 21 NOVEMBER 2023
SHIMOGA : ಹೈದರಾಬಾದ್, ತಿರುಪತಿ ಮತ್ತು ಗೋವಾ ವಿಮಾನಯಾನ ಸೇವೆ ಆರಂಭವಾಗುತ್ತಿದ್ದಂತೆ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿದೆ. ಇವತ್ತು 400ಕ್ಕೂ ಹೆಚ್ಚು ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ಬಂದು ಹೋಗಿದ್ದಾರೆ.
ಸುತ್ತಮುತ್ತಲ ಜಿಲ್ಲೆಗಳಿಂದ ಜನ
ಇಂಡಿಗೋ ಸಂಸ್ಥೆ ಈವರೆಗೂ ಶಿವಮೊಗ್ಗ ಮತ್ತು ಬೆಂಗಳೂರು ಮಾರ್ಗದಲ್ಲಿ ವಿಮಾನಯಾನ ಸೇವೆ ಒದಗಿಸುತ್ತಿತ್ತು. ಮಂಗಳವಾರದಿಂದ ಸ್ಟಾರ್ ಏರ್ ಸಂಸ್ಥೆ ಶಿವಮೊಗ್ಗದಿಂದ ಹೈದರಾಬಾದ್, ತಿರುಪತಿ ಮತ್ತು ಗೋವಾಗೆ ಹಾರಾಟ ಆರಂಭಿಸಿದೆ. ಶಿವಮೊಗ್ಗ ಸೇರಿದಂತೆ ಸುತ್ತಮುತ್ತಲ ಜಿಲ್ಲೆಯ ಜನರು ಇದೆ ವಿಮಾನ ನಿಲ್ದಾಣಕ್ಕೆ ಆಗಮಿಸಿ ವಿಮಾಯಾನ ಕೈಗೊಳ್ಳುತ್ತಿದ್ದಾರೆ.

400ಕ್ಕೂ ಹೆಚ್ಚು ಪ್ರಯಾಣಿಕರು
ಇಂದು 400ಕ್ಕೂ ಹೆಚ್ಚು ಪ್ರಯಾಣಿಕರು ಶಿವಮೊಗ್ಗ ವಿಮಾನ ನಿಲ್ದಾಣದ ಮೂಲಕ ವಿವಿಧೆಡೆಗೆ ತೆರಳಿದ್ದಾರೆ.
ಇದನ್ನೂ ಓದಿ – ಶಿವಮೊಗ್ಗದಿಂದ ತಿರುಪತಿ, ಗೋವಾ, ಹೈದರಾಬಾದ್ ವಿಮಾನಯಾನ ಶುರು, ಹೇಗಿತ್ತು ಮೊದಲ ದಿನ?
‘ಇವತ್ತು ಶಿವಮೊಗ್ಗದಿಂದ ತಿರುಪತಿಗೆ 63 ಪ್ರಯಾಣಿಕರು, ಬೆಂಗಳೂರಿಗೆ 63, ಹೈದರಾಬಾದ್‌ಗೆ 45, ಗೋವಾಗೆ 55 ಮಂದಿ ಪ್ರಯಾಣಿಸಿದ್ದಾರೆ. ತಿರುಪತಿಯಿಂದ 25 ಮಂದಿ, ಗೋವಾದಿಂದ 33, ಹೈದರಾಬಾದ್‌ನಿಂದ 43 ಮಂದಿ ಆಗಮಿಸಿದ್ದಾರೆʼ ಎಂದು ಸಂಸದ ರಾಘವೇಂದ್ರ ತಿಳಿಸಿದರು.
ವಿವಿಧೆಡೆಗೆ ವಿಮಾನಯಾನ ಸೇವೆ ಆರಂಭವಾಗುತ್ತಿದ್ದಂತೆ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗುತ್ತಿದೆ.



LATEST NEWS
- ಶಿವಮೊಗ್ಗದಲ್ಲಿ ಶೆಟ್ಟರ ಸಂತೆ, ಮೊದಲ ದಿನವೇ ಭರ್ಜರಿ ರೆಸ್ಪಾನ್ಸ್, ಏನೇನೆಲ್ಲ ಸ್ಟಾಲ್ಗಳಿವೆ?

- ಸರ್ಕಾರಿ ಅಧಿಕಾರಿಗೆ ಜೈಲು ಶಿಕ್ಷೆ, ಏನಿದು ಪ್ರಕರಣ?

- ಶಿವಮೊಗ್ಗ ಮಾರುಕಟ್ಟೆಯಲ್ಲಿ ಇವತ್ತು ಎಷ್ಟಿದೆ ಅಡಿಕೆ ರೇಟ್? – ಇಂದಿನ ಅಡಿಕೆ ಧಾರಣೆ

- ಹೊಟೇಲ್ ಮಾಲೀಕನಿಂದ ಕೊಲೆ, ಕಾರಿನಲ್ಲಿ ಮೃತದೇಹ ಸಾಗಿಸುವಾಗ ಪೊಲೀಸ್ ಬಲೆಗೆ

- Acting Registrar Appointed for Kuvempu University

About The Editor
ನಿತಿನ್ ಆರ್.ಕೈದೊಟ್ಲು
















