ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 8 AUGUST 2023
SHIMOGA : ದೇಹಕ್ಕಾದ ಗಾಯ ಸುಮ್ಮನಿದ್ದರೆ ಮಾಯುತ್ತವೆ. ದೇಶಕ್ಕಾದ ಗಾಯ ಸುಮ್ಮನಿದ್ದರೆ ಬೆಳೆಯುತ್ತವೆ. ಇದಕ್ಕೆ ರಾಷ್ಟ್ರಕವಿ ಕುವೆಂಪು ಅವರ ನಿರ್ದಿಗಂತ ಆಶಯವೆ ಮದ್ದು ಎಂದು ನಟ (Actor) ಪ್ರಕಾಶ್ ರಾಜ್ ಹೇಳಿದರು.
ನಗರದ ಕಮಲಾ ನೆಹರು ಕಾಲೇಜಿನಲ್ಲಿ ಬಹುಮುಖಿ ಸಂಸ್ಥೆ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ನಟ (Actor) ಪ್ರಕಾಶ್ ರಾಜ್ ಮಾತನಾಡಿದರು. ಈ ವೇಳೆ ಅವರು ಏನೆಲ್ಲ ಹೇಳಿದರು? ಇಲ್ಲಿದೆ ಪ್ರಮುಖಾಂಶ.
ದೇಶದಲ್ಲಿ ಬದುಕಬೇಕಾದವರು, ಭವಿಷ್ಯ ರೂಪಿಸಿಕೊಳ್ಳಬೇಕಾದವರು ಮಕ್ಕಳು. ಯುದ್ದ ಮತ್ತು ಕೋಮು ಹಿಂಸೆಯಿಂದ ಅವರ ಮನಸಿನ ಮೇಲಾಗುತ್ತಿರುವ ಪರಿಣಾಮ ತಪ್ಪಿಸಿ, ಆರೋಗ್ಯಕರ ನಾಡು ಕಟ್ಟಲು ‘ನಿರ್ದಿಗಂತ’ ರಂಗ ತಂಡ ಕಟ್ಟಿದ್ದೇನೆ. ರಾಜ್ಯದ ವಿವಿಧೆಡೆಯ 20 ಮಕ್ಕಳನ್ನು ಈ ತಂಡಕ್ಕೆ ಆಯ್ಕೆ ಮಾಡಿದ್ದೇವೆ.
ದೇಹಕ್ಕಾದ ಗಾಯ ಸುಮ್ಮನಿದ್ದರೆ ಮಾಯುತ್ತವೆ. ದೇಶಕ್ಕಾದ ಗಾಯ ಸುಮ್ಮನಿದ್ದರೆ ಬೆಳೆಯುತ್ತವೆ. ನಾವು ಇವತ್ತು ಈ ಗಾಯಗಳ ಜೊತೆಗೆ ಬದುಕಬೇಕಾಗಿದೆ. ಇದು ಪಾಠ. ಇನ್ಮುಂದೆ ಇಂತಹ ಗಾಯಗಳಾಗದ ಹಾಗೆ ನೋಡಿಕೊಳ್ಳಬೇಕು. ಇದು ಅಸಹಾಯಕತೆಯಾದರೂ ಇದರಿಂದ ಹೊರಗೆ ಬರಲು ಪ್ರಯತ್ನ ಪಡಬೇಕಿದೆ.
2024ರಲ್ಲಿ ಚುನಾವಣೆಗೆ ನಿಲ್ಲುವುದಿಲ್ಲ. ನನ್ನ ರಾಜಕಾರಣ ನಾನು ಕಂಡುಕೊಂಡಿದ್ದೇನೆ. ಹಾಗಾಗಿ ಮತ್ತೆ ಚುನಾವಣೆಗೆ ನಿಲ್ಲುವ ಆಶಯವಿಲ್ಲ. 2019ರಲ್ಲಿ ಗೆದ್ದೇ ಗೆಲ್ಲುತ್ತೇನೆ ಎಂಬ ಭಾವನೆಯಿಂದ ನಾನು ಚುನಾವಣೆಗೆ ಸ್ಪರ್ಧಿಸಿರಲಿಲ್ಲ. ಹಾಗಿದ್ದರೆ ಯಾವುದಾದರೂ ರಾಜಕೀಯ ಪಕ್ಷದಿಂದ ಸ್ಪರ್ಧಿಸುತ್ತಿದ್ದೆ. ಪ್ರಮುಖ ರಾಜಕೀಯ ಪಕ್ಷಗಳಿಂದಲು ತಮಗೆ ಆಹ್ವಾನವಿತ್ತು.
ಇದನ್ನೂ ಓದಿ – ಗುಡ್ಡೇಕಲ್ ಜಾತ್ರೆ, ಶಿವಮೊಗ್ಗದಲ್ಲಿ ಒಂದು ದಿನ ಮಾರ್ಗ ಬದಲಾವಣೆ, ಯಾವ್ಯಾವ ವಾಹನ ಯಾವ ರೂಟ್ನಲ್ಲಿ ಓಡಾಡಬೇಕು?
ಬಿಗಿ ಬಂದೋಬಸ್ತ್
ನಟ ಪ್ರಕಾಶ್ ರಾಜ್ ಅವರ ಸಂವಾದ ಕಾರ್ಯಕ್ರಮದ ಹಿನ್ನೆಲೆ ಕಮಲಾ ನೆಹರು ಕಾಲೇಜು ಮುಂಭಾಗ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜನೆ ಮಾಡಲಾಗಿತ್ತು. ನಗರದ ನಾಗರಿಕರು, ಪ್ರಮುಖರು ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಕಮಲಾ ನೆಹರು ಕಾಲೇಜು ಪ್ರಾಂಶುಪಾಲ ಡಾ. ನಾಗಭೂಷಣ್, ಕೆ.ಎಲ್.ಅಶೋಕ್ ವೇದಿಕೆಯಲ್ಲಿದ್ದರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422