ಶಿವಮೊಗ್ಗದಲ್ಲಿ RSS ಪಥ ಸಂಚಲನ, ಹೇಗಿದೆ ಅಲಂಕಾರ? ಎಲ್ಲೆಲ್ಲಿ ಸಾಗುತ್ತೆ ಮೆರವಣಿಗೆ?

ಸೈಟ್‌ ಮಾರಾಟಕ್ಕಿದೆ

ಶಿವಮೊಗ್ಗದ ಬಿದಿರೆಯಲ್ಲಿ ಸೈಟ್‌ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559

ಶಿವಮೊಗ್ಗದಲ್ಲಿ ಬಿ.ಇಡಿ ಕೋರ್ಸ್‌ಗೆ ಪ್ರವೇಶಾತಿ ಆರಂಭ

⇒ ಪೂರ್ತಿ ಡಿಟೇಲ್ಸ್‌ಗೆ ಇಲ್ಲಿ ಕ್ಲಿಕ್‌ ಮಾಡಿ

ಶಿವಮೊಗ್ಗ: ಆರ್‌ಎಸ್‌ಎಸ್‌ ಸಂಘಟನೆಯ ಶತಮಾನೋತ್ಸವ ಮತ್ತು ವಿಜಯದಶಮಿ ಹಿನ್ನೆಲೆ ಶಿವಮೊಗ್ಗದಲ್ಲಿ ಅ.12ರಂದು ಪಥ ಸಂಚಲನ (Route March) ಆಯೋಜಿಸಲಾಗಿದೆ. ಇದಕ್ಕಾಗಿ ನಗರದಲ್ಲಿ ಕೊನೆಯ ಹಂತದ ಸಿದ್ಧತೆ ನಡೆಯುತ್ತಿದೆ.

ಭಾನುವಾರ ಸಂಜೆ 4 ಗಂಟೆಗೆ ಕೋಟೆ ಮಾರಿಕಾಂಬ ದೇವಸ್ಥಾನದ ಮುಂಭಾಗದಿಂದ ಪಥ ಸಂಚಲನ ಆರಂಭವಾಗಲಿದೆ. ರಾಮಣ್ಣ ಶ್ರೇಷ್ಠಿ ಪಾರ್ಕ್‌, ಗಾಂಧಿ ಬಜಾರ್‌, ಶಿವಪ್ಪನಾಯಕ ಸರ್ಕಲ್‌, ನೆಹರು ರಸ್ತೆ, ದುರ್ಗಿಗುಡಿ, ಜೈಲ್‌ ಸರ್ಕಲ್‌, ಲಕ್ಷ್ಮೀ ಟಾಕೀಸ್‌ ಮೂಲಕ ಫ್ರೀಡಂ ಪಾರ್ಕ್‌ ತಲುಪಲಿದೆ.

ಆರ್‌ಎಸ್‌ಎಸ್‌ ಪಥ ಸಂಚಲನ ಹಿನ್ನೆಲೆ ನಗರದ ವಿವಿಧೆಡೆ ಅಲಂಕಾರ ಮಾಡಲಾಗಿದೆ. ಮೆರವಣಿಗೆ ಸಾಗುವ ಮಾರ್ಗದುದ್ದಕ್ಕು ಅಲಂಕಾರಕ್ಕೆ ಹೆಚ್ಚು ಒತ್ತು ನೀಡಲಾಗಿದೆ.

111025-all-set-for-RSS-route-march-in-Shimoga.webp

ಮೂರರಿಂದ ನಾಲ್ಕು ಸಾವಿರ ಯುವಕರು ಪಥ ಸಂಚಲನದಲ್ಲಿ ಪಾಲ್ಗೊಳ್ಳಲಿದ್ದಾರೆ. ಎಲ್ಲರು ಗಣವೇಶದಲ್ಲಿರುತ್ತಾರೆ. ಇದಕ್ಕಾಗಿ ಇಡೀ ನಗರ ಅಲಂಕೃತವಾಗಿದೆ. ಪುಷ್ಪವೃಷ್ಟಿಗೆ ಸುಮಾರು 3 ಕ್ವಿಂಟಾಲ್‌ಗಿಂತಲು ಹೆಚ್ಚು ಹೂವು ತರಿಸಲಾಗುತ್ತಿದೆ. ವೈಭವಯುತ ಪಥಸಂಚಲನ ನಡೆಯಲಿದೆ. ಬಳಿಕ ಫ್ರೀಡಂ ಪಾರ್ಕ್‌ನಲ್ಲಿ ಬೌದ್ಧಿಕ್‌ ನಡೆಯಲಿದೆ.

  • ಎಸ್‌.ಎನ್.ಚನ್ನಬಸಪ್ಪ, ಶಾಸಕ

RED-LINE-

ಇದನ್ನೂ ಓದಿ » ಬಿಸ್ಕೇಟ್‌ ಪ್ಯಾಕೆಟ್‌ನಲ್ಲಿ ಗಾಂಜಾ, ಸಿಗರೇಟುಗಳು, ಶಿವಮೊಗ್ಗದಲ್ಲಿ ಸಿಕ್ಕಿಬಿದ್ದರು ಇಬ್ಬರು, ಆಗಿದ್ದೇನು?

Route March

Leave a Comment