ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 7 ಅಕ್ಟೋಬರ್ 2020
ಕರೋನ ಹಿನ್ನೆಲೆ ಶಿವಮೊಗ್ಗದಲ್ಲಿಯು ಈ ಬಾರಿ ನಾಡಹಬ್ಬವನ್ನು ಸರಳ ಆಚರಣೆಗೆ ತೀರ್ಮಾನಿಸಲಾಗಿದೆ. ದಸರಾ ವೈಭವ ಮಾತ್ರ ಎಂದಿನಂತೆ ಇರಲಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೇಯರ್ ಸುವರ್ಣಾ ಶಂಕರ್, ಅಕ್ಟೋಬರ್ 17ರಿಂದ ಶಿವಮೊಗ್ಗದಲ್ಲಿ ನಾಡಹಬ್ಬ ಆರಂಭವಾಗಲಿದೆ. ಆ ದಿನ ಕೋಟೆ ರಸ್ತೆಯ ಚಂಡಿಕಾ ದುರ್ಗಾ ಪರಮೇಶ್ವರಿ ದೇಗುಲದಲ್ಲಿ ನಾಡದೇವಿಯನ್ನು ಪಟ್ಟಕ್ಕೆ ಕೂರಿಸಿ, ಪೂಜೆ ಸಲ್ಲಿಸಿ, ದಸರಾ ಉದ್ಘಾಟಿಸಲಾಗುತ್ತದೆ ಎಂದು ತಿಳಿಸಿದರು.
ನಾಡಹಬ್ಬವನ್ನು ಉದ್ಘಾಟಿಸೋದು ಯಾರು?
ಈ ಬಾರಿ ನಾಡಹಬ್ಬದ ಉದ್ಘಾಟನೆಯನ್ನು ವಿಶೇಷವಾಗಿ ನೆರವೇರಿಸಲು ಪಾಲಿಕೆ ಯೋಜಿಸಿದೆ. ಕರೋನ ವಾರಿಯರ್ಸ್ ಕಡೆಯಿಂದ ದಸರಾ ಉದ್ಘಾಟನೆ ಮಾಡಿಸಲಾಗುತ್ತದೆ ಎಂದು ಮೇಯರ್ ಸುವರ್ಣಾ ಶಂಕರ್ ತಿಳಿಸಿದ್ದಾರೆ. ಇದರ ವಿಡಿಯೋ ರಿಪೋರ್ಟ್ ಇಲ್ಲಿದೆ.
VIDEO REPORT
ಈ ಬಾರಿ ಎರಡೇ ಸಮಿತಿ
ಸರಳ ದಸರಾ ಆಚರಣೆ ಹಿನ್ನೆಲೆ ಈ ಬಾರಿ ಎರಡು ಸಮಿತಿಗಳನ್ನಷ್ಟೇ ಮಾಡಲಾಗಿದೆ. ಸ್ವಾಗತ ಮತ್ತು ಉತ್ಸವ ಸಮಿತಿ, ಅಲಂಕಾರ ಸಮಿತಿಯನ್ನಷ್ಟೇ ಮಾಡಲಾಗಿದೆ. ಸ್ವಾಗತ ಮತ್ತು ಉತ್ಸವ ಸಮಿತಿಗೆ ಮೇಯರ್ ಅಧ್ಯಕ್ಷರಾಗಿದ್ದು, ಅಲಂಕಾರ ಸಮಿತಿಗೆ ವಿರೋಧ ಪಕ್ಷದ ನಾಯಕ ಹೆಚ್.ಸಿ.ಯೋಗೇಶ್ ಅಧ್ಯಕ್ಷರಾಗಿದ್ದಾರೆ.
ಮೆರವಣಿಗೆ ಇಲ್ಲ, ಬನ್ನಿ ಮಂಪಕ್ಕೆ ಜನರಿಲ್ಲ
ಕೋವಿಡ್ ನಿಯಮ ಪಾಲಿಸಬೇಕಿರುವ ಹಿನ್ನೆಲೆ, ವಿಜಯದಶಮಿಯಂದು ಮೆರವಣಿಗೆ ನಿಷೇಧಿಸಲಾಗಿದೆ. ಹಳೆ ಜೈಲು ಆವರಣದಲ್ಲಿ ಬನ್ನಿ ಮುಡಿಯುವ ಕಾರ್ಯಕ್ರಮ ನಡೆಯಲಿದೆ. ಮಹಾನಗರ ಪಾಲಿಕೆ ಸದಸ್ಯರು, ಅಧಿಕಾರಿಗಳಷ್ಟೇ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದಾಗಿದೆ. ಸಾರ್ವಜನಿಕರಿಗೆ ಪ್ರವೇಶ ಇರುವುದಿಲ್ಲ. ಸ್ಥಳೀಯ ವಾಹಿನಿಗಳು ಮತ್ತು ಸಾಮಾಜಿಕ ಜಾಲತಾಣದಲ್ಲಿ ನೇರ ಪ್ರಸಾರದ ವ್ಯವಸ್ಥೆ ಮಾಡಲಾಗುತ್ತದೆ.
ಉತ್ಸವ ಮೂರ್ತಿಗಳ ಬರುವಂತಿಲ್ಲ
ಪ್ರತಿ ವಿಜಯದಶಮಿಯ ಮೆರವಣಿಗೆಯಲ್ಲಿ ಶಿವಮೊಗ್ಗದ ಹಲವು ದೇಗುಲಗಳು ಉತ್ಸವ ಮೂರ್ತಿಗಳ ಮೆರವಣಿಗೆ ನಡೆಯುತ್ತಿತ್ತು. ಆದರೆ ಈ ಬಾರಿ ಮೆರವಣಿಗೆ ಇಲ್ಲ. ಆದರೆ ದೇಗುಲಗಳ ಅಲಂಕಾರಕ್ಕೆ ನಾಲ್ಕು ಸಾವಿರ ರೂ. ಸಹಾಯಧನ ಒದಗಿಸಲಾಗುತ್ತದೆ. ಮುಜರಾಯಿ ದೇಗುಲದ ಉತ್ಸವ ಮೂರ್ತಿಗಳು ಮಾತ್ರ ಬನ್ನಿ ಮುಡಿಯುವ ಸ್ಥಳಕ್ಕೆ ಬರಬಹುದಾಗಿದೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422