ಕುವೆಂಪು ರಂಗಮಂದಿರ ಮುಂದೆ ಬಿಗುವಿನ ವಾತಾವರಣ, MLA, ಕಮಿಷನರ್‌ ಮಧ್ಯೆ ಮಾತಿಗೆ ಮಾತು, ಕಾರಣವೇನು?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS, 7 DECEMBER 2024

ಶಿವಮೊಗ್ಗ : ಆಶ್ರಯ ಮನೆಗಳ ಫಲಾನುಭವಿಗಳ ಆಯ್ಕೆ ಕಾರ್ಯಕ್ರಮವನ್ನು ದಿಢೀರ್‌ ರದ್ದುಗೊಳಿಸಿದ್ದನ್ನು ಖಂಡಿಸಿ ಫಲಾನುಭವಿಗಳು ಮಹಾನಗರ ಪಾಲಿಕೆ ಆಯುಕ್ತರ ಕಾರಿಗೆ ಮುತ್ತಿಗೆ ಹಾಕಿದರು. ಈ ಸಂದರ್ಭ ಶಾಸಕ ಚನ್ನಬಸಪ್ಪ ಮತ್ತು ಮಹಾನಗರ ಪಾಲಿಕೆ ಆಯುಕ್ತೆ ಕವಿತಾ ಯೋಗಪ್ಪನವರ್‌ ಮಧ್ಯೆ ಮಾತಿನ ಚಕಮಕಿ (Altercation) ನಡೆಯಿತು.

ದಿಢೀರ್‌ ರದ್ದಾದ ಕಾರ್ಯಕ್ರಮ

ಗೋವಿಂದಾಪುರ ಮತ್ತು ಗೋಪಿಶೆಟ್ಟಿಕೊಪ್ಪದಲ್ಲಿ 638 ಆ‍ಶ್ರಯ ಮನೆಗಳ ಹಂಚಿಕೆಗೆ ಇವತ್ತು ಫಲಾನುಭವಿಗಳ ಆಯ್ಕೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕುವೆಂಪು ರಂಗಮಂದಿರದಲ್ಲಿ ಫಲಾನುಭವಿಗಳ ಆಯ್ಕೆ ನಡೆಯಬೇಕಿತ್ತು. ಆದರೆ ಕಾರ್ಯಕ್ರಮ ದಿಢೀರ್‌ ರದ್ದುಗೊಳಿಸಲಾಗಿದೆ. ಮನೆಗಳಿಗಾಗಿ ವರ್ಷಗಳಿಂದ ಕಾದಿದ್ದ ಫಲಾನುಭವಿಗಳು, ಪಾಲಿಕೆ ಅಧಿಕಾರಿಗಳ ನಡೆ ವಿರುದ್ಧ ಆಕ್ರೋಶಗೊಂಡರು.

MLA and Palike Commissioner Altercation over ashraya house

ಎಂಎಲ್‌ಎ ಕರೆ ಕಟ್‌ ಮಾಡಿದ ಕಮಿಷನರ್

ವಿಷಯ ತಿಳಿಯುತ್ತಿದ್ದಂತೆ ಶಾಸಕ ಎಸ್‌.ಎನ್.ಚನ್ನಬಸಪ್ಪ ಕುವೆಂಪು ರಂಗಮಂದಿರಕ್ಕೆ ದೌಡಾಯಿಸಿದರು. ಮಹಾನಗರ ಪಾಲಿಕೆ ಆಯುಕ್ತೆ ಕವಿತಾ ಯೋಗಪ್ಪನವರ್‌ ಅವರಿಗೆ ಶಾಸಕ ಚನ್ನಬಸಪ್ಪ ಕರೆ ಮಾಡಿದಾಗ ಹಾರಿಕೆ ಉತ್ತರ ನೀಡಿ, ಕರೆ ಕಟ್‌ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಆಕ್ರೋಶಗೊಂಡ ಶಾಸಕರು, ಕುವೆಂಪು ರಂಗಮಂದಿರದ ಮೆಟ್ಟಿಲುಗಳ ಮೇಲೆ ಫಲಾನುಭವಿಗಳ ಜೊತೆಗೆ ಪ್ರತಿಭಟನೆ ನಡೆಸಿದರು. ಜಿಲ್ಲಾಧಿಕಾರಿಗೆ ಕರೆ ಮಾಡಿ ಕಮಿಷನರ್‌ ವಿರುದ್ಧ ದೂರು ತಿಳಿಸಿದರು.

MLA and Palike Commissioner Altercation over ashraya house

‌ಕಮಿಷನರ್‌ ಕಾರಿಗೆ ಮುತ್ತಿಗೆ

ಕೆಲವು ಹೊತ್ತಿನ ಬಳಿಕ ಕಮಿಷನರ್‌ ಕವಿತಾ ಯೋಗಪ್ಪನವರ್‌ ಕುವೆಂಪು ರಂಗಮಂದಿರಕ್ಕೆ ಆಗಮಿಸಿದರು. ಈ ಸಂದರ್ಭ ಫಲಾನುಭವಿಗಳು ಪಾಲಿಕೆ ಆಯುಕ್ತರ ವಿರುದ್ಧ ಘೋಷಣೆ ಕೂಗಿದರು. ಶಾಸಕ ಚನ್ನಬಸಪ್ಪ ಮತ್ತು ಕಮಿಷನರ್‌ ಕವಿತಾ ಯೋಗಪ್ಪನವರ್‌ ಮಧ್ಯೆ ಮಾತಿನ ಚಕಮಕಿ ನಡೆಯಿತು. ಸ್ಥಳದಿಂದ ಕಮಿಷನರ್‌ ಹೊರಡುತ್ತಿದ್ದಂತೆ ಫಲಾನುಭವಿಗಳು ಆಕ್ರೋಶಗೊಂಡರು. ಕಮಿಷನರ್‌ ಕಾರಿಗೆ ಮುತ್ತಿಗೆ ಹಾಕಿದರು.

MLA and Palike Commissioner Altercation over ashraya house

ಬದಲಿ ಕಾರಿನಲ್ಲಿ ಕಚೇರಿಗೆ ಕಮಿಷನರ್‌

ಕಾರಿನ ಮುಂದೆ ಮಲಗಿದ ಫಲಾನುಭವಿಗಳು ಕಮಿಷನರ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕೋಟೆ ಠಾಣೆ ಪೊಲೀಸರು ಫಲಾನುಭವಿಗಳನ್ನು ಸಮಾಧಾನಪಡಿಸಿ ಕಾರಿಗೆ ದಾರಿ ಬಿಡಿಸಲು ಮಾಡಿದ ಪ್ರಯತ್ನ ವಿಫಲವಾಯಿತು. ಪರಿಸ್ಥಿತಿ ಕೈ ಮೀರಿದ ಹಿನ್ನೆಲೆ ಡಿಎಆರ್‌ನಿಂದ ಹೆಚ್ಚುವರಿ ಪೊಲೀಸರನ್ನು ಕರೆಯಿಸಿಲಾಯಿತು. ಆ ಬಳಿಕ ಕಾರು ಇಳಿದು ಸ್ವಲ್ಪ ದೂರದವರೆಗೆ ನಡೆದು ಹೋದ ಪಾಲಿಕೆ ಕಮಿಷನರ್‌ ಬದಲಿ ಕಾರಿನಲ್ಲಿ ಪಾಲಿಕೆ ಕಚೇರಿಗೆ ತೆರಳಿದರು.

MLA and Palike Commissioner Altercation over ashraya house

ಇದನ್ನೂ ಓದಿ » ಸರ್ಜಿ ಆಸ್ಪತ್ರೆ ಇನ್ಮುಂದೆ ಪೇಪರ್‌ ಲೆಸ್‌, ರೋಗಿಗಳಿಗೆ ಅನುಕೂಲವೇನು?

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ

ಈಗಲೇ ಕರೆ ಮಾಡಿ
9972194422

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : December 7, 2024

ಆಗುಂಬೆ ಘಾಟಿಯಲ್ಲಿ ರಸ್ತೆಗೆ ಬಿದ್ದ ಮರ, ಕೆಲ ಹೊತ್ತು ಟ್ರಾಫಿಕ್‌ ಜಾಮ್

ಆಗುಂಬೆ ಘಾಟಿಯಲ್ಲಿ ರಸ್ತೆಗೆ ಬಿದ್ದ ಮರ, ಕೆಲ ಹೊತ್ತು ಟ್ರಾಫಿಕ್‌ ಜಾಮ್

ಕುಟುಂಬದ ಜೊತೆ ಊಟ ಮುಗಿಸಿ, ಮಾತನಾಡಿ ಮಲಗಲು ತೆರಳಿದ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ಕುಟುಂಬದ ಜೊತೆ ಊಟ ಮುಗಿಸಿ, ಮಾತನಾಡಿ ಮಲಗಲು ತೆರಳಿದ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ಶಿವಮೊಗ್ಗದಲ್ಲಿ ಶ್ರೀಕಾಂತಣ್ಣ ಕಪ್‌ ಕ್ರಿಕೆಟ್‌ ಪಂದ್ಯಾವಳಿ, ಟ್ರೋಫಿ, ಟೀ ಶರ್ಟ್‌ಗಳ ಅನಾವರಣ

ಶಿವಮೊಗ್ಗದಲ್ಲಿ ಶ್ರೀಕಾಂತಣ್ಣ ಕಪ್‌ ಕ್ರಿಕೆಟ್‌ ಪಂದ್ಯಾವಳಿ, ಟ್ರೋಫಿ, ಟೀ ಶರ್ಟ್‌ಗಳ ಅನಾವರಣ

ಸರ್ವೆಗೆ ಹೋದಾಗ ಇಂಜಿನಿಯರ್‌, ಸರ್ವೇಯರ್‌ ಮೇಲೆ ಕೋಲು, ಕಲ್ಲುಗಳಿಂದ ದಾಳಿ

ಸರ್ವೆಗೆ ಹೋದಾಗ ಇಂಜಿನಿಯರ್‌, ಸರ್ವೇಯರ್‌ ಮೇಲೆ ಕೋಲು, ಕಲ್ಲುಗಳಿಂದ ದಾಳಿ

ರಾಮಚಂದ್ರಾಪುರ ಮಠದಲ್ಲಿ ರಾಮೋತ್ಸವ, ಯಾವ್ಯಾವ ದಿನ ಏನೇನು ಕಾರ್ಯಕ್ರಮ ಇರಲಿದೆ?

ರಾಮಚಂದ್ರಾಪುರ ಮಠದಲ್ಲಿ ರಾಮೋತ್ಸವ, ಯಾವ್ಯಾವ ದಿನ ಏನೇನು ಕಾರ್ಯಕ್ರಮ ಇರಲಿದೆ?

ಶಿವಮೊಗ್ಗದ ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತ ಬೇಸಿಗೆ ಶಿಬಿರ, ಏನೇನೆಲ್ಲ ಇರುತ್ತೆ? ಎಷ್ಟು ವಿದ್ಯಾರ್ಥಿಗಳಿಗೆ ಅವಕಾಶವಿದೆ?

ಶಿವಮೊಗ್ಗದ ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತ ಬೇಸಿಗೆ ಶಿಬಿರ, ಏನೇನೆಲ್ಲ ಇರುತ್ತೆ? ಎಷ್ಟು ವಿದ್ಯಾರ್ಥಿಗಳಿಗೆ ಅವಕಾಶವಿದೆ?

ಮನೆಗೆ ತಾಯಿ ಬಂದಾಗ ತೆರೆದಿತ್ತು ಹಿಂಬಾಗಿಲು; ಮಗಳು ಬಂದಾಗ ಹೊರಬಿತ್ತು ಶಾಕಿಂಗ್‌ ವಿಚಾರ

ಮನೆಗೆ ತಾಯಿ ಬಂದಾಗ ತೆರೆದಿತ್ತು ಹಿಂಬಾಗಿಲು; ಮಗಳು ಬಂದಾಗ ಹೊರಬಿತ್ತು ಶಾಕಿಂಗ್‌ ವಿಚಾರ

ಭಾರಿ ಮಳೆಗೆ ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಹಾನಿ, ಎಲ್ಲೆಲ್ಲಿ ಏನೇನಾಗಿದೆ? ಇಲ್ಲಿದೆ ಫಟಾಫಟ್‌ ಅಪ್‌ಡೇಟ್‌

ಭಾರಿ ಮಳೆಗೆ ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಹಾನಿ, ಎಲ್ಲೆಲ್ಲಿ ಏನೇನಾಗಿದೆ? ಇಲ್ಲಿದೆ ಫಟಾಫಟ್‌ ಅಪ್‌ಡೇಟ್‌

ಆಟೋ ನಾಪತ್ತೆಯಾಗಿ ಒಂದು ವರ್ಷದ ಬಳಿಕ ದಾಖಲಾಯ್ತು ಕೇಸ್‌, ಏನಿದು ಪ್ರಕರಣ?

ಆಟೋ ನಾಪತ್ತೆಯಾಗಿ ಒಂದು ವರ್ಷದ ಬಳಿಕ ದಾಖಲಾಯ್ತು ಕೇಸ್‌, ಏನಿದು ಪ್ರಕರಣ?

ವಿದ್ಯಾರ್ಥಿನಿಯರಿಗೆ ಉಪನ್ಯಾಸಕನಿಂದ ಮೆಸೇಜ್‌ ಆರೋಪ, ಕಾಲೇಜು ಮುಂದೆ ಆಕ್ರೋಶ

ವಿದ್ಯಾರ್ಥಿನಿಯರಿಗೆ ಉಪನ್ಯಾಸಕನಿಂದ ಮೆಸೇಜ್‌ ಆರೋಪ, ಕಾಲೇಜು ಮುಂದೆ ಆಕ್ರೋಶ

Leave a Comment