SHIVAMOGGA LIVE NEWS | 1 NOVEMBER 2023
SHIMOGA : ಕರ್ನಾಟಕ ಜಾನಪದ ಪರಿಷತ್ತು, ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶಿವಮೊಗ್ಗ ಶಾಖಾ ಮಠದ ಸಹಯೋಗದಲ್ಲಿ ನವೆಂಬರ್ 21ರ ಸಂಜೆ ದೀಪಾವಳಿ ಪ್ರಯುಕ್ತ ಮಲೆನಾಡಿನ ವಿಶಿಷ್ಟ ಜನಪದ ಕಲೆ ಅಂಟಿಗೆ ಪಂಟಿಗೆ (Antige Pantige) ಕಲಾ ಪ್ರದರ್ಶನ ಕಾರ್ಯಕ್ರಮ ಆಯೋಜಿಸಲಾಗಿದೆ.
ಶಿವಮೊಗ್ಗ ಸಾಹಿತ್ಯ ಗ್ರಾಮದಲ್ಲಿ ನಡೆದ ಕಸಾಪ, ಕಸಾಸಾಂ ವೇದಿಕೆ, ಕಜಾಪ ಜಿಲ್ಲಾ ಸಮಿತಿ ಪದಾಧಿಕಾರಿಗಳ ಸಮಾಲೋಚನೆ ಸಭೆಯಲ್ಲಿ ನವೆಂಬರ್ ತಿಂಗಳ ಕಾರ್ಯಕ್ರಮಗಳ ಕುರಿತು ತೀರ್ಮಾನ ಮಾಡಲಾಯಿತು ಎಂದು ಜಿಲ್ಲಾ ಅಧ್ಯಕ್ಷ ಡಿ.ಮಂಜುನಾಥ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮನೆಗೆ ಕರಿಸಿಕೊಳ್ಳಲು ಅವಕಾಶ
ಶಿವಮೊಗ್ಗ ನಾಗರಿಕರು ಪ್ರತಿ ವರ್ಷದಂತೆ ಮಲೆನಾಡಿನಿಂದ ಆಗಮಿಸುವ ಜನಪದ ಕಲೆಯಾದ ಅಂಟಿಗೆ ಪಂಟಿಗೆ ಕಲಾ ತಂಡವನ್ನು ತಮ್ಮ ಮನೆಗೆ ಕರೆಸಿಕೊಳ್ಳುವ ಬಗ್ಗೆ ಡಿ. ಮಂಜುನಾಥ, ಮೊ.ಸಂಖ್ಯೆ 9449552795, ಭೈರಾಪುರ ಶಿವಪ್ಪಗೌಡ, ಮೊ.ಸಂಖ್ಯೆ 9449911652 ಸಂಪರ್ಕಿಸಲು ಕೋರಿದ್ದಾರೆ.
ಇದನ್ನೂ ಓದಿ – ಕರ್ನಾಟಕ ಸಂಘಕ್ಕೆ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಂಘ ಅಂದ್ರೆ ಬಸ್ ಸ್ಟಾಪ್ ಹೆಸರಲ್ಲ, ಇಲ್ಲಿದೆ 7 ಪ್ರಮುಖ ವಿಷಯ
ಇದನ್ನೂ ಓದಿ – ಸಾಗರದ ಚಿದಂಬರರಾವ್ ಜಂಬೆ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ, ಇಲ್ಲಿದೆ ಇವರ ಬಗ್ಗೆ ಗೊತ್ತಿರಬೇಕಾದ 4 ಸಂಗತಿ
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200